Homeರಾಜ್ಯಇದೇ ಮೊದಲ ಬಾರಿಗೆ ದಸರಾದಲ್ಲಿ ಕಂಬಳ ಓಟ : ಅ.18-19 ರಂದು ಚಾಲನೆ

ಇದೇ ಮೊದಲ ಬಾರಿಗೆ ದಸರಾದಲ್ಲಿ ಕಂಬಳ ಓಟ : ಅ.18-19 ರಂದು ಚಾಲನೆ

ಮೈಸೂರು, ಸೆ.28-ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದಲ್ಲಿ ವಿವಾದ ಮತ್ತು ವಿರೋಧದ ನಡುವೆಯೂ ಮೊದಲ ಬಾರಿಗೆ ಆಯೋಜಿಸುತ್ತಿರುವ ಕಂಬಳ ಓಟದ ದಿನಾಂಕವನ್ನು ಅಂತಿಮಗೊಳಿಸಲಾಗಿದೆ. ಅ. 18 ಮತ್ತು 19 ರಂದು ಎರಡು ದಿನಗಳ ಕಾಲ ಕಂಬಳ ಓಟ ನಡೆಯಲಿದೆ. ಅ.15 ರಂದು 5 ಜೋಡಿ ಕೋಣಗಳಿಂದ ಪ್ರಾಯೋಗಿಕ ಓಟ ನಡೆಸಲು ನಿರ್ಧರಿಸಲಾಗಿದೆ.

ಮೈಸೂರಿನ ರಿಂಗ್‌ ರಸ್ತೆಯ ಸಾತಗಳ್ಳಿ ಬಳಿ 20 ಎಕರೆ ವಿಸ್ತೀರ್ಣದಲ್ಲಿ 147 ಮೀಟರ್‌ ಉದ್ದದ ಕಂಬಳದ ಟ್ರ್ಯಾಕ್‌ ನಿರ್ಮಾಣ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಟ್ರ್ಯಾಕ್‌ಗೆ ವಿಜಯ-ದಶಮಿ ಕರೆ ಎಂದು ನಾಮಕರಣ ಮಾಡಲಾಗಿದೆ.

ಈ ಬಾರಿಯ ಕಂಬಳದಲ್ಲಿ ಕರಾವಳಿ ಭಾಗದಿಂದ ಸುಮಾರು 150 ರಿಂದ 160 ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ. ಈ ಸಂಬಂಧ ಮೈಸೂರು ಜಿಲ್ಲಾಡಳಿತದ ನಿಯೋಗವು ಕರಾವಳಿಗೆ ತೆರಳಿ ಕಂಬಳ ಸಮಿತಿ ಪದಾಧಿಕಾರಿಗಳು ಹಾಗೂ ಕೋಣಗಳ ಮಾಲೀಕರೊಂದಿಗೆ ಸಮಾಲೋಚನೆ ನಡೆಸಿ ಅಧಿಕತ ಆಹ್ವಾನ ನೀಡಿದೆ.

RELATED ARTICLES
spot_img

Latest News