ಬೆಂಗಳೂರು,ಮಾ.24- ಮುಂಬರುವ ಏ.1ರಿಂದ ರಾಷ್ಟ್ರೀಯ ಹೆದ್ದಾರಿಗಳ ಟೋಲ್ ದರ ಹೆಚ್ಚಳವಾಗಲಿದ್ದು, ಪ್ರಯಾಣ ವೆಚ್ಚ ಮತ್ತಷ್ಟು ಏರಿಕೆಯಾಗಲಿದೆ. ಇದರಿಂದಾಗಿ ವಾಹನ ಸವಾರರಿಗೆ ಮತ್ತೊಮೆ ಹೆಚ್ಚುವರಿ ಆರ್ಥಿಕ ಹೊರೆ ಬೀಳಲಿದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳ ಶುಲ್ಕವೂ ಹೆಚ್ಚಳವಾಗಲಿದೆ.ಇದರಂತೆ ಎನ್‌ಎಚ್-775: ಬೆಂಗಳೂರು – ಮೈಸೂರು, ಎನ್‌ಎಚ್-44- ಬೆಂಗಳೂರು- ಹೈದರಾಬಾದ್, ಎನ್‌ಎಚ್-48-ಬೆಂಗಳೂರು – ತುಮಕೂರು – ಬೆಳಗಾವಿ, ಎನ್‌ಎಚ್- 75- ಬೆಂಗಳೂರು- ಹಾಸನ – ಮಂಗಳೂರು, ಎನ್‌ಎಚ್-66- ಮಂಗಳೂರು- ಉಡುಪಿ- ಕುಂದಾಪುರ, ಎನ್‌ಎಚ್-50/52- ವಿಜಯಪುರ- ಚಿತ್ರದುರ್ಗ ಸೇರಿದಂತೆ ಒಟ್ಟು 9 ಹೆದ್ದಾರಿಗಳಲ್ಲಿನ ಟೋಲ್‌ಗಳ ದರ ಏರಿಕೆ ಆಗಲಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರತಿ ವರ್ಷದಂತೆ ಈ ಬಾರಿಯೂ ಟೋಲ್ ದರಗಳನ್ನು ಪರಿಷ್ಕರಿಸಿದ್ದು, 4%ನಿಂದ 5%ನಷ್ಟು (75 ರೂ.) ಏರಿಕೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ 2023ರಲ್ಲಿ ಪರಿಚಯಿಸಲಾದ ಶೇ.22ರಷ್ಟು ತೀವ್ರ ಏರಿಕೆಯನ್ನು ಸಾರ್ವಜನಿಕರ ವಿರೋಧದ ನಂತರ ಹಿಂಪಡೆಯಲಾಯಿತು. ಆದಾಗ್ಯೂ, ಅಧಿಕಾರಿಗಳು ಈಗಾಗಲೇ ಸುಮಾರು ಶೇ.5 ರಷ್ಟು ವಾರ್ಷಿಕ ಹೆಚ್ಚಳವನ್ನು ಘೋಷಿಸಿದ್ದರು, ಇದೀಗ ಮತ್ತೆ ಟೋಲ್ ದರ ಪರಿಷ್ಕರಣೆಯಾಗಿದೆ.
ಈ ದರ ಏರಿಕೆ ಕಾರು, ಬಸ್, ಲಾರಿ ಸೇರಿದಂತೆ ಎಲ್ಲಾ ವಾಹನಗಳಿಗೆ ಅನ್ವಯವಾಗಲಿದೆ. ಹೆದ್ದಾರಿಗಳ ನಿರ್ವಹಣೆ, ದುರಸ್ತಿ ಹಾಗೂ ಅಭಿವದ್ಧಿ ವೆಚ್ಚಗಳನ್ನು ಗಣನೆಗೆ ತೆಗೆದುಕೊಂಡು ಈ ಪರಿಷ್ಕರಣೆ ಮಾಡಲಾಗುತ್ತಿದೆ ಎಂದು ಎನ್‌ಹೆಚ್‌ಎಐ ಅಧಿಕಾರಿಗಳು ಹೇಳಿದ್ದಾರೆ.
ಈ ದರಗಳು ಶೇಕಡಾ 4ರಿಂದ 5ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಹೆದ್ದಾರಿಗಳ ನಿರ್ವಹಣೆ, ದುರಸ್ತಿ ಮತ್ತು ಅಭಿವದ್ಧಿ ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು ಈ ಪರಿಷ್ಕರಣೆ ಮಾಡಲಾಗುತ್ತದೆ.ಈ ಕ್ರಮದಿಂದ ದಿನನಿತ್ಯ ಹೆದ್ದಾರಿ ಬಳಸುವ ಪ್ರಯಾಣಿಕರು ಮತ್ತು ಸಾರಿಗೆ ವಲಯದವರಿಗೆ ಹೆಚ್ಚಿನ ಹೊರೆ ಬೀಳುವ ಸಾಧ್ಯತೆ ಇದೆ.
ಇದರ ಜೊತೆಗೆ ಫಾಸ್ಟ್‌ಟ್ಯಾಗ್ ಬಳಕೆದಾರರಿಗೂ ಕೆಲವು ಬದಲಾವಣೆಗಳು ಜಾರಿಗೆ ಬರುತ್ತಿವೆ. ಫಾಸ್ಟ್‌ಟ್ಯಾಗ್ ಖಾತೆಯಲ್ಲಿ ಹಣ ಕೊರತೆಯಿದ್ದರೆ ಅಥವಾ ತಾಂತ್ರಿಕ ಸಮಸ್ಯೆಯಿಂದ ಪಾವತಿ ವಿಫಲವಾದರೆ, ದ್ವಿಗುಣ ಟೋಲ್ ಶುಲ್ಕ ವಿಧಿಸುವ ನಿಯಮವನ್ನು ಕಟ್ಟುನಿಟ್ಟಾಗಿ ಅನುಸರಿಸಲು ನಿರ್ಧರಿಸಲಾಗಿದೆ. ಇದರಿಂದ ವಾಹನ ಸವಾರರು ತಮ ಖಾತೆಯಲ್ಲಿ ಸಮರ್ಪಕ ಹಣ ಇರಿಸುವುದು ಅತ್ಯಗತ್ಯವಾಗಿದೆ.
ಹೆದ್ದಾರಿಗಳಲ್ಲಿ ನಗದು ರಹಿತ ಪಾವತಿ ವ್ಯವಸ್ಥೆಯನ್ನು ಉತ್ತೇಜಿಸುವ ಉದ್ದೇಶದಿಂದ ಡಿಜಿಟಲ್ ಪಾವತಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಫಾಸ್ಟ್‌ಟ್ಯಾಗ್ ಹಾಗೂ ಯುಪಿಐ ಮೂಲಕ ಪಾವತಿ ಮಾಡುವ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದ್ದು, ಇದು ಟೋಲ್ ಪ್ಲಾಜಾಗಳಲ್ಲಿ ವಾಹನಗಳ ದಟ್ಟಣೆ ಕಡಿಮೆ ಮಾಡಲು ಸಹಾಯ ಮಾಡಲಿದೆ.
ಕರ್ನಾಟಕದಲ್ಲಿ ಬೆಂಗಳೂರು-ಮೈಸೂರು ಎಕ್‌್ಸಪ್ರೆಸ್‌ವೇ ಸೇರಿದಂತೆ 8 ಇತರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಈ ಏರಿಕೆಯ ಪರಿಣಾಮ ಬೀರಲಿದೆ. ಬೆಂಗಳೂರು-ಮೈಸೂರು ಎಕ್‌್ಸಪ್ರೆಸ್‌ವೇಯಲ್ಲಿ ಟೋಲ್ ಸಂಗ್ರಹ ಆರಂಭವಾದ 2023ರ ಏ.1ರಿಂದ ಇದು ನಾಲ್ಕನೇ ಬಾರಿಗೆ ದರ ಏರಿಕೆಯಾಗುತ್ತಿದೆ. ಹಿಂದೆ 2023ರ ಜೂನ್‌ನಲ್ಲಿ ಘೋಷಿಸಲಾದ 22% ಏರಿಕೆಯನ್ನು ಜನರ ವಿರೋಧದಿಂದ ಹಿಂಪಡೆಯಲಾಗಿತ್ತು. ಆದರೆ ವಾರ್ಷಿಕವಾಗಿ ಸುಮಾರು 5% ಏರಿಕೆಯನ್ನು ಮುಂದುವರೆಸಲಾಗುತ್ತಿದೆ.
