Tuesday, April 21, 2026
Homeರಾಜ್ಯರೈತರ ರಾಗಿ ಹಣಕ್ಕೆ ಸಿಬ್ಬಂದಿಗಳು ಕನ್ನ

ರೈತರ ರಾಗಿ ಹಣಕ್ಕೆ ಸಿಬ್ಬಂದಿಗಳು ಕನ್ನ

Staff steals farmers' money for millet

ಮಧುಗಿರಿ, ಮಾ.1- ದೇವರು ಕೊಟ್ಟರೂ ಪೂಜಾರಿ ಕೊಡನು ಎಂಬ ಗಾದೆಯಂತೆ ರೈತರ ರಾಗಿಗೆ ಸರ್ಕಾರ ಸಂಪೂರ್ಣ ಬೆಂಬಲ ಬೆಲೆ ನೀಡಿದರೂ ಈ ರಾಗಿ ತೂಗುವ ಸಿಬ್ಬಂದಿಗಳು ರೈತರ ರಾಗಿಗೆ ಇಲಿಯಂತೆ ಕನ್ನ ಹಾಕುತ್ತಿದ್ದು 1 ಮೂಟೆಗೆ 50.2 ಕೆಜಿ ಇರಬೇಕಿದ್ದು ರೈತರಿಂದ 1 ಮೂಟೆ 52. 2 ಕೆಜಿಯಂತೆ ತೂಗುತ್ತಿದ್ದು ಈ ಕೇಂದ್ರದಲ್ಲಿ ಒಟ್ಟಾರೆ 18500 ಕ್ವಿಂಟಾಲ್‌ ರಾಗಿಗೆ ರೈತರು ನೋಂದಣಿ ಮಾಡಿಕೊಂಡಿದೆ.

ಸರ್ಕಾರದ ಬೆಂಬಲ ಬೆಲೆ 48.8 ರೂನಂತೆ ಒಟ್ಟಾರೆ 46 ರಿಂದ 47 ಸಾವಿರ ಕೆಜಿ ರಾಗಿಯನ್ನು ಹೆಚ್ಚುವರಿಯಾಗಿ ಪಡೆಯುತ್ತಿರುವ ಅಧಿಕಾರಿಗಳು ಸುಮಾರು 18 ರಿಂದ 20 ಲಕ್ಷ ಹಣ ಲೂಟಿ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದ್ದು ರಾಗಿ ಖರೀದಿ ಕೇಂದ್ರಕ್ಕೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವಂತೆ ಹಾಗೂ ಪ್ರಶ್ನಿಸಲು ಹೋದವರ ಮೇಲೆ ರೌಡಿಗಳಂತೆ ಹಲ್ಲೆ ಮಾಡಲು ಮುಂದಾದವರ ಮೇಲೆ ರೈತರು ಆಗ್ರಹಿಸಿದ್ದು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮಕ್ಕೆ ಮುಂದಾಗುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಪಟ್ಟಣದ ಎಪಿಎಂಸಿ ಯಾರ್ಡ್‌ ನಲ್ಲಿ ತಾಲ್ಲೂಕು ರಾಗಿ ಖರೀದಿ ಕೇಂದ್ರ ಆರಂಭವಾಗಿದ್ದು ರೈತರಿಂದ ಕಳೆದ 3 ದಿನಗಳಿಂದ ರಾಗಿ ಖರೀದಿ ಮಾಡಲಾಗುತ್ತಿದೆ. ಸರ್ಕಾರವು ರೈತರ ಕೆಜಿ ರಾಗಿಗೆ 48. 80 ರೂ.ಗಳನ್ನು ನೀಡುತ್ತಿದ್ದು ಖಾತೆಗೆ ನೇರವಾಗಿ ಹಣ ಬೀಳುತ್ತಿದೆ. ಆದರೆ ಇದರಲ್ಲೂ ಹಣ ಲೂಟಿ ಹೊಡೆಯುವ ಮನಸ್ಸುಳ್ಳ ಅಧಿಕಾರಿಗಳು 1 ಚೀಲ ರಾಗಿಯು 50.2 ಕೆಜಿ ಮಾತ್ರ ತೂಗಬೇಕು. ಆದರೆ ಇಲ್ಲಿ ಕೇಂದ್ರ ಆರಂಭವಾದ ದಿನಗಳಿಂದ ಯಾರೂ ಹೇಳುವವರಿಲ್ಲದೆ ಅಧಿಕಾರಿಗಳು, ಸಿಬ್ಬಂದಿಗಳು ದೌರ್ಜನ್ಯದಿಂದ ರೈತರಿಂದ ಒಂದು ಚೀಲ ರಾಗಿಯನ್ನು52. 2 ಕೆಜಿಯಷ್ಟು ಖರೀದಿಸುತ್ತಿದ್ದಾರೆ. ಇದರಿಂದ ಕನಿಷ್ಠ ಒಂದು ಚೀಲ ರಾಗಿಗೆ 2 ಕೆಜಿ ಹೆಚ್ಚುವರಿ ರಾಗಿಯನ್ನು ಪಡೆಯಲಾಗುತ್ತಿದೆ.

ರೈತರ ಪರವಾಗಿ ವೀರೇಂದ್ರ ಮಾತನಾಡಿ, ` ಇಲ್ಲಿ ರೈತರಿಂದ ರಾಗಿ ಲೂಟಿ ನಡೆಯುತ್ತಿದೆ ಒಂದು ಚೀಲಕ್ಕೆ ಹೆಚ್ಚುವರಿಯಾಗಿ 2 ಕೆಜಿ ರಾಗಿ ಖರೀದಿಸುತ್ತಿರುವ ಅಧಿಕಾರಿಗಳು ರೈತರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ. ಇದೇ ರೀತಿ ಈ ಕೇಂದ್ರದಿಂದ 18,500 ಕ್ವಿಂಟಾಲ್‌ ರಾಗಿ ಖರೀದಿಗೆ ನೋಂದಣಿಯಾಗಿದ್ದು ಅದರಂತೆ 18,500 ಕ್ವಿಂಟಾಲ್‌ ರಾಗಿಗೆ ಬೆಂಬಲ ಬೆಲೆ 48.8 ರೂನಂತೆ ಒಟ್ಟಾರೆ 46 ರಿಂದ 47 ಸಾವಿರ ಕೆ.ಜಿ. ಆಗಲಿದ್ದು ಇದರ ಮೌಲ್ಯವೇ 18 ರಿಂದ 20 ಲಕ್ಷ ಆಗಲಿದೆ. ಈ ಹಣವನ್ನು ಅಧಿಕಾರಿಗಳು ಲೂಟಿ ಮಾಡುತ್ತಿದ್ದರೂ ಯಾರೂ ಕೇಳುವವರಿಲ್ಲ. ಇಂತಹ ಕೀಟದಂತ ಅಧಿಕಾರಿಗಳ ಮೇಲೆ ಮೇಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ರೈತರಿಗೆ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿದ್ದಾರೆ.

RELATED ARTICLES

Latest News