Homeರಾಜ್ಯಎಚ್‌ಎಂಟಿ ಕೈಗಡಿಯಾರ ಖರೀದಿಸಲು ಮುಗಿಬಿದ್ದ ಜನ; ಕಿಲೋಮೀಟರ್‌ಗಟ್ಟಲೆ ಸರದಿ ಸಾಲು

ಎಚ್‌ಎಂಟಿ ಕೈಗಡಿಯಾರ ಖರೀದಿಸಲು ಮುಗಿಬಿದ್ದ ಜನ; ಕಿಲೋಮೀಟರ್‌ಗಟ್ಟಲೆ ಸರದಿ ಸಾಲು

People flock to buy HMT watches; Queues stretch for kilometers

ಬೆಂಗಳೂರು, ಆ.15- ಎಚ್‌ಎಂಟಿ ಕೈಗಡಿಯಾರ ಖರೀದಿಸಲು ಸಾರ್ವಜನಿಕರು ಮುಗಿಬಿದ್ದಿದ್ದು, ಕಿಲೋಮೀಟರ್‌ಗಟ್ಟಲೆ ಸರದಿ ಸಾಲಿನಲ್ಲಿ ನಿಂತಿದ್ದಾರೆ. ಇದರಿಂದ ಎಚ್‌ಎಂಟಿ ಗಡಿಯಾರಕ್ಕೆ ಗತವೈಭವ ಮರಳಿ ಬಂದಂತಾಗಿದೆ.

ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ವಿಶೇಷ ವಾಚ್‌ಗಳನ್ನು ಎಚ್‌ಎಂಟಿ ಬಿಡುಗಡೆ ಮಾಡಿದೆ. ಆ ವಾಚ್‌ಗಳನ್ನು ಖರೀದಿಸಲು ಇಂದು ಜನ ಸರದಿ ಸಾಲಿನಲ್ಲಿ ನಿಂತು ಕಾಯುತ್ತಿರುವ ದೃಶ್ಯ ಕಂಡುಬಂದಿತು.

ಕೇಂದ್ರ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರ ಸೂಚನೆಯಂತೆ ಎಚ್‌ಎಂಟಿ ವಾಚ್‌ ಅನ್ನು ವಿಶೇಷವಾಗಿ ಬಿಡುಗಡೆಗೊಳಿಸಲಾಗಿದ್ದು, ಜಾಲಹಳ್ಳಿಯಲ್ಲಿರುವ ಎಚ್‌ಎಂಟಿ ವಾಚ್‌ ಖರೀದಿ ಕೇಂದ್ರದ ಮುಂದೆ ಕಿಲೋಮೀಟರ್‌ಗಟ್ಟಲೆ ಜನರು ಕಾದು ನಿಂತಿದ್ದರು.

RELATED ARTICLES
spot_img

Latest News