Homeರಾಜಕೀಯನಮ್ಮ ನೀರು - ನಮ್ಮ ಹಕ್ಕು ಘೋಷಣೆಗೆ ಸೀಮಿತವೇ..? : ಡಾ. ರವಿ ಸಿ.ಟಿ

ನಮ್ಮ ನೀರು – ನಮ್ಮ ಹಕ್ಕು ಘೋಷಣೆಗೆ ಸೀಮಿತವೇ..? : ಡಾ. ರವಿ ಸಿ.ಟಿ

ಚಿಕ್ಕಮಗಳೂರು,ಜು.30-ಕಾವೇರಿ ನದಿ ನೀರಿನ ಕುರಿತ ಮಧ್ಯಂತರ ಆದೇಶದಲ್ಲಿ 3,500 ಕ್ಯೂಸೆಕ್‌ಗೂ ಹೆಚ್ಚು ನೀರನ್ನು ಪ್ರತಿದಿನವೂ ತಮಿಳುನಾಡಿಗೆ ಬಿಡಬೇಕೆಂದು ಆದೇಶಿಸಲಾಗಿದೆ.
ನಾನು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿದ್ದಾಗ, ನಮಗೆ ಬಚಾವತ್‌ ತೀರ್ಪಿನ ಪ್ರಕಾರ ಎಡದಂಡೆ ಮತ್ತು ಬಲದಂಡೆಗೆ 5 ಟಿಎಂಸಿ ನೀರು ನೀಡಬೇಕು, ವಷರ್ದ 11 ತಿಂಗಳು ನೀರು ಹರಿಸಬೇಕು ಎನ್ನುವ ಆದೇಶ ಇದ್ದರೂ, ನೀರು ಬಿಟ್ಟಿಲ್ಲ ಎಂದಿದ್ದರು. ಬಚಾವತ್‌ ತೀರ್ಪು ಹೀಗಿದ್ದರೂ ಮುಖ್ಯಮಂತ್ರಿಗಳು ನೀರು ಬಿಡುವ ಆಲೋಚನೆ ಮಾಡಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಡಾ. ರವಿ ಸಿ.ಟಿ ಹೇಳಿದರು.

ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಮಂಡ್ಯದಲ್ಲಿ ಕುಡಿಯುವ ನೀರಿಗೂ ಒದ್ದಾಡುವ ಪರಿಸ್ಥಿತಿ ಇದೆ ಎಂದು ರೈತರು ಹೇಳುತ್ತಿದ್ದಾರೆ. ವಿರೋಧ ಪಕ್ಷದಲ್ಲಿದ್ದಾಗ ನಮ ನೀರು ನಮ ಹಕ್ಕು ಎಂದು ಚಳುವಳಿ ಮಾಡಿದವರು ನೀವು. ಆಗ ಚಳುವಳಿ ಮಾಡಿದವರು ಈಗ ಮುಖ್ಯಮಂತ್ರಿ ಆಗಿದ್ದೀರಿ. ನಮ ನೀರನ್ನು ಮೊದಲು ನಮ ರೈತರಿಗೆ ಕೊಡಿ. ಆ ಮೂಲಕ ನಮ್ಮ ಹಕ್ಕನ್ನು ಉಳಿಸುವ ಕೆಲಸ ಮಾಡಿ ಎಂದು ಆಗ್ರಹಿಸಿದರು.

ಚಿಕ್ಕಮಗಳೂರು, ಕೊಡಗು, ಮೈಸೂರು, ಹಾಸನ ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬಾಂಗ್ಲಾದೇಶಿ ನಿವಾಸಿಗಳು ಅಸ್ಸಾಂ, ಪಶ್ಚಿಮ ಬಂಗಾಳದ ನಿವಾಸಿಗಳ ರೀತಿಯಲ್ಲಿ ನಕಲಿ ಆಧಾರ್‌ ಕಾರ್ಡ್‌ ಚೀಟಿ ಪಡೆದುಕೊಂಡು ವಾಸಿಸುತ್ತಿದ್ದಾರೆ. ಇದಕ್ಕಿಂತ ವೈಫಲ್ಯ ಇದೆಯೇ, ಎಸ್‌‍ಐಆರ್‌ಒ ನಲ್ಲಿ ನಿವಾಸಿಗಳು ನೋಂದಣಿ ಮಾಡಿಕೊಂಡಿದ್ದಾರೆಯೇ? ನೋಂದಣಿ ಮಾಡಿಕೊಳ್ಳದವರನ್ನು ಪತ್ತೆಹಚ್ಚುವ ಕೆಲಸ ನಡೆಯುತ್ತಿದೆಯೇ? ಎಂದು ರವಿ ಪ್ರಶ್ನಿಸಿದರು.

RELATED ARTICLES
spot_img

Latest News