Homeರಾಜ್ಯಸಮಾಜ ಕಲ್ಯಾಣ ಇಲಾಖೆಯ ನೂತನ ಸಿಆರ್‌ಸಿ ವೆಬ್‌ಸೈಟ್‌‍ ಉದ್ಘಾಟಿಸಿದ ಸಚಿವ ಕೆ.ಹೆಚ್‌.ಮುನಿಯಪ್ಪ

ಸಮಾಜ ಕಲ್ಯಾಣ ಇಲಾಖೆಯ ನೂತನ ಸಿಆರ್‌ಸಿ ವೆಬ್‌ಸೈಟ್‌‍ ಉದ್ಘಾಟಿಸಿದ ಸಚಿವ ಕೆ.ಹೆಚ್‌.ಮುನಿಯಪ್ಪ

ಬೆಂಗಳೂರು,ಸೆ.12- ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಕೇಂದ್ರ ಪರಿಹಾರ ಸಮಿತಿ (ಸಿಆರ್‌ಸಿ)ಯ ನೂತನ ಅಧಿಕೃತ ವೆಬ್‌ಸೈಟ್‌‍ ಅನ್ನು ಸಮಾಜ ಕಲ್ಯಾಣ ಸಚಿವ ಕೆ.ಹೆಚ್‌.ಮುನಿಯಪ್ಪ ಅವರು ವಿಧಾನಸೌಧದಲ್ಲಿ ಉದ್ಘಾಟಿಸಿದರು.

ಹೊಸ ವೆಬ್‌ಸೈಟ್‌‍ ಮೂಲಕ ಸಿಆರ್‌ಸಿ ಹಾಗೂ ನಿರಾಶ್ರಿತರ ಪರಿಹಾರ ಕೇಂದ್ರಗಳ (ಎನ್‌ಪಿಕೆ) ಕುರಿತು ಸಮಗ್ರ ಮಾಹಿತಿಯನ್ನು ಸಾರ್ವಜನಿಕರಿಗೆ ಸುಲಭವಾಗಿ ಒದಗಿಸಲಾಗುತ್ತಿದೆ. ಭಿಕ್ಷಾಟನೆ ತಡೆ ಮತ್ತು ಪುನರ್ವಸತಿ, ಆಶ್ರಯ, ಆರೋಗ್ಯ ಸೇವೆ, ಶಿಕ್ಷಣ, ಕೌಶಲ್ಯಾಭಿವೃದ್ಧಿ, ವೃತ್ತಿಪರ ತರಬೇತಿ, ಜೀವನೋಪಾಯ ಬೆಂಬಲ ಹಾಗೂ ಸಾಮಾಜಿಕ ಪುನರ್‌ಸೇರ್ಪಡೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಮತ್ತು ಸೌಲಭ್ಯಗಳ ಮಾಹಿತಿ ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿದೆ.

ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯ್ದೆ, 1975ರ ಉದ್ದೇಶಗಳಿಗೆ ಅನುಗುಣವಾಗಿ ಸಿಆರ್‌ಸಿ ಹಾಗೂ ಎನ್‌ಪಿಕೆಗಳು ಕಾರ್ಯನಿರ್ವಹಿಸುತ್ತಿದ್ದು, ಭಿಕ್ಷಾಟನೆಯಲ್ಲಿ ತೊಡಗಿರುವವರು ಹಾಗೂ ದುರ್ಬಲ ವರ್ಗದವರಿಗೆ ಆರೈಕೆ, ರಕ್ಷಣೆ ಮತ್ತು ಪುನರ್ವಸತಿ ಒದಗಿಸುವುದು ಪ್ರಮುಖ ಉದ್ದೇಶವಾಗಿದೆ.

ರಾಜ್ಯದಲ್ಲಿ 15 ನಿರಾಶ್ರಿತರ ಪರಿಹಾರ ಕೇಂದ್ರಗಳ ಜಾಲದೊಂದಿಗೆ ಸಿಆರ್‌ಸಿ ಕಾರ್ಯನಿರ್ವಹಿಸುತ್ತಿದೆ. ಹೊಸ ಡಿಜಿಟಲ್‌ ವೇದಿಕೆ ಪಾರದರ್ಶಕತೆ, ಸಾರ್ವಜನಿಕ ಸಂಪರ್ಕ ಮತ್ತು ಸೇವೆಗಳ ಸುಲಭ ಪ್ರವೇಶಕ್ಕೆ ನೆರವಾಗಲಿದೆ. ಇದೇ ವೇಳೆ, ಬೆಂಗಳೂರನ್ನು ಭಿಕ್ಷುಕ ಮುಕ್ತ ನಗರವನ್ನಾಗಿಸುವ ಉದ್ದೇಶದಿಂದ ಜಾಗೃತಿ ಅಭಿಯಾನ ಆರಂಭಿಸಲಾಗುವುದು ಎಂದು ತಿಳಿಸಲಾಯಿತು.

ಈ ಅಭಿಯಾನವು ನಗರವನ್ನು ಹೆಚ್ಚು ಘನತೆಯುತ, ಕರುಣಾಮಯಿ ಹಾಗೂ ಎಲ್ಲರನ್ನೂ ಒಳಗೊಂಡ ನಗರವನ್ನಾಗಿಸುವ ಗುರಿ ಹೊಂದಿದೆ.ಕಾರ್ಯಕ್ರಮದಲ್ಲಿ ಸಿಆರ್‌ಸಿ ಅಧ್ಯಕ್ಷ ಆಗಾ ಸುಲ್ತಾನ್‌, ಕಾರ್ಯದರ್ಶಿ ಜಗದೀಶ್‌ ಎಸ್‌‍. ಹೆಬ್ಬಳ್ಳಿ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

RELATED ARTICLES
spot_img

Latest News