Thursday, April 16, 2026
Homeರಾಜ್ಯವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಗೋವುಗಳ ಕಳ್ಳ ಸಾಗಾಣಿಕೆ ವಿಚಾರ

ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಗೋವುಗಳ ಕಳ್ಳ ಸಾಗಾಣಿಕೆ ವಿಚಾರ

issue of cow smuggling resonated in the Assembly.

ಬೆಂಗಳೂರು ಜ.30- ಗೋವುಗಳ ಕಳ್ಳ ಸಾಗಾಣಿಕೆ ವಿಚಾರವಾಗಿ ವಿಧಾನಸಭೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಕಾಂಗ್ರೆಸ್‌‍ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಚರ್ಚೆ ನಡೆಸುವ ವೇಳೆಯಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಎಲ್ಲೋ ಒಂದಿಬ್ಬರು ಗೋವುಗಳ ಕಳ್ಳ ಸಾಗಾಣಿಕೆಯ ತಡೆಯುವ ನೆಪದಲ್ಲಿ ಹಿಂಸಾಚಾರ ನಡೆಸಿದ್ದಾರೆ. ಅಂತಹವರ ವಿರುದ್ಧ ನಮ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಈ ವೇಳೆ ಬೇಳೂರು ಗೋಪಾಲಕಷ್ಣ ಅವರು ಬಳಸಿದ ಪದಕ್ಕೆ ಬಿಜೆಪಿಯ ಶಾಸಕ ಶರಣು ಸಲಗಾರ ವಿರೋಧ ವ್ಯಕ್ತಪಡಿಸಿದರು. ಹಗಲು ರಾತ್ರಿ ಜೀವಪಣಕಿಟ್ಟು ಕಾರ್ಯಕರ್ತರು ಮಾತ ಸಮಾನವಾದ ಗೋವುಗಳನ್ನು ರಕ್ಷಣೆ ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಕಾಂಗ್ರೆಸ್ಸಿನ ಶಾಸಕರು ಬಳಸುತ್ತಿರುವ ಪದಗಳು ಸಮರ್ಥನೀಯವಲ್ಲ ಎಂದು ಹೇಳಿದರು.

ಈ ವೇಳೆ ಬಿಜೆಪಿಯ ಹಲವು ಸದಸ್ಯರು ಶರಣು ಸಲಗರ ಅವರೊಂದಿಗೆ ದ್ವನಿಗೂಡಿಸಿದರು. ಬೇಳೂರು ಗೋಪಾಲಕಷ್ಣ ಗೋ ಹತ್ಯೆ ನಿಷೇಧಕ್ಕೆ ನಮ ಸರ್ಕಾರವು ಬದ್ಧವಾಗಿದೆ. ನೀವು ಅಷ್ಟೇ ಗೋ ರಕ್ಷಣೆಯ ಗುತ್ತಿಗೆ ಪಡೆದಿಲ್ಲ ಎಂದು ಲೇವಡಿ ಮಾಡಿದರು. ಇದು ಕೆಲಕಾಲ ಮಾತಿನ ಚಕಮಕಿಗೆ ಕಾರಣವಾಯಿತು.

ಮುಂದುವರೆದ ಚರ್ಚೆಯಲ್ಲಿ ಬೇಳೂರು ಗೋಪಾಲಕಷ್ಣ, ಕಾಂಗ್ರೆಸ್‌‍ ಸರ್ಕಾರ ದ್ವೇಷ ಭಾಷಣ ನಿರ್ಬಂಧ, ಪ್ರತಿಬಂಧಕ ಕಾಯಿದೆ ಜಾರಿಗೊಳಿಸಿರುವುದು ಸಮರ್ಥನೀಯವಾಗಿದೆ. ಇಲ್ಲಿ ವ್ಯಕ್ತಿ ಅಥವಾ ಪಕ್ಷ ಮುಖ್ಯ ಅಲ್ಲ. ನಮ ಪಕ್ಷದವರೇ ಆದರೂ ದ್ವೇಷ ಭಾಷಣ ಮಾಡಿದರೆ ಪ್ರಕರಣ ದಾಖಲಿಸಲಾಗುತ್ತದೆ. ದ್ವೇಷ ಹರಡುವ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದರು.
ಕೇಂದ್ರ ಗಹ ಸಚಿವರ ವಿರುದ್ಧ ಸಚಿವ ಪ್ರಿಯಾಂಕ ಖರ್ಗೆ ಮಾತನಾಡುವಾಗ ದ್ವೇಷ ಬರುವಂತೆ ಪದಗಳನ್ನು ಬಳಸಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆಯೇ ಎಂದು ಬಿಜೆಪಿಯ ವೇದ ವ್ಯಾಸ ಕಾಮತ್‌ ಪ್ರಶ್ನಿಸಿದರು.

RELATED ARTICLES

Latest News