Homeರಾಜ್ಯಜನತೆಯ ಪ್ರೀತಿಪಾತ್ರ ನಾಯಕ ಸಿದ್ದು : ಪ್ರಿಯಾಂಕ್‌ ಖರ್ಗೆ

ಜನತೆಯ ಪ್ರೀತಿಪಾತ್ರ ನಾಯಕ ಸಿದ್ದು : ಪ್ರಿಯಾಂಕ್‌ ಖರ್ಗೆ

Siddaramaiah is the people's favorite leader: Priyank Kharge

ಬೆಂಗಳೂರು, ಮೇ 29- ಕರ್ನಾಟಕದ ಮುಖ್ಯಮಂತ್ರಿಯಾಗಿ ಅತ್ಯಂತ ಸುದೀರ್ಘಾವಧಿ ಸೇವೆ ಸಲ್ಲಿಸಿದ ದಾಖಲೆಯೊಂದಿಗೆ, ಕಾಂಗ್ರೆಸ್‌‍ ಪಕ್ಷದ ಜನಪರ ಯೋಜನೆಗಳು, ಸೈದ್ಧಾಂತಿಕ ನಿಲುವುಗಳು, ರಾಜಕೀಯ ಹೋರಾಟಗಳಿಂದ ಸಿದ್ದರಾಮಯ್ಯ ರಾಜ್ಯದ ಜನತೆಯ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಕೊಂಡಾಡಿದ್ದಾರೆ.

ತಮ ರಾಜಕೀಯ ಜೀವನದ ಆರಂಭದಿಂದಲೂ ಸಂವಿಧಾನದ ಮೌಲ್ಯಗಳು, ಜಾತ್ಯತೀತ ಹಾಗೂ ಸಮಾಜವಾದಿ ತತ್ವಗಳಿಗೆ ಬದ್ಧರಾಗಿ, ಪ್ರಬುದ್ಧ ರಾಜಕಾರಣಕ್ಕೆ ಸಿದ್ದರಾಮಯ್ಯ ಮೇಲ್ಪಂಕ್ತಿ ಹಾಕಿದರು. ನಮ ತಲೆಮಾರಿನ ರಾಜಕಾರಣಿಗಳು, ಭವಿಷ್ಯದ ಯುವ ನಾಯಕರಿಗೆ ಸ್ಫೂರ್ತಿಯಾಗಿದ್ದಾರೆ ಎಂದಿದ್ದಾರೆ.

ನನ್ನ ವೈಯಕ್ತಿಕ ರಾಜಕೀಯ ಬದುಕಿನಲ್ಲಿ, ಬೆಳವಣಿಗೆಯಲ್ಲಿ ಸಿದ್ದರಾಮಯ್ಯ ಅವರ ಮಾರ್ಗದರ್ಶನ ಬಹುಮುಖ್ಯ ಪಾತ್ರವಹಿಸಿದೆ. ಐಟಿ, ಬಿಟಿ ಮತ್ತು ಪ್ರವಾಸೋದ್ಯಮದಂತಹ ಮಹತ್ವದ ಖಾತೆಗಳ ಜವಾಬ್ದಾರಿ ವೇಳೆ, ಸಂಪುಟದಲ್ಲಿನ ಅತಿ ಕಿರಿಯ ಸಚಿವ ಎಂಬ ಹಿಂಜರಿಕೆ ಉಂಟಾಗದಂತೆ ನನ್ನಲ್ಲಿ ಆತವಿಶ್ವಾಸ ತುಂಬಿದ್ದರು.

ಜೊತೆಗೆ, ಜನಪರ ಯೋಜನೆಗಳನ್ನು ರೂಪಿಸಲು ಸ್ವಾತಂತ್ರ್ಯ ನೀಡಿದರು. ಪ್ರಸಕ್ತ ಅವಧಿಯಲ್ಲಿಯೂ ಎರಡು ಪ್ರಮುಖ ಖಾತೆಗಳ ಜವಾಬ್ದಾರಿಯುತ ಹೊಣೆಗಾರಿಕೆಯಲ್ಲಿ ಅವರ ಮಾರ್ಗದರ್ಶನ ಮೌಲ್ಯಯುತವಾಗಿತ್ತು ಎಂದಿದ್ದಾರೆ.

ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌‍ ಪಕ್ಷವು ಭ್ರಷ್ಟಾಚಾರಮುಕ್ತ ಆಡಳಿತ, ಅಭಿವೃದ್ಧಿಪರ ಕೆಲಸಗಳನ್ನು ಮಾಡಿದೆ. ಗ್ಯಾರಂಟಿ ಯೋಜನೆಗಳು ಜನರಿಗೆ ಆರ್ಥಿಕ ಶಕ್ತಿ ತುಂಬಿವೆ. ಇಂತಹ ಮುತ್ಸದ್ಧಿ ನಾಯಕರ ಸಂಪುಟದಲ್ಲಿ ಸಚಿವ ಸ್ಥಾನ ನಿಭಾಯಿಸಿರುವುದು ನನಗೆ ಹೆಮೆಯ ಸಂಗತಿ ಎಂದಿದ್ದಾರೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನದಿಂದ ನಿರ್ಗಮಿಸಿರುವುದು ನಮೆಲ್ಲರಿಗೂ ಭಾವುಕ ಸಂಗತಿ. ತಮ ಮೌಲ್ಯಗಳಿಗೆ ಕಟಿಬದ್ಧರಾಗಿ, ಸಮಾಜಮುಖಿ ಕಾರ್ಯಗಳಿಂದ ಜನರಿಗೆ ಹತ್ತಿರವಾಗಿದ್ದ ಸಿದ್ದರಾಮಯ್ಯ ಅವರ ಕೊಡುಗೆಗಳನ್ನು ನೆನಪಿಸಿಕೊಳ್ಳುವುದಾಗಿ ಹೇಳಿದ್ದಾರೆ.
ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸುವ ಮೂಲಕ, ಕೋಮುವಾದಿ ಶಕ್ತಿಗಳಿಂದ ರಾಜ್ಯವನ್ನು ರಕ್ಷಿಸುವ ಅಗತ್ಯ ಇದೆ. ಸಿದ್ದರಾಮನ ಹುಂಡಿಯಿಂದ ವಿಧಾನಸೌಧದವರೆಗೆ ಅವರ ರಾಜಕೀಯ ಜೀವನ ಮುಂಬರುವ ಪೀಳಿಗೆಗೂ ಪ್ರೇರಣೆಯ ಶಾಶ್ವತ ಚಿಲುಮೆಯಾಗಿರಲಿದೆ ಎಂದಿದ್ದಾರೆ.

RELATED ARTICLES

Latest News