Wednesday, April 29, 2026
Homeರಾಜ್ಯಕೆರೆಯಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿಗಳಿಬ್ಬರು ಕೆಸರಿನಲ್ಲಿ ಸಿಲುಕಿ ಸಾವು

ಕೆರೆಯಲ್ಲಿ ಈಜಲು ತೆರಳಿದ್ದ ವಿದ್ಯಾರ್ಥಿಗಳಿಬ್ಬರು ಕೆಸರಿನಲ್ಲಿ ಸಿಲುಕಿ ಸಾವು

Two students who went for swimming in the lake got stuck in the mud and died

ಸಕಲೇಶಪುರ,ಮಾ.8- ಈಜಲು ಕೆರೆಗಿಳಿದ ವಿದ್ಯಾರ್ಥಿಗಳಿಬ್ಬರು ಕೆಸರಿನಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ತಾಲೂಕಿನ ಓಂನಗರದಲ್ಲಿ ನಡೆದಿದೆ.ಮತರನ್ನು ಭರತ್‌ (18) ಮತ್ತು ಮಿಥುನ್‌ (19) ಎಂದು ಗುರುತಿಸಲಾಗಿದೆ.

ಪಾಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಮಿಥುನ್‌ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದನು. ನಿನ್ನೆ ನಡೆಯುತ್ತಿದ್ದ ಪರೀಕ್ಷೆಗೆ ಆತ ಗೈರಾಗಿದ್ದನು. ಭರತ್‌ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದನು.

ನಾಲ್ವರು ಸ್ನೇಹಿತರು ಸಮೀಪದ ಕಾಫಿ ತೋಟವೊಂದರ ಕೆರೆಗೆ ಈಜಲು ತೆರಳಿದ್ದರು. ಈ ವೇಳೆ ಭರತ್‌ ಮತ್ತು ಮಿಥುನ್‌ ಕೆರೆಯೊಳಗಿನ ಕೆಸರಿನಲ್ಲಿ ಸಿಲುಕಿ ಮುಳುಗಿದರೆಂದು ತಿಳಿದುಬಂದಿದೆ. ಇಬ್ಬರು ಮುಳುಗುತ್ತಿರುವುದನ್ನು ಕಂಡ ಉಳಿದ ಇಬ್ಬರು ವಿದ್ಯಾರ್ಥಿಗಳು ಭಯಗೊಂಡು ಕೆರೆಯಿಂದ ಹೊರಬಂದಿದ್ದಾರೆ.

ನಂತರ ಸ್ಥಳೀಯರು ಕೆರೆಯಲ್ಲಿ ಶೋಧ ಕಾರ್ಯ ನಡೆಸಿ ಇಬ್ಬರ ಮತದೇಹಗಳನ್ನು ಹೊರತೆಗೆದರು. ಘಟನೆ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೋಷಕರು ಹಾಗೂ ಬಂಧುಗಳ ಆಕ್ರಂದನ ಮುಗಿಲು ಮುಟ್ಟಿತು.

ಘಟನೆಯ ಮಾಹಿತಿ ತಿಳಿದು ಸಕಲೇಶಪುರ ಗ್ರಾಮಾಂತರ ಪೊಲೀಸ್‌‍ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News