Homeರಾಜ್ಯಪಿ.ರಾಮಯ್ಯನವರಿಗೆ ನಾಳೆ ಶ್ರದ್ಧಾಂಜಲಿ : 'ನಾನು ಹಿಂದೂ ರಾಮಯ್ಯ' ಕೃತಿಯ 2ನೇ ಮುದ್ರಣ ಲೋಕಾರ್ಪಣೆ

ಪಿ.ರಾಮಯ್ಯನವರಿಗೆ ನಾಳೆ ಶ್ರದ್ಧಾಂಜಲಿ : ‘ನಾನು ಹಿಂದೂ ರಾಮಯ್ಯ’ ಕೃತಿಯ 2ನೇ ಮುದ್ರಣ ಲೋಕಾರ್ಪಣೆ

Tribute to P. Ramaiah tomorrow: 2nd edition of 'Nanun Hindu Ramaiah' to be released

ಬೆಂಗಳೂರು,ಫೆ.16- ಕರ್ನಾಟಕ ಗಾಂಧಿ ಸಾರಕ ನಿಧಿ, ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಬೆಂಗಳೂರು ಪ್ರೆಸ್‌‍ಕ್ಲಬ್‌, ಬೆಂಗಳೂರು ವರದಿಗಾರರ ಕೂಟದ ಸಂಯುಕ್ತಾಶ್ರಯದಲ್ಲಿ ಹಿರಿಯ ಪತ್ರಕರ್ತ ಹಾಗೂ ವಿಧಾನಪರಿಷತ್‌ ಸದಸ್ಯ ಪಿ.ರಾಮಯ್ಯ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮವನ್ನು ನಾಳೆ ಮಧ್ಯಾಹ್ನ 3.30 ಕ್ಕೆ ಗಾಂಧಿಭವನದಲ್ಲಿ ಹಮಿಕೊಳ್ಳಲಾಗಿದೆ.

ಇದೇ ಸಂದರ್ಭದಲ್ಲಿ ಅಭಿಮಾನಿ ಪ್ರಕಾಶನದ ಹೊರತಂದಿದ್ದ ನಾನು ಹಿಂದೂ ರಾಮಯ್ಯ 60 ವರ್ಷಗಳ ಅನುಭವ ಕಥನ ಕೃತಿಯ 2ನೇ ಮುದ್ರಣದ ಲೋಕಾರ್ಪಣೆಯೂ ನೆರವೇರಲಿದೆ.
ಶ್ರದ್ಧಾಂಜಲಿ ಹಾಗೂ ಕೃತಿ ಬಿಡುಗಡೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ವಹಿಸಲಿದ್ದು, ನಾಡೋಜ ಡಾ.ವೂಡೇ ಪಿ.ಕೃಷ್ಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಬೆಂಗಳೂರು ಪ್ರೆಸ್‌‍ಕ್ಲಬ್‌ ಅಧ್ಯಕ್ಷ ಆರ್‌.ಶ್ರೀಧರ, ಬೆಂಗಳೂರು ವರದಿಗಾರರ ಕೂಟದ ಅಧ್ಯಕ್ಷ ಆರ್‌.ಟಿ.ವಿಠ್ಠಲಮೂರ್ತಿ ಸೇರಿದಂತೆ ಮಾಧ್ಯಮಗಳ ಸಂಘಟನೆಗಳ ಪದಾಧಿಕಾರಿಗಳು, ಮಾಧ್ಯಮ ಮಿತ್ರರು, ಪಿ.ರಾಮಯ್ಯ ಕುಟುಂಬದವರು ಭಾಗವಹಿಸಲಿದ್ದಾರೆ.

RELATED ARTICLES

Latest News