Homeರಾಜ್ಯಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್ ಪ್ರೆಸ್‌‍ ರೈಲುಗಳ ಸೇವೆ ವಿಸ್ತರಣೆ

ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್ ಪ್ರೆಸ್‌‍ ರೈಲುಗಳ ಸೇವೆ ವಿಸ್ತರಣೆ

Special Express Trains Service Extension Between Hubli and Chikkamagaluru

ಚಿಕ್ಕಮಗಳೂರು, ಜು.4- ನೈಋತ್ಯ ರೈಲ್ವೆಯು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ಚಲಿಸುವ ವಿಶೇಷ ಎಕ್ಸ್ ಪ್ರೆಸ್‌‍ ರೈಲುಗಳ ಸೇವೆಯನ್ನು ವಿಸ್ತರಿಸಲು ನಿರ್ಧರಿಸಿದೆ.

ಈ ಹಿಂದೆ ಜೂ.21 ರವರೆಗೆ ಮಾತ್ರ ಚಲಾಯಿಸಲು ನಿಗದಿಪಡಿಸಲಾಗಿದ್ದ ಈ ರೈಲುಗಳ ಅವಧಿಯನ್ನು ಈಗ ವಿಸ್ತರಿಸಲಾಗಿದ್ದು, ಜುಲೈ ತಿಂಗಳಿನಲ್ಲಿ ತಲಾ ನಾಲ್ಕು ಹೆಚ್ಚುವರಿ ಟ್ರಿಪ್‌ಗಳನ್ನು ಇವು ನಡೆಸಲಿವೆ.

ಇದರ ಅನ್ವಯ, ರೈಲು ಸಂಖ್ಯೆ-07341 ಎಸ್‌‍ಎಸ್‌‍ಎಸ್‌‍ ಹುಬ್ಬಳ್ಳಿ ಚಿಕ್ಕಮಗಳೂರು ದ್ವಿ-ವಾರದ (ಶನಿವಾರ ಮತ್ತು ಭಾನುವಾರ) ಎಕ್ಸ್ ಪ್ರೆಸ್‌‍ ವಿಶೇಷ ರೈಲು ಹಾಗೂ ರೈಲು ಸಂಖ್ಯೆ 07342 ಚಿಕ್ಕಮಗಳೂರು ಎಸ್‌‍ಎಸ್‌‍ಎಸ್‌‍ ಹುಬ್ಬಳ್ಳಿ ದ್ವಿ-ವಾರದ ಎಕ್ಸ್ ಪ್ರೆಸ್‌‍ ವಿಶೇಷ ರೈಲುಗಳು ಇಂದು, ಜು.5, ಜು.11 ಮತ್ತು ಜು.12 ರಂದು ಸಂಚಾರ ನಡೆಸಲಿವೆ.

ಮಲೆನಾಡು ಮತ್ತು ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಈ ಮಹತ್ವದ ನಿರ್ಧಾರ ಕೈಗೊಂಡಿದೆ.

RELATED ARTICLES
spot_img

Latest News