ಹುಬ್ಬಳ್ಳಿ,ಏ.17- ಅಶೋಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮತ್ತೊಂದು ಲವ್ ಜಿಹಾದ್ ಆರೋಪ ಹಾಗೂ ಗಾಂಜಾ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿದ್ದ ಆರೋಪಿ ಸಮೀರ್ನನ್ನು ಪೊಲೀಸರು ಬಂಽಸಿದ್ದಾರೆ.
ಸಮೀರ್ ಮೊಬೈಲ್ನಲ್ಲಿ ಯುವತಿಯರ ಜೊತೆಗಿನ ವಿಡಿಯೋಗಳು ಹಾಗೂ ಗಾಂಜಾ ಸೇವನೆಗೆ ಸಂಬಂಽಸಿದ ತುಣುಕುಗಳು ಪತ್ತೆಯಾಗಿದ್ದವು, ಈ ಕುರಿತು ಹಿಂದೂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ, ಕೂಡಲೇ ಸಮೀರ್ ಬಂಧನಕ್ಕೆ ಒತ್ತಾಯಿಸಿದರು.
ಅಲ್ಲದೆ ಸಮೀರ್ ಗಾಂಜಾ ವ್ಯಸನಿ ಹಾಗೂ ಡ್ರಗ್ ಪೆಡ್ಲರ್ ಆಗಿದ್ದಾನೆ ಎಂಬ ಆರೋಪಗಳೂ ಸಹ ವ್ಯಕ್ತವಾಗಿದ್ದವು.ಪ್ರಕರಣ ದಾಖಲಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದ ಸಮೀರ್ ಬಂಧನಕ್ಕಾಗಿ ಅಶೋಕ್ನಗರ ಠಾಣೆ ಪೊಲೀಸರು ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಿದ್ದರು.
ಮಾಹಿತಿ ಪ್ರಕಾರ ಗೋವಾ ರಾಜ್ಯದಲ್ಲಿ ಅಡಗಿ ಕುಳಿತಿದ್ದ ಸಮೀರ್ನನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿ ಸಮೀರ್ನನ್ನು ಹುಬ್ಬಳ್ಳಿಗೆ ಕರೆತಂದು ವಿಚಾರಣೆ ನಡೆಸಿದ ಪೊಲೀಸರು, ಎನ್ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಆರೋಪಿ ಈಗ ನ್ಯಾಯಾಂಗ ಬಂಧನದಲ್ಲಿದ್ದಾನೆ.
