Homeಬೆಂಗಳೂರುತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ 'ಬಿಸಿಲ್ಲಾ ನಗರ' ಎಂದು ಮರುನಾಮಕರಣ ಮಾಡಲು ಆಗ್ರಹ

ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ‘ಬಿಸಿಲ್ಲಾ ನಗರ’ ಎಂದು ಮರುನಾಮಕರಣ ಮಾಡಲು ಆಗ್ರಹ

ಬೆಂಗಳೂರು, ಸೆ.15- ನಮ ಮೆಟ್ರೋದ ಪಿಂಕ್‌ ಲೈನ್‌ ವ್ಯಾಪ್ತಿಯ ತಾವರೆಕೆರೆ ನಿಲ್ದಾಣಕ್ಕೆ ಬಿಸಿಲ್ಲಾ ನಗರ ನಿಲ್ದಾಣ ಎಂದು ಮರು ನಾಮಕರಣ ಮಾಡುವಂತೆ ಒತ್ತಾಯ ಮಾಡಲಾಗುತ್ತಿದೆ. ಕೆಲ ದಿನಗಳ ಹಿಂದೆ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಕೆಲವು ಮೆಟ್ರೋ ನಿಲ್ದಾಣಗಳ ಹೆಸರು ಬದಲಾವಣೆ ಮಾಡಬೇಕು ಎಂದು ನೀಡಿದ್ದ ಸಲಹೆ ಬೆನ್ನಲ್ಲೇ ಈ ಒತ್ತಾಯ ಮಾಡಲಾಗಿದೆ.

ನಮ ಮೆಟ್ರೋದ ಪಿಂಕ್‌ ಲೈನ್‌ ವ್ಯಾಪ್ತಿಯ ತಾವರೆಕೆರೆ ಮೆಟ್ರೋ ನಿಲ್ದಾಣಕ್ಕೆ ಬಿಸ್ಮಿಲ್ಲಾ ನಗರ ನಿಲ್ದಾಣ ಎಂದು ಮರು ನಾಮಕರಣ ಮಾಡಬೇಕೆಂಬ ಬೇಡಿಕೆ ಕೇಳಿಬಂದಿದೆ. ಸ್ಥಳೀಯ ನಿವಾಸಿಗಳು ಹಾಗೂ ಕೆಲ ಮುಸ್ಲಿಂ ಸಮುದಾಯದ ಮುಖಂಡರ ನಿಯೋಗ ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಪಿ.ಸಿ. ಜಾಫರ್‌ ಅವರನ್ನು ಭೇಟಿಯಾಗಿ ಮನವಿ ಪತ್ರ ಸಲ್ಲಿಸಿದೆ.

ತಾವರೆಕೆರೆ ಮೆಟ್ರೋ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಸ್ಮಿಲ್ಲಾ ನಗರ ಅತ್ಯಂತ ಪ್ರಮುಖ ಹಾಗೂ ದೊಡ್ಡ ಬಡಾವಣೆಯಾಗಿದೆ. ಈ ಭಾಗದಲ್ಲಿ ಮುಸ್ಲಿಂ ಸಮುದಾಯದ ಜನಸಂಖ್ಯೆ ಹೆಚ್ಚಾಗಿದ್ದು, ಪ್ರತಿದಿನ ಸಾವಿ ರಾರು ಸ್ಥಳೀಯ ನಿವಾಸಿಗಳು ಸಂಚಾರಕ್ಕಾಗಿ ಇದೇ ನಿಲ್ದಾಣ ವನ್ನೇ ಅವಲಂಬಿ ಸಲಿದ್ದಾರೆ.

ಹೀಗಾಗಿ ನಿಲ್ದಾಣಕ್ಕೆ ಬಿಸ್ಮಿಲ್ಲಾ ನಗರ ಮೆಟ್ರೋ ನಿಲ್ದಾಣ ಎಂದು ಹೆಸರಿಡಬೇಕು, ಇಲ್ಲವೇ ಸ್ಥಳೀಯರ ಅನುಕೂಲಕ್ಕಾಗಿ ಬಿಸ್ಮಿಲ್ಲಾ ನಗರ – ತಾವರೆಕೆರೆ ಎಂದು ಜಂಟಿ ಹೆಸರನ್ನು ನಾಮಕರಣ ಮಾಡಬೇಕು ಎಂದು ನಿಯೋಗ ಮನವಿ ಮಾಡಿಕೊಂಡಿದೆ.

ಕೆಲ ದಿನಗಳ ಹಿಂದೆ ಸಚಿವ ರಾಮಲಿಂಗಾರೆಡ್ಡಿ ಅವರು ಇದೇ ತಾವರೆಕೆರೆ ನಿಲ್ದಾಣ ಸೇರಿದಂತೆ ಒಟ್ಟು ಮೂರು ನಿಲ್ದಾಣಗಳ ಹೆಸರು ಬದಲಾವಣೆಗೆ ಬಿಎಂಆರ್‌ಸಿಎಲ್‌ಗೆ ಪತ್ರ ಬರೆದಿದ್ದರು. ಆದರೆ ಅವರು ತಾವರೆಕೆರೆ ನಿಲ್ದಾಣಕ್ಕೆ ಎಸ್‌‍.ಜಿ. ಪಾಳ್ಯ ಮೆಟ್ರೋ ನಿಲ್ದಾಣ ಎಂದು ಹೆಸರಿಡುವಂತೆ ಪ್ರಸ್ತಾಪಿಸಿದ್ದರು.

ಜೊತೆಗೆ, ಸ್ಥಳೀಯ ಹೆಸರುಗಳನ್ನು ಬಳಸುವುದರಿಂದ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂಬ ಕಾರಣದಿಂದ ಜೆ.ಪಿ. ನಗರ 4ನೇ ಹಂತದ ನಿಲ್ದಾಣವನ್ನು ಎನ್‌‍.ಎಸ್‌‍. ಪಾಳ್ಯ ಎಂದೂ ಮತ್ತು ಡೈರಿ ಸರ್ಕಲ್‌ ನಿಲ್ದಾಣವನ್ನು ಲಕ್ಕಸಂದ್ರ ಎಂದೂ ಮರುನಾಮಕರಣ ಮಾಡುವಂತೆ ಸೂಚಿಸಿದ್ದರು.ಸಚಿವರ ಈ ಹೇಳಿಕೆ ಬೆನ್ನಲ್ಲೇ ಮುಸ್ಲಿಂ ನಿಯೋಗ ತಾವರೆಕೆರೆ ನಿಲ್ದಾಣಕ್ಕೆ ಬಿಸಿಲ್ಲಾ ನಗರ ನಿಲ್ದಾಣ ಎಂದು ಮರು ನಾಮಕರಣ ಮಾಡುವಂತೆ ಒತ್ತಾಯಿಸಿರುವುದರಿಂದ ವಿವಾದ ಸೃಷ್ಟಿಯಾಗುವ ಸಾಧ್ಯತೆಗಳಿವೆ.

RELATED ARTICLES
spot_img

Latest News