ಕನಕಪುರ,ಮಾ.8- ವಿಷಕಾರಿ (ತಪಾಲು ಮರದಕಾಯಿ) ಮೇವು ತಿಂದು 4 ಮೌಲ್ಯದ 27 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಸಾತನೂರು ಹೋಬಳಿ ಯಲವಳ್ಳಿ ಸಮೀಪದ ಗೊಲ್ಲರದೊಡ್ಡಿ ಗ್ರಾಮದ ಬಳಿ ನಡೆದಿದೆ.
ಗೊಲ್ಲರದೊಡ್ಡಿ ಗ್ರಾಮದ ಶಾಂತಮ ಮತ್ತು ತಿಮಯ್ಯ ಎಂಬುವವರಿಗೆ ಸೇರಿದ 24 ಕುರಿ ಮತ್ತು ಒಂದು ಮೇಕೆ ನೂರಾರು ಕುರಿಗಳ ಮಂದೆಯನ್ನು ಮೇಯಿಸಲು ಬಂದಿದ್ದರು. ಊರಿನ ಸಮೀಪದಲ್ಲಿ ಮೇಯುತ್ತಿದ್ದ ಸಂದರ್ಭದಲ್ಲಿ 27 ಕುರಿಗಳು ತಪಾಲು ಮರದಕಾಯಿಯನ್ನು ತಿಂದು ಅಸ್ವಸ್ಥೆಗೊಂಡಿದ್ದವು.
ನಂತರ ಸ್ವಲ್ಪ ಹೊತ್ತಿನಲ್ಲಿಯೇ ಮಲಗಿದ್ದಲ್ಲಿಯೇ ಕುರಿಗಳು ಸತ್ತು ಹೋಗಿವೆ. ಇದನ್ನು ಕಂಡ ಕುರಿ ಮಾಲೀಕರು ದಿಗ್‌ಬ್ರಾಂತಿಯಾಗಿ ಪಶು ವೈದ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದಾರೆ.
ಪಶು ವೈದ್ಯಾಧಿಕಾರಿ ಯು.ಸಿ.ಕುಮಾರ್ ಸ್ಥಳಕ್ಕೆ ಭೇಟಿ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ನಡೆಸಲು ಸೂಚಿಸಿದ್ದಾರೆ. ನಂತರ ಮಾತನಾಡಿ, ಸರ್ಕಾರದ ಅನುಗ್ರಹ ಯೋಜನೆಯಡಿ ಕುರಿ ಮಾಲೀಕರಿಗೆ ಪರಿಹಾರ ದೊರಕಲಿದೆ ಎಂದು ಹೇಳಿದರು.
