Homeರಾಜ್ಯನೂತನ ಸಚಿವರಿಗೆ ಖಾತೆ ಭಾಗ್ಯ

ನೂತನ ಸಚಿವರಿಗೆ ಖಾತೆ ಭಾಗ್ಯ

ಬೆಂಗಳೂರು, ಆ.12- ಹಾಲಿ ಸಚಿವರ ಪೈಕಿ ಕೆಲವರ ಖಾತೆಗಳನ್ನು ಅದಲು-ಬದಲು ಮಾಡಿ ರುವ ಕಾಂಗ್ರೆಸ್‌‍ ಹೈಕಮಾಂಡ್‌ ಹಿರಿಯ ಸಚಿವ ಕೆ.ಎಚ್‌.ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ ಜವಾಬ್ದಾರಿ ವಹಿಸಿದೆ. ಹಿರಿಯ ಸಚಿವ ಯು.ಟಿ.ಖಾದರ್‌ ಅವರ ಖಾತೆಯನ್ನೂ ಬದಲಾವಣೆ ಮಾಡಿದೆ. ಹಿಂದೆ ಸಿದ್ದರಾಮಯ್ಯಅವರ ಸರ್ಕಾರದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜವಾಬ್ದಾರಿ ನಿರ್ವಹಿಸಿದ್ದ ಮಧುಬಂಗಾರಪ್ಪ ಅವರಿಗೆ ಅದೇ ಜವಾಬ್ದಾರಿ ನೀಡಲಾಗಿದೆ. ಚೆಲುವರಾಯ ಸ್ವಾಮಿ ಅವರಿಗೆ-ಕೃಷಿ, ಸಂತೋಷ್‌ಲಾಡ್‌ ಅವರಿಗೆ-ಕಾರ್ಮಿಕ, ಜಮೀರ್‌ ಅಹಮದ್‌ ಖಾನ್‌ ಅವರಿಗೆ- ವಸತಿ, ಎಸ್‌‍.ಎಸ್‌‍.ಮಲ್ಲಿಕಾರ್ಜುನ ಅವರಿಗೆ-ಗಣಿ, ಭೂ ವಿಜ್ಞಾನ ಜವಾಬ್ದಾರಿಗಳನ್ನು ಮುಂದುವರಿಸಲಾಗಿದೆ.

ಕೆ.ಎಚ್‌.ಮುನಿಯಪ್ಪ ಅವರ ಬಳಿಯಿದ್ದ ಆಹಾರ ಮತ್ತು ನಾಗರಿಕ ಪೂರೈಕೆಯನ್ನು ರಿಜ್ವಾನ್‌ ಅರ್ಷದ್‌ಗೆ ನೀಡಲಾಗಿದೆ. ರಾಮಲಿಂಗಾ ರೆಡ್ಡಿಯವರನ್ನು ಜಲ ಸಂಪನೂಲ ಖಾತೆಯಲ್ಲೇ ಮುಂದುವರಿಸಲಾಗಿದೆ. ಆರ್ಥಿಕ ಇಲಾಖೆಯ ಮೇಲೆ ಕಣ್ಣಿಟ್ಟಿದ್ದ ಬಸವರಾಜ ರಾಯರೆಡ್ಡಿ ಅವರಿಗೆ ಉನ್ನತ ಶಿಕ್ಷಣ ಜವಾಬ್ದಾರಿ ವಹಿಸಲಾಗಿದೆ.

ವಿಧಾನಸಭಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಸಂಪುಟ ಸೇರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜವಾಬ್ದಾರಿ ನಿರ್ವಹಿಸುತ್ತಿದ್ದ ಯು.ಟಿ.ಖಾದರ್‌ ಅವರಿಗೆ ಅಲ್ಪಸಂಖ್ಯಾತರ ಅಭಿವೃದ್ಧಿ ಮತ್ತು ಹಜ್‌ ಮತ್ತು ವಕ್‌್ಫ ಖಾತೆಗಳನ್ನು ನೀಡಲಾಗಿದೆ. ಆರೋಗ್ಯ ಸಚಿವರಾದ ಬಳಿಕ ಯು.ಟಿ.ಖಾದರ್‌ ಫೈವ್‌ ಸ್ಟಾರ್‌ ಹೋಟೆಲ್‌ ಗಳ ಮೇಲೆ ಮುಗಿ ಬಿದ್ದಿದ್ದರು. ಈ ಲಾಬಿ ಖಾತೆ ಬದಲಾವಣೆ ಮಾಡುವಂತೆ ಮಾಡಿದೆ ಎಂಬ ಆರೋಪಗಳಿವೆ.

ಕೆ.ಎಸ್‌‍.ಬಸಂತಪ್ಪ ಅವರಿಗೆ-ಮೀನುಗಾರಿಕೆ, ಬಂದರು, ಲಕ್ಷ್ಮಣ ಸವದಿ ಅವರಿಗೆ-ಸಹಕಾರ, ಅಜಯ್‌ ಸಿಂಗ್‌ ಅವರಿಗೆ- ಅರಣ್ಯ, ಪರಿಸರ ಜೀವಶಾಸ್ತ್ರ, ಬಾಲಕೃಷ್ಣ ಅವರಿಗೆ-ಸಣ್ಣ ನೀರಾವರಿ,
ಉಳಿದಂತೆ ಬಿ.ನಾಗೇಂದ್ರ ಅವರಿಗೆ-ಪೌರಾಡಳಿತ, ಟಿ.ರಘುಮೂರ್ತಿಯವರಿಗೆ-ಪರಿಶಿಷ್ಟ ಪಂಗಡಗಳ ಅಭಿವೃದ್ಧಿ, ಪುಟ್ಟರಂಗ ಶೆಟ್ಟಿ ಅವರಿಗೆ-ಹಿಂದುಳಿದ ವರ್ಗಗಳ ಕಲ್ಯಾಣ-ಪಶುಸಂಗೋಪನೆ, ಶಿವರಾಜ್‌ ತಂಗಡಗಿ ಅವರಿಗೆ-ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯಾನಂದ ಕಾಶಪ್ಪನವರ್‌ ಅವರಿಗೆ-ಜವಳಿ, ಕೃಷಿ ಮಾರುಕಟ್ಟೆ, ಕೆ.ಎಂ.ಶಿವಲಿಂಗೇಗೌಡ ಅವರಿಗೆ-ತೋಟಗಾರಿಕೆ, ರೇಷೆ, ಪಿ.ಎಂ.ನರೇಂದ್ರಸ್ವಾಮಿಯವರಿಗೆ-ಅಬಕಾರಿ, ರುದ್ರಪ್ಪ ಲಮಾಣಿಯವರಿಗೆ-ಯೋಜನೆ ಮತ್ತು ಸಾಂಖ್ಯಿಕ ಜವಾಬ್ದಾರಿ ನೀಡುವ ಸಾಧ್ಯತೆ ಇದ್ದು, ಇನ್ನೂ ಅಧಿಕೃತವಾಗಿ ಖಚಿತ ಪಟ್ಟಿಲ್ಲ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಆರ್ಥಿಕ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ಉಳಿದ ಎಲ್ಲಾ ಖಾತೆಗಳನ್ನು ತಮ ಬಳಿ ಉಳಿಸಿಕೊಂಡಿದ್ದಾರೆ.ಈ ಮೊದಲು ಸಂಪುಟ ಸೇರಿದ್ದ 13 ಸಚಿವರ ಪೈಕಿ ಮುನಿಯಪ್ಪ ಅವರನ್ನು ಹೊರತು ಪಡಿಸಿದರೆ ಉಳಿದ ಎಲ್ಲರ ಖಾತೆಗಳು ಯಥಾವತ್‌ ಮುಂದುವರೆದಿವೆ. ಹೊಸದಾಗಿ ಸಚಿವ ಸಂಪುಟ ಸೇರಿದ 19 ಮಂದಿ ಪೈಕಿ 13 ಜನರಿಗೆ ಖಾತೆ ಹಂಚಿಕೆ ಮಾಡಿ ಹೈಕಮಾಂಡ್‌ ಪಟ್ಟಿ ರವಾನಿಸಿದೆ.

ಇದೇ ಮೊದಲ ಬಾರಿಗೆ ಕಂತಿನ ರೂಪದಲ್ಲಿ ಖಾತೆಗಳ ಹಂಚಿಕೆಯನ್ನು ಹೈಕಮಾಂಡ್‌ ಮುಖ್ಯಮಂತ್ರಿಯವರಿಗೆ ರವಾನಿಸುತ್ತಿರುವುದು ಅಚ್ಚರಿ ಮೂಡಿಸಿದೆ.ಸಚಿವ ಸಂಪುಟ ವಿಸ್ತರಣೆಯಾಗಿ 12 ದಿನಗಳ ಬಳಿಕ ಖಾತೆ ಹಂಚಿಕೆಯಾಗುತ್ತಿದೆ. ನಾಳೆಯಿಂದ ವಿಧಾನ ಮಂಡಲದ ಅಧಿವೇಶನ ನಡೆಯುತ್ತಿದ್ದು, ಮುನ್ನಾ ದಿನ ಖಾತೆ ಹಂಚಿಕೆಯಾಗಿದೆ.

RELATED ARTICLES
spot_img

Latest News