Homeರಾಜ್ಯಮತ್ತೆ ಸದ್ದು ಮಾಡಿದ ರಿಕ್ಕಿ ರೈ ಬೆಂಕಿ ಉಗುಳುವ ಲ್ಯಾಂಬೋರ್ಗಿನಿ ಕಾರು, ಟ್ರಾಫಿಲ್ ರೂಲ್ಸ್ ಲೆಕ್ಕಕ್ಕಿಲ್ಲ

ಮತ್ತೆ ಸದ್ದು ಮಾಡಿದ ರಿಕ್ಕಿ ರೈ ಬೆಂಕಿ ಉಗುಳುವ ಲ್ಯಾಂಬೋರ್ಗಿನಿ ಕಾರು, ಟ್ರಾಫಿಲ್ ರೂಲ್ಸ್ ಲೆಕ್ಕಕ್ಕಿಲ್ಲ

Ricky Rai’s Lamborghini under scanner again after fiery drive in Bengaluru

ಬೆಂಗಳೂರು,ಜೂ.13- ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಸೇರಿದ ಲ್ಯಾಂಬೋರ್ಗಿನಿ ಕಾರು ಮತ್ತೊಮೆ ಸಂಚಾರಿ ನಿಯಮ ಉಲ್ಲಂಘಿಸಿ ವಿವಾದಕ್ಕೆ ಸಿಲುಕಿದೆ. ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ರಿಕ್ಕಿ ರೈ ಕಾರು ಅಡ್ಡಾದಿಡ್ಡಿಯಾಗಿ ಚಲಿಸಿದ್ದು, ಕರ್ಕಶ ಸದ್ದು ಮಾಡಿಕೊಂಡು ಸೈಲೆನ್ಸರನಲ್ಲಿ ಬೆಂಕಿ ಉಗುಳುತ್ತಿರೋ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ.

ಈ ಕಾರಿನ ಸೈಲೆನ್ಸರನ್ನು ಮಾರ್ಪಾಡು ಮಾಡಿರುವುದು ಕಾಣಿಸುತ್ತಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ನಿಖರವಾಗಿ ಯಾವಾಗ ನಡೆದಿದೆ, ಯಾವ ಸಮಯದಲ್ಲಿ ನಡೆದಿದೆ, ಕಾರಿನಲ್ಲಿ ಯಾರ್ಯಾರು ಇದ್ದರು, ಕಾರನ್ನು ರಿಕ್ಕಿ ರೈ ಚಲಾಯಿಸುತ್ತಿದ್ದರೇ, ಅಥವಾ ಅವರ ಚಾಲಕ ಚಲಾಯಿಸುತ್ತಿದ್ದರೇ ಎಂಬಿತ್ಯಾದಿ ಮಾಹಿತಿಗಳನ್ನು ಸಂಚಾರಿ ಪೊಲೀಸರು ವಿಡಿಯೋ ಅಧರಿಸಿ ಪರಿಶೀಲನೆಗೆ ಮುಂದಾಗಿದ್ದಾರೆ.

ರಿಕ್ಕಿ ರೈ ಒಡೆತನದ ಲ್ಯಾಂಬೋರ್ಗಿನಿ ಕಾರಿನ ವೈರಲ್‌ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಪೊಲೀಸರು ಸದ್ಯ ಪರಿಶೀಲನೆ ನಡೆಸುತ್ತಿದ್ದಾರೆ. ವಿಡಿಯೋ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಈ ಹಿಂದೆ ಮಾ. 21 ರಂದು ಇದೇ ಕಾರು ಅನಿಲ್‌ ಕುಂಬ್ಳೆ ಸರ್ಕಲ್‌‍, ಕಬ್ಬನ್‌ ರಸ್ತೆಯಲ್ಲಿ ಡ್ರಿಫ್ಟಿಂಗ್‌ ಮಾಡಿದ್ದ ವಿಚಾರ ಭಾರೀ ಸದ್ದು ಮಾಡಿತ್ತು. ಈ ಬಗ್ಗೆ ತನಿಖೆ ನಡೆಸಿ ಪ್ರಕರಣ ದಾಖಲಿಸಿದ್ದ ಕಬ್ಬನ್‌ ಪಾರ್ಕ್‌ ಸಂಚಾರಿ ಠಾಣೆ ಪೊಲೀಸರು ಬಳಿಕ ಲ್ಯಾಂಬೋರ್ಗಿನಿ ಕಾರು ಸೀಜ್‌ ಮಾಡಿ ತನಿಖೆ ನಡೆಸಿದ್ದರು.

RELATED ARTICLES

Latest News