Sunday, April 12, 2026
Homeರಾಜ್ಯಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಸದ್ಯದಲ್ಲೇ ಪೂರ್ಣ : ಸಚಿವ ಚೆಲುವರಾಯಸ್ವಾಮಿ

ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಸದ್ಯದಲ್ಲೇ ಪೂರ್ಣ : ಸಚಿವ ಚೆಲುವರಾಯಸ್ವಾಮಿ

Recruitment of 945 posts in the Agriculture Department to be completed soon

ಬೆಂಗಳೂರು, ಮಾ.18- ಕೃಷಿ ಇಲಾಖೆಯಲ್ಲಿ ಖಾಲಿ ಇರುವ 945 ಹ್ದುೆಗಳಿಗೆ ಮೂರ್ನಾಲ್ಕು ತಿಂಗಳಲ್ಲಿ ನೇಮಕಾತಿ ಪೂರ್ಣಗೊಳಿಸುವುದಾಗಿ ಕೃಷಿ ಸಚಿವ ಎನ್‌.ಚೆಲುವರಾಯಸ್ವಾಮಿ ತಿಳಿಸಿದರು.

ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಕುಂದಾಪುರ ಶಾಸಕ ಕಿರಣ ಕುಮಾರ ಕೂಡ್ಗಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, 2018ರಲ್ಲಿ ಕೃಷಿ ಇಲಾಖೆಗೆ 370 ಜನರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಅನಂತರ 2023ರವರೆಗೆ ಯಾವುದೇ ನೇಮಕಾತಿಗಳಾಗಿಲ್ಲ. ತಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 945 ಹ್ದುೆಗಳ ನೇಮಕಾತಿಗೆ ಆರ್ಥಿಕ ಇಲಾಖೆಯಿಂದ ಒಂದು ವರ್ಷದ ಹಿಂದೆಯೇ ಆರ್ಥಿಕ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ. ಆದರೆ ಒಳ ಮೀಸಲಾತಿಯ ಗೊಂದಲದಿಂದಾಗಿ ನೇಮಕಾತಿ ಪೂರ್ಣಗೊಂಡಿಲ್ಲ ಎಂದು ಹೇಳಿದರು.

ಕೃಷಿ ಅಧಿಕಾರಿ ಹ್ದುೆಗಳಿಗೆ 128, ಸಹಾಯಕ ಕೃಷಿ ಅಧಿಕಾರಿಗಳ ಹ್ದುೆಗೆ 817, ಪ್ರಥಮ ದರ್ಜೆ ಸಹಾಯಕರ ಹ್ದುೆಗೆ 61, ದ್ವಿತೀಯ ದರ್ಜೆ ಸಹಾಯಕರ ಹ್ದುೆಗೆ 17 ಮಂದಿಯ ನೇಮಕಾತಿಗೆ ಅನುಮತಿ ದೊರೆತಿದೆ. ಮೂರ್ನಾಲ್ಕು ತಿಂಗಳಲ್ಲೇ ಈ ಹ್ದುೆಗಳ ನೇಮಕಾತಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಸಿಬ್ಬಂದಿಗಳ ಕೊರತೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಸಹಾಯಕ ತಾಂತ್ರಿಕ ಸೇವೆಯನ್ನು ಹಾಗೂ ಆತ ಯೋಜನೆಯಲ್ಲಿ ಸುಮಾರು 2 ಸಾವಿರ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ. ಜೊತೆಗೆ ಡಿ ಗ್ರೂಪ್‌ ಅಡಿ 620 ಮಂದಿ ಹೊರಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು.

ಕಾಲಕಾಲಕ್ಕೆ ನೇಮಕಾತಿಗಳನ್ನು ಕೈಗೊಂಡಿದ್ದರೆ ಸಮಸ್ಯೆ ಆಗುತ್ತಿರಲಿಲ್ಲ. ಆದರೆ 2018 ರಿಂದ 23ರ ನಡುವೆ ಬಿಜೆಪಿ- ಜೆಡಿಎಸ್‌‍ ಸರ್ಕಾರಗಳು ಆಡಳಿತದಲ್ಲಿದ್ದವು. ಆದರೆ ನೇಮಕಾತಿಗಳನ್ನು ಕಡೆಗಣಿಸಲಾಗಿತ್ತು ಎಂದು ಹೇಳಿದರು.

ಬಿಜೆಪಿಯ ಶಾಸಕ ವಿ.ಸುನಿಲ್‌ಕುಮಾರ್‌ ಸಿಬ್ಬಂದಿಗಳ ಕೊರತೆಯ ನಡುವೆಯೂ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ. ಪರಿಸ್ಥಿತಿ ಆಗಿಲ್ಲ ರೈತರು ಹೊಂದಿಕೊಂಡಿದ್ದಾರೆ, ಅಧಿಕಾರಿ ಸಿಬ್ಬಂದಿಗಳಿಲ್ಲದೆ ಇದ್ದರೂ ತಮ ಕೃಷಿ ಚಟುವಟಿಕೆಗಳನ್ನು ತಾವೇ ನಿರ್ವಹಿಸುತ್ತಿದ್ದಾರೆ. ಒಂದು ವೇಳೆ ಇರುವಷ್ಟು ಸಿಬ್ಬಂದಿಗಳಲ್ಲೇ ಕೃಷಿ ಇಲಾಖೆಯನ್ನು ನಿರ್ವಹಣೆ ಮಾಡಬಹುದು ಎಂದಾದರೆ, ಹೊಸ ಸಿಬ್ಬಂದಿಗಳ ನೇಮಕಾತಿಗೆ ಆರ್ಥಿಕ ಇಲಾಖೆ ಅನುಮತಿ ಕೊಟ್ಟಿರುವುದಾದರೂ ಏಕೆ? ಎಂದು ಪ್ರಶ್ನಿಸಿದರು.

ಶಾಸಕರಾದ ಅರಗ ಜ್ಞಾನೇಂದ್ರ ಈ ಹಿಂದೆ ಹೈಬ್ರಿಡ್‌ ಭತ್ತದ ತಳಿ ಮತ್ತು ಹೊಸ ರಸಗೊಬ್ಬರಗಳನ್ನು ಪರಿಚಯಿಸುವಾಗ ಕೃಷಿ ಅಧಿಕಾರಿಗಳು ರೈತರ ಜಮೀನಿನ ಬದುಗಳ ಮೇಲೆ ನಿಂತು ಸಲಹೆ ನೀಡುತ್ತಿದ್ದರು. ಈಗ ಆ ರೀತಿಯ ಕೆಲಸಗಳಾಗುತ್ತಿಲ್ಲ ಎಂದು ಸಚಿವರ ಗಮನ ಸೆಳೆದರು.

RELATED ARTICLES

Latest News