Homeರಾಜ್ಯಕೃಷ್ಣಭೈರೇಗೌಡರೇ ಡಾ.ರಾಜ್‌ಕುಮಾರ್‌ ರಸ್ತೆಗೆ ಒಮ್ಮೆ ಬನ್ನಿ

ಕೃಷ್ಣಭೈರೇಗೌಡರೇ ಡಾ.ರಾಜ್‌ಕುಮಾರ್‌ ರಸ್ತೆಗೆ ಒಮ್ಮೆ ಬನ್ನಿ

Krishna Bhairegowda, come to Dr. Rajkumar Road once

ಬೆಂಗಳೂರು, ಜು.15- ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರೇ ರಾಜಾಜಿನಗರದ ಡಾ.ರಾಜ್‌ಕುಮಾರ್‌ ರಸ್ತೆಗೆ ಭೇಟಿ ನೀಡಿ ರಸ್ತೆಯ ಅವ್ಯವಸ್ಥೆಯನ್ನು ಒಮೆ ವೀಕ್ಷಿಸಿ.ವೈಟ್‌ಟ್ಯಾಪಿಂಗ್‌ ಕಾಮಗಾರಿ ಆರಂಭಿಸಿ ತಿಂಗಳುಗಳೇ ಕಳೆದರೂ ಡಾ.ರಾಜ್‌ಕುಮಾರ್‌ ರಸ್ತೆ ಅಪೂರ್ಣವಾಗಿಯೇ ಉಳಿದಿದ್ದು, ನಿತ್ಯ ಸಾರ್ವಜನಿಕರು ಓಡಾಡಲು ಒಂದಿಲ್ಲೊಂದು ಸಮಸ್ಯೆ ಎದುರಿಸುವಂತಾಗಿದೆ.

ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿ ಹತ್ತಾರು ಸಮಸ್ಯೆ ಎದುರಿಸುವಂತಾಗಿದೆ. ಅಪೂರ್ಣ ಕಾಮಗಾರಿಯಿಂದಾಗಿ ರಸ್ತೆಗೆ ಹೊಂದಿಕೊಂಡಂತಿರುವ ಕಚೇರಿ,ಅಂಗಡಿ, ಹೋಟೆಲ್‌ಗಳಿಗೆ ಹೋಗಿ ಬರಲು ತ್ರಾಸಪಡುವಂತಾಗಿದೆ. ನಿತ್ಯ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿಯಿಂದಾಗಿ ನಾಗರಿಕರು ಹೈರಾಣರಾಗಿದ್ದಾರೆ. ಅಭಿವೃದ್ಧಿ ಹೆಸರಿನಲ್ಲಿ ಕಾಮಗಾರಿ ಆರಂಭಿಸಿ ವಿಳಂಬ ಮಾಡುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುವ ಬದಲು ಅನಾನುಕೂಲವೇ ಹೆಚ್ಚಾಗಿದೆ.

ಪಾದಚಾರಿಗಳ ಅನುಕೂಲಕ್ಕಾಗಿ ಆ ಮಾರ್ಗದಲ್ಲಿರುವ ಅಂಗಡಿಗಳನ್ನು ತೆರವುಗೊಳಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಅದೇ ರೀತಿ ರಸ್ತೆ ಅಭಿವೃದ್ಧಿಯಂತಹ ಕಾಮಗಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸದಿದ್ದರೇ ಮತ್ತೊಂದು ರೀತಿಯ ಸಮಸ್ಯೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ.

ನಗರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಸಮಸ್ಯೆಗಳಿಗೆ ಪರಿಹಾರ ಸೂಚಿಸುತ್ತಿರುವ ಸಚಿವರು, ರಾಜಕುಮಾರ್‌ ರಸ್ತೆಯ ಕಲ್ಲು, ಗುಂಡಿಯ ಅದ್ವಾನವನ್ನು ವೀಕ್ಷಣೆ ಮಾಡಿ, ಸಾರ್ವಜನಿಕರಿಗಾಗುತ್ತಿರುವ ಸಮಸ್ಯೆಗಳನ್ನು ಅತಿ ಶೀಘ್ರವಾಗಿ ಪರಿಹರಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

RELATED ARTICLES
spot_img

Latest News