Homeರಾಜ್ಯಕೆಇಎ ಅಕ್ರಮ : ಶಂಕರ್‌ ಬನ್ನೂರು ಪರೀಕ್ಷೆ ಬರೆದ ಕೇಂದ್ರದ ಸಿಸಿಟಿವಿ ದೃಶ್ಯ ಬಿಡುಗಡೆಗೆ ಆಗ್ರಹ

ಕೆಇಎ ಅಕ್ರಮ : ಶಂಕರ್‌ ಬನ್ನೂರು ಪರೀಕ್ಷೆ ಬರೆದ ಕೇಂದ್ರದ ಸಿಸಿಟಿವಿ ದೃಶ್ಯ ಬಿಡುಗಡೆಗೆ ಆಗ್ರಹ

ಬೆಂಗಳೂರು, ನ.12- ಕರ್ನಾಟಕ ಪರೀಕ್ಷಾ ಪ್ರಾಧಿಕಾರ-ಕೆಇಎ ವಿರುದ್ಧ ಮತ್ತೆ ಕಿಡಿಕಾರಿದ ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ (ಕೆಎಸ್‌‍ವಿಎಸ್‌‍), ವಿಎಒ ಪರೀಕ್ಷೆಯಲ್ಲಿ ಶಂಕರ್‌ ಬನ್ನೂರು ಅವರು ಪರೀಕ್ಷೆ ಬರೆದ ಕೇಂದ್ರದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವಂತೆ ಆಗ್ರಹಿಸಿದೆ.

ಪರೀಕ್ಷಾ ಕೇಂದ್ರದ ಮತ್ತೊಬ್ಬ ವಿದ್ಯಾರ್ಥಿಯ ಒಎಂಆರ್‌ ಉತ್ತರ ಪತ್ರಿಕೆಯನ್ನೂ ಸಾಕ್ಷಿಯಾಗಿ ನೀಡಲು ಸಿದ್ಧವಿರುವುದಾಗಿ ತಿಳಿಸಿರುವ ಸಂಘಟನೆ, ಈ ಪ್ರಕರಣದಲ್ಲಿ ಯಾವ ಸತ್ಯವನ್ನು ಮುಚ್ಚಿಡಲು ಪ್ರಯತ್ನಿಸಲಾಗುತ್ತಿದೆ ಎಂದು ಪ್ರಶ್ನಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಕೆಎಸ್‌‍ವಿಎಸ್‌‍, ಶಂಕರ್‌ ಬನ್ನೂರು ಪರೀಕ್ಷೆ ಬರೆದಿದ್ದ ಪರೀಕ್ಷಾ ಕೇಂದ್ರದ ವಿದ್ಯಾರ್ಥಿಯೊಬ್ಬರ ಬಳಿ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಹೇಳಿಕೆಯಲ್ಲಿ ಸತ್ಯಾಂಶವಿದೆ ಎಂದು ನಮಗೆ ಅನಿಸುತ್ತಿದ್ದು, ಅಗತ್ಯವಿದ್ದರೆ ಎಲ್ಲಿಯಾದರೂ ಬಂದು ಸಾಕ್ಷಿ ಹೇಳಲು ಸಿದ್ಧನಿದ್ದೇನೆ ಎಂದು ವಿದ್ಯಾರ್ಥಿ ತಿಳಿಸಿದ್ದಾರೆ.

ಆ ವಿದ್ಯಾರ್ಥಿಯು ಒಎಂಆರ್‌ ಉತ್ತರ ಪತ್ರಿಕೆಯನ್ನೂ ನಾವು ನೀಡುತ್ತೇವೆ ಎಂದು ಹೇಳಿದ್ದಾರೆ. ನಾವು ಕೂಡ ವಿದ್ಯಾವಂತರೇ. ನಮನ್ನು ಸುಲಭವಾಗಿ ದಾರಿ ತಪ್ಪಿಸಲು ಸಾಧ್ಯವಿಲ್ಲ. ಯೂಟ್ಯೂಬ್‌ನಲ್ಲಿ ಬಂದು ನಮನ್ನು ನಂಬಿ ಎಂದು ಹೇಳಿದ ಮಾತ್ರಕ್ಕೆ ವಿದ್ಯಾರ್ಥಿಗಳು ಎಲ್ಲವನ್ನೂ ನಂಬುವುದಿಲ್ಲ. ಸತ್ಯವನ್ನು ಬಹಳ ದಿನಗಳ ಕಾಲ ಮುಚ್ಚಿಡಲು ಸಾಧ್ಯವಿಲ್ಲ ಎಂದು ಕೆಇಎ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.

ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಅರಿತಿರುವ ವಿದ್ಯಾರ್ಥಿಗಳು ನಾವು. ಪ್ರಶ್ನಿಸದೆ ಯಾವುದನ್ನೂ ಒಪ್ಪಿಕೊಳ್ಳುವವರಲ್ಲ. ಭ್ರಷ್ಟಾಚಾರ ಮುಕ್ತ ಮತ್ತು ಪಾರದರ್ಶಕ ನೇಮಕಾತಿ ವ್ಯವಸ್ಥೆ ನಿರ್ಮಾಣವಾಗಬೇಕು ಎಂಬ ಉದ್ದೇಶದಿಂದ ಹೋರಾಟ ನಡೆಸುತ್ತಿದ್ದೇವೆ ಎಂದು ಸಂಘಟನೆ ತಿಳಿಸಿದೆ.

ಪರೀಕ್ಷಾ ಕೇಂದ್ರಗಳ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವಂತೆ ಹಲವು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಿದ್ದರೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೌನ ವಹಿಸಿರುವುದೇಕೆ? ಎಂದು ಪ್ರಶ್ನಿಸಿದೆ. ನಮ ಪ್ರಶ್ನೆಗಳಿಗೆ ಉತ್ತರ ನೀಡದೆ ನಿರ್ಲಕ್ಷಿಸಿದರೆ ಸುಮನೆ ಕೂರುವುದಿಲ್ಲ ಎಂದೂ ಎಚ್ಚರಿಸಿದೆ.

ಇದು ಲಕ್ಷಾಂತರ ಉದ್ಯೋಗಾಕಾಂಕ್ಷಿ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆಯಾಗಿದೆ. ವರ್ಷಗಳ ಪರಿಶ್ರಮದ ಬಳಿಕ ನಡೆಯುವ ನೇಮಕಾತಿ ಪ್ರಕ್ರಿಯೆ ಯಾವುದೇ ಅಕ್ರಮ ಅಥವಾ ಭ್ರಷ್ಟಾಚಾರಕ್ಕೆ ಬಲಿಯಾಗಲು ಬಿಡುವುದಿಲ್ಲ. ಆದ್ದರಿಂದ ಪರೀಕ್ಷಾ ಕೇಂದ್ರದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು ಮತ್ತು ಪಾರದರ್ಶಕ ತನಿಖೆಗೆ ಸಹಕರಿಸಬೇಕು ಎಂಬುದು ನಮ ಪ್ರಮುಖ ಬೇಡಿಕೆಯಾಗಿದೆ ಎಂದು ಕೆಎಸ್‌‍ವಿಎಸ್‌‍ ಆಗ್ರಹಿಸಿದೆ.
ಇಲ್ಲವಾದಲ್ಲಿ ನ್ಯಾಯಕ್ಕಾಗಿ ಬೃಹತ್‌ ವಿದ್ಯಾರ್ಥಿ ಸಮೂಹದ ಪ್ರಜಾಸತ್ತಾತಕ ಹೋರಾಟವನ್ನು ಎದುರಿಸಲು ಸಿದ್ಧರಾಗಬೇಕು ಎಂದು ಕರ್ನಾಟಕ ಸ್ವಾಭಿಮಾನಿ ವಿದ್ಯಾರ್ಥಿ ಸಮೂಹ ಎಚ್ಚರಿಕೆ ನೀಡಿದೆ.

ಗ್ರಾಮಲೆಕ್ಕಾಧಿಕಾರಿಗಳ ಹುದ್ದೆ ನೇಮಕಾತಿಗಾಗಿ ನಡೆದಿದ್ದ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದ ಶಂಕರ್‌ ಬನ್ನೂರು, ಪರೀಕ್ಷಾ ಅಕ್ರಮದಲ್ಲಿ ಭಾಗಿಯಾದ ಆರೋಪಕ್ಕಾಗಿ ಬಂಧನಕ್ಕೆ ಒಳಗಾಗಿದ್ದಾನೆ. ಆತ ಪರೀಕ್ಷಾ ಕೇಂದ್ರದ ಕೊನೆಯ ಸಾಲಿನಲ್ಲಿ ಕುಳಿತು ಮೊಬೈಲ್‌ ಬಳಸಿ, ಗೂಗಲ್‌ ಲೆನ್‌್ಸನಲ್ಲಿ ನೋಡಿ ಉತ್ತರ ಬರೆದಿದ್ದಾನೆ ಎಂಬ ಆರೋಪಗಳಿವೆ.
ಈಗ ಹೊಸದಾಗಿ ಆತ ಪರೀಕ್ಷಾ ಕೇಂದ್ರಕ್ಕೆ ಬಂದಿರಲಿಲ್ಲ. ಬೇರೆಲ್ಲೋ ಕುಳಿತು ಪರೀಕ್ಷೆ ಬರೆದಿದ್ದಾನೆ ಎಂದು ದೂರಲಾಗುತ್ತಿದೆ.

RELATED ARTICLES

Latest News