ಬೆಂಗಳೂರು, ಮಾ. 25- ಹತ್ತೊಂಭತ್ತನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ಗೆ ದಿನಗಣನೆ ಆರಂಭಗೊಂಡಿರುವ ಬೆನ್ನಲ್ಲೇ ಭಾರತದ ಎರಡನೇ ಅತಿದೊಡ್ಡ ಸಹಕಾರ ಮಹಾಮಂಡಳಿ ಹಾಗೂ ಕರ್ನಾಟಕದ ಹೆಮೆಯ ಕೆಎಂಎ್ ನಂದಿನಿ ಬ್ರ್ಯಾಂಡ್ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದೊಂದಿಗೆ ಸಹಭಾಗಿತ್ವ ಪಡೆದಿದೆ.
ಕೆಎಂಎಫ್ ಎಂಡಿ ಬಿ.ಶಿವಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ, `ನಂದಿನಿ ಬ್ರ್ಯಾಂಡ್ ಸದಾ ಕ್ರೀಡೆ ಮತ್ತು ಯುವಜನತೆಯನ್ನು ಪ್ರೋತ್ಸಾಹಿಸುವ ಧ್ಯೇಯ ಹೊಂದಿದ್ದು, ರಾಜ್ಯದ ಹೆಮೆಯಎರಡು ಪ್ರತಿಷ್ಠಿತ ಬ್ರ್ಯಾಂಡ್‌ಗಳಾದ ನಂದಿನಿ ಮತ್ತು ಆರ್‌ಸಿಬಿ ಒಂದಾಗಿರುವುದು ನಮಗೆ ಅತ್ಯಂತ ಸಂತಸದ ಸಂಗತಿಯಾಗಿದ್ದು, ಅಭಿಮಾನಿ ಗಳೊಂದಿಗೆ ಸಂಪರ್ಕ ಬೆಳೆಸಿ, ಲೀಗ್‌ನಉತ್ಸಾಹವನ್ನು ಸಂಭ್ರಮಿಸಲು ನಾವು ಎದುರು ನೋಡುತ್ತಿದ್ದೇವೆ’ ಎಂದು ಹೇಳಿದರು.

`ಆರ್‌ಸಿಬಿಯೊಂದಿಗಿನ ಸಹಭಾಗಿತ್ವವು ಕ್ರೀಡೆಯನ್ನು ಬೆಂಬಲಿಸುವ ನಂದಿನಿಯ ಪರಂಪರೆಯನ್ನು ಮತ್ತಷ್ಟು ಬಲಪಡಿಸಲು ಈ ಸಹಭಾಗಿತ್ವವು ರಾಜ್ಯದ ಕ್ರೀಡಾ ಉತ್ಸಾಹಕ್ಕೆ ಮತ್ತಷ್ಟುಚೈತನ್ಯ ನೀಡಲಿದೆ. ಈ ಸಹಭಾಗಿತ್ವದ ಭಾಗವಾಗಿ ನಂದಿನಿ ಬ್ರ್ಯಾಂಡ್ ವಿವಿಧ ಜಾಹೀರಾತು ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳ ಅಭಿಯಾನಗಳನ್ನು ಕೈಗೊಳ್ಳಲಿದೆ’ ಎಂದು ತಿಳಿಸಿದರು.
ಆರ್‌ಸಿಬಿ ಸಿಇಒ ರಾಜೇಶ್ ಮೆನನ್ ಪ್ರತಿಕ್ರಿಯಿಸಿ,`ಕರುನಾಡ ಮಣ್ಣಿನೊಂದಿಗೆ ಗಾಢ ಬಾಂಧವ್ಯ ಹೊಂದಿರುವ ಎರಡು ಬ್ರ್ಯಾಂಡ್‌ಗಳು ಒಂದಾಗಿರುವುದು ವಿಶೇಷ ಸಂಗತಿ. ನಂದಿನಿಯ ವಿಶ್ವಾಸಾರ್ಹತೆ ಮತ್ತು ಮನೆಮಾತಾದ ಸ್ಥಾನಮಾನ ಈ ಸಹಭಾಗಿತ್ವವನ್ನು ಮತ್ತಷ್ಟುಅರ್ಥಪೂರ್ಣವಾಗಿಸುತ್ತದೆ. ಈ ಸೀಸನ್‌ನಲ್ಲಿ ಅಭಿಮಾನಿಗಳಿಗೆ ವಿಶೇಷಅನುಭವಗಳನ್ನು ನೀಡಲು ನಾವು ಕಾತರರಾಗಿದ್ದೇವೆ’ ಎಂದು ಹೇಳಿದರು.
