ಬೆಂಗಳೂರು, ಜೂ.4-ಚಿನಿವಾರಪೇಟೆಯಲ್ಲಿ ಚಿನ್ನದ ದರವು ಕಳೆದ ಆರು ದಿನಗಳಿಂದ ಇಳಿಮುಖವಾಗಿದೆ. ಮೇ 26ರ ಬಳಿಕ ನಿರಂತರ ಇಳಿಕೆಯಾಗುತ್ತಿದ್ದ ಚಿನ್ನದ ದರವು ಮೇ 29ರಂದು ಮಾತ್ರ ಅಲ್ಪ ಚೇತರಿಕೆ ಕಂಡಿತ್ತು. ಅನಂತರ ಇಳಿಮುಖವಾಗಿಯೇ ಸಾಗುತ್ತಿದೆ. ಆದರೆ, ಬೆಳ್ಳಿ ದರ ಮಾತ್ರ ಏರಿಳಿತವಿಲ್ಲದೆ, ಸ್ಥಿರವಾಗಿದೆ.
ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ, ಜೂನ್ 30ರಿಂದ ಚಿನ್ನದ ದರವು ಸತತ ಇಳಿಕೆಯಾಗುತ್ತಿದೆ. ಮೇ 30, ಜೂನ್ 2,3ರಂದು ಮಾತ್ರ ದರದಲ್ಲಿ ವ್ಯತ್ಯಾಸವಿಲ್ಲದೆ, ಸ್ಥಿರವಾಗಿದೆ. ಇಂದು ಬೆಳಿಗ್ಗೆ 24 ಕ್ಯಾರೆಟ್ ಚಿನ್ನವು ಒಂದು ಗ್ರಾಂಗೆ 11 ರೂ.ನಷ್ಟು ಕಡಿಮೆಯಾಗಿದ್ದು, 15,611 ರೂಪಾಯಿಯಷ್ಟಿದೆ.
22 ಕ್ಯಾರೆಟ್ನ ಚಿನ್ನವು ಒಂದು ಗ್ರಾಂಗೆ 10 ರೂ.ನಷ್ಟು ಇಳಿಕೆಯಾಗಿದ್ದು, 14,310 ರೂಪಾಯಿಯಷ್ಟಿದೆ.18 ಕ್ಯಾರೆಟ್ನ ಚಿನ್ನವು ಕೇವಲ 9 ರೂ.ನಷ್ಟು ಮಾತ್ರ ಇಳಿಕೆಯಾಗಿದ್ದು, 11,708 ರೂಪಾಯಿಯಷ್ಟಿದೆ. ಆದರೆ, ಪ್ಲಾಟಿನಮ್ ದರ ಸ್ಥಿರವಾಗಿದ್ದು, 1ಂ ಗ್ರಾಂಗೆ 59,380 ರೂಪಾಯಿಯಷ್ಟಿದೆ.
ಕಳೆದ ಒಂದು ವಾರದಿಂದ ಬೆಳ್ಳಿ ದರವು ಏರಿಳಿತವಿಲ್ಲದೆ, ಸ್ಥಿರವಾಗಿದೆ. ಮೇ 29ರಂದು ಒಂದು ಕೆ.ಜಿ.ಬೆಳ್ಳಿ ದರವು ಐದು ಸಾವಿರ ರೂಪಾಯಿಯಷ್ಟು ಏರಿಕೆಯಾಗಿದ್ದು, 2.75 ಲಕ್ಷ ರೂಪಾಯಿಯಿಂದ 2.80 ಲಕ್ಷ ರೂಪಾಯಿಗೆ ತಲುಪಿತ್ತು. ಅಂದಿನಿಂದ ಯಾವುದೇ ಏರಿಳಿತವಿಲ್ಲದೆ, ಅದೇ ದರ ಮುಂದುವರೆದಿದೆ.
