Homeರಾಷ್ಟ್ರೀಯತಮಿಳುನಾಡು ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಯೂಟದಲ್ಲಿ ಚಿಕನ್‌ ಬಿರಿಯಾನಿ

ತಮಿಳುನಾಡು ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಯೂಟದಲ್ಲಿ ಚಿಕನ್‌ ಬಿರಿಯಾನಿ

Tamil Nadu may soon serve chicken biryani in government schools

ಚನ್ನೈ, ಜು.30- ತಮಿಳುನಾಡು ಸರ್ಕಾರವು ಶಾಲಾ ವಿದ್ಯಾರ್ಥಿಗಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟದ ಮೆನುವಿನಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಮುಂದಾಗಿದೆ. ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವಾರಕ್ಕೊಮೆ ಚಿಕನ್‌ ಬಿರಿಯಾನಿ ಪರಿಚಯಿಸುವ ಪ್ರಸ್ತಾವನೆಯನ್ನು ರಾಜ್ಯದ ಶಾಲಾ ಶಿಕ್ಷಣ ಸಚಿವ ರಾಜಮೋಹನ್‌ ಅವರು ಮುಖ್ಯಮಂತ್ರಿ ಸಿ. ಜೋಸೆಫ್‌ ವಿಜಯ್‌ ಅವರ ಮುಂದಿಟ್ಟಿದ್ದಾರೆ. ಈ ಕುರಿತು ಪ್ರಸ್ತುತ ಅಂತಿಮ ಹಂತದ ಪರಿಶೀಲನೆ ನಡೆಯುತ್ತಿದೆ.

ಈ ಪ್ರಸ್ತಾವನೆಯ ಕುರಿತು ಮಾತನಾಡಿರುವ ಶಿಕ್ಷಣ ಸಚಿವರು, ತಮಿಳುನಾಡಿನಲ್ಲಿ ಇದುವರೆಗೆ ಬಂದ ಪ್ರತಿಯೊಂದು ಪ್ರಮುಖ ರಾಜಕೀಯ ಯುಗವೂ ಶಾಲಾ ಪೌಷ್ಟಿಕಾಂಶ ಕಾರ್ಯಕ್ರಮವನ್ನು ಬಲಪಡಿಸುತ್ತಾ ಬಂದಿದೆ ಎಂಬುದನ್ನು ಸರಿಸಿದ್ದಾರೆ.

1950ರ ದಶಕದಲ್ಲಿ ಮಧ್ಯಾಹ್ನ ಊಟದ ಯೋಜನೆಗೆ ಅಡಿಪಾಯ ಹಾಕಿದರೆ, ಈ ಯೋಜನೆಯನ್ನು ವಿಸ್ತರಿಸಿ ಪೌಷ್ಟಿಕ ಊಟದ ಕಾರ್ಯಕ್ರಮವಾಗಿ ಪರಿವರ್ತಿಸಿದರು. ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ, ವಾರವಿಡೀ ಮೊಟ್ಟೆ ವಿತರಣೆಯನ್ನು ವಿಸ್ತರಿಸಿ ಮಕ್ಕಳಿಗೆ ಅನುಕೂಲ ಕಲ್ಪಿಸಿದ್ದರು.

ಈ ಪರಂಪರೆಯನ್ನು ಮುಂದುವರಿಸುತ್ತಾ, ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಲ್ಲಿ ಪೌಷ್ಟಿಕಾಂಶ ಮಟ್ಟವನ್ನು ಹೆಚ್ಚಿಸಲು ಮತ್ತು ಶಾಲೆಗಳಿಗೆ ವಿದ್ಯಾರ್ಥಿಗಳ ಹಾಜರಾತಿಯನ್ನು ಇನ್ನಷ್ಟು ಸುಧಾರಿಸಲು ಚಿಕನ್‌ ಬಿರಿಯಾನಿಯನ್ನು ಪರಿಚಯಿಸುವ ಬಯಕೆಯನ್ನು ಸಚಿವರು ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಮಧ್ಯಾಹ್ನದ ಊಟದ ಯೋಜನೆಯಡಿ ಪ್ರತಿ ವಿದ್ಯಾರ್ಥಿಗೆ ಅಂದಾಜು ರೂ. 15 ರಷ್ಟು ಅನುದಾನವನ್ನು ಹಂಚಿಕೆ ಮಾಡಲಾಗುತ್ತಿದೆ. ಗೋಧಿ ಮತ್ತು ರವೆ ಉಪಾದಂತಹ ಪುನರಾವರ್ತಿತ ಆಹಾರ ಪದಾರ್ಥಗಳನ್ನು ಬದಲಾಯಿಸಿ, ಮಕ್ಕಳಿಗೆ ಹೆಚ್ಚು ರುಚಿಕರವಾದ ಹಾಗೂ ಪೌಷ್ಟಿಕಾಂಶಯುಕ್ತ ಆಹಾರವನ್ನು ಒದಗಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ.

ತಮಿಳುನಾಡಿನ ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ವಾರಕ್ಕೊಮೆ ಚಿಕನ್‌ ಬಿರಿಯಾನಿ ಬಡಿಸುವ ಪ್ರಸ್ತಾಪವಿದೆ. ಶಾಲಾ ಶಿಕ್ಷಣ ಸಚಿವ ರಾಜಮೋಹನ್‌ ಅವರು ಈ ಕುರಿತು ಮಾಹಿತಿ ನೀಡಿದ್ದು, ಪ್ರಸ್ತಾವನೆಯು ಮುಖ್ಯಮಂತ್ರಿ ಸಿ. ಜೋಸೆಫ್‌ ವಿಜಯ್‌ ಅವರ ಪರಿಶೀಲನೆಯಲ್ಲಿದೆ.

1950ರ ದಶಕದಲ್ಲಿ ಕೆ. ಕಾಮರಾಜರ್‌ ಅವರಿಂದ ಆರಂಭವಾದ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಕಾಲಕಾಲಕ್ಕೆ ವಿವಿಧ ನಾಯಕರು ಹೊಸ ಆಯಾಮಗಳನ್ನು ನೀಡುತ್ತಾ ಬಂದಿದ್ದಾರೆ.
ತಮಿಳುನಾಡಿನಲ್ಲಿ ಈಗಾಗಲೇ ಸೆಪ್ಟೆಂಬರ್‌ 2022ರಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಮುಖ್ಯಮಂತ್ರಿಗಳ ಉಪಾಹಾರ ಯೋಜನೆ (ನಂತರ ೞಪೆರುಂತಲೈವರ್‌ ಕಾಮರಾಜರ್‌ ಉಪಾಹಾರ ಯೋಜನೆೞ ಎಂದು ಮರುನಾಮಕರಣ) ಜಾರಿಯಲ್ಲಿದೆ.

ಈಗ ಮಧ್ಯಾಹ್ನದ ಬಿಸಿಯೂಟದಲ್ಲಿ ಚಿಕನ್‌ ಬಿರಿಯಾನಿ ಸೇರ್ಪಡೆಯಾದರೆ, ಇದು ಇತ್ತೀಚಿನ ವರ್ಷಗಳಲ್ಲಿ ಶಾಲಾ ಊಟದ ಮೆನುವಿನಲ್ಲಿ ನಡೆಯಲಿರುವ ಅತ್ಯಂತ ಜನಪರ ಹಾಗೂ ಮಹತ್ವದ ಬದಲಾವಣೆಗಳಲ್ಲಿ ಒಂದಾಗಲಿದೆ. ಈ ಪ್ರಸ್ತಾವನೆಗೆ ಮುಖ್ಯಮಂತ್ರಿ ವಿಜಯ್‌ ಅವರು ಅಧಿಕೃತ ಅನುಮೋದನೆ ನೀಡಲಿದ್ದಾರೆಯೇ ಎಂಬುದು ಸದ್ಯದಲ್ಲೇ ಸ್ಪಷ್ಟವಾಗಲಿದೆ.

RELATED ARTICLES

Latest News