Homeರಾಜ್ಯಕೆಎಸ್‌‍ಆರ್‌ಟಿಸಿ ಲಗೇಜ್‌ ದರ ಶೇ.15ರಷ್ಟು ಹೆಚ್ಚಳ

ಕೆಎಸ್‌‍ಆರ್‌ಟಿಸಿ ಲಗೇಜ್‌ ದರ ಶೇ.15ರಷ್ಟು ಹೆಚ್ಚಳ

KSRTC luggage rate hiked by 15%

ಬೆಂಗಳೂರು,ಫೆ.16- ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಸಾಗಿಸುವ ಲಗೇಜು ದರವನ್ನು ಶೇ.15ರಷ್ಟು ಹೆಚ್ಚಳ ಮಾಡಿ ಪರಿಷ್ಕರಿಸಿದ್ದು, ಇಂದಿನಿಂದ ಜಾರಿಗೊಳಿಸಲಾಗಿದೆ.

ಪ್ರತಿ ಬಾರಿಯೂ ಲಗೇಜು ದರವು ಬಸ್‌‍ ಪ್ರಯಾಣ ದರ ಏರಿಕೆಯೊಂದಿಗೆ ಆಗುತ್ತದೆ. 2025ರ ಜನವರಿಯಲ್ಲಿ ಬಸ್‌‍ ಪ್ರಯಾಣ ದರ ಏರಿಕೆಯಾಗಿತ್ತು. ಆದರೆ ಲಗೇಜು ದರ ಏರಿಕೆ ಮಾಡಿರಲಿಲ್ಲ. ಹೀಗಾಗಿ ಇಂದಿನಿಂದ ಲಗೇಜು ದರವನ್ನು ಹೆಚ್ಚಳ ಮಾಡಲಾಗಿದೆ ಎಂದು ಕೆಎಸ್‌‍ಆರ್‌ಟಿಸಿ ಪ್ರಕಟಣೆ ತಿಳಿಸಿದೆ.

ಕಳೆದ 2021ರಲ್ಲಿ ಲಗೇಜು ದರವನ್ನು ಏರಿಕೆ ಮಾಡಲಾಗಿತ್ತು. ಐದು ವರ್ಷಗಳ ಬಳಿಕ ಮತ್ತೆ ಏರಿಕೆ ಮಾಡಲಾಗಿದೆ. ಬಸ್‌‍ ಪ್ರಯಾಣದರ ಎಷ್ಟು ಏರಿಕೆಯಾಗುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ಲಗೇಜು ದರವು ಹೆಚ್ಚಾಗುತ್ತದೆ. ಈಗಾಗಲೇ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚು ಮಾಡಿರುವುದರಿಂದ ಲಗೇಜು ಸಾಗಾಣಿಕೆ ದರವನ್ನು ಶೇ.15ರಷ್ಟು ಹೆಚ್ಚಿಸಲಾಗಿದೆ ಎಂದು ಕೆಎಸ್‌‍ಆರ್‌ಟಿಸಿ ಸ್ಪಷ್ಟಪಡಿಸಿದೆ.

1ರಿಂದ 5ನೇ ಹಂತದವರೆಗೆ 6 ರೂ. 6ರಿಂದ 10ನೇ ಹಂತದವರೆಗೆ 12 ರೂ. 10ರಿಂದ 15ನೇ ಹಂತದವರೆಗೆ 20 ರೂ 16ರಿಂದ 20ನೇ ಹಂತದವರೆಗೆ 25 ರೂ. ಲಗೇಜು ದರ ನಿಗದಿಪಡಿಸಲಾಗಿದೆ.

156ರಿಂದ 160ನೇ ಹಂತದವರೆಗೆ ಒಟ್ಟು 145 ರೂ.ನಷ್ಟು ಲಗೇಜ್‌ ದರವನ್ನು ಪರಿಷ್ಕರಿಸಲಾಗಿದೆ. ಡೀಸೆಲ್‌, ಸಿಬ್ಬಂದಿ ಹಾಗೂ ಇತರೆ ವೆಚ್ಚಗಳ ಹೆಚ್ಚಳಗಳ ಹಿನ್ನೆಲೆಯಲ್ಲಿ ಬಸ್ಸುಗಳಲ್ಲಿ ಸಾಗಿಸುವ ಲಗೇಜ್‌ ದರವನ್ನು ಪರಿಷ್ಕರಿಸಲಾಗಿದೆ ಎಂದು ಹೇಳಲಾಗಿದೆ.

RELATED ARTICLES
spot_img

Latest News