Tuesday, April 21, 2026
Homeರಾಜ್ಯವಿಲ್ಲಾದಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ : ಪರೋಕ್ಷವಾಗಿ ಸಹಕರಿಸಿದ ಇನ್ನೂ ಮೂವರ ಬಂಧನ

ವಿಲ್ಲಾದಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ : ಪರೋಕ್ಷವಾಗಿ ಸಹಕರಿಸಿದ ಇನ್ನೂ ಮೂವರ ಬಂಧನ

Villa gang rape case: Three more people arrested for indirectly cooperatin

ಬೆಂಗಳೂರು, ಮಾ.1- ಡ್ರಗ್ಸ್ ನೀಡಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಅಮೃತಹಳ್ಳಿ ಠಾಣೆ ಪೊಲೀಸರು ಇನ್ನೂ ಮೂವರನ್ನು ಬಂಧಿಸಿದ್ದಾರೆ.

ಈ ಕೃತ್ಯಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಆಧಾರದಲ್ಲಿ ಶಿವಮೊಗ್ಗ ಮೂಲದ ಶ್ರವಣ್‌ (21), ದಾವಣಗೆರೆ ಜಿಲ್ಲೆಯ ಅನಿರುದ್ಧ್ (33) ಮತ್ತು ಗುಜರಾತ್‌ ರಾಜ್ಯದ ಮೋಹಿತ್‌ ಜೈನ್‌ (23) ಬಂಧಿತರು.

ಈ ಆರೋಪಿಗಳು ಪಾರ್ಟಿಗಳಿಗೆ ಯುವತಿಯರನ್ನು ಬುಕ್‌ ಮಾಡುತ್ತಿದ್ದರು ಎಂಬುದು ಇದುವರೆಗಿನ ತನಿಖೆಯಿಂದ ತಿಳಿದುಬಂದಿದೆ. ಈಗಾಗಲೇ ಈ ಪ್ರಕರಣದಲ್ಲಿ ಕೋಲ್ಕತ್ತಾ ಮೂಲದ ಡಿಕ್ಷನ್‌ ಸಾಂತ್ರಾ (21) ಹಾಗೂ ಹಾಸನ ಜಿಲ್ಲೆ ಸಕಲೇಶಪುರ ಮೂಲದ ನಿಖಿಲ್‌ (34)ನನ್ನು ಬಂಧಿಸಲಾಗಿದೆ.

ಇನ್‌ಸ್ಟ್ರಾಗ್ರಾಮ್‌ ಮೂಲಕ ಯುವತಿಯರ ಸ್ನೇಹ ಬೆಳೆಸಿ ನಂತರ ಫೋಟೋಶೂಟ್‌, ಮಾಡೆಲಿಂಗ್‌ ಹಾಗೂ ಪಾರ್ಟಿ ನೆಪದಲ್ಲಿ ಆಹ್ವಾನಿಸುತ್ತಿದ್ದರು. ಪ್ರಾರಂಭದಲ್ಲಿ ಅವರ ನಂಬಿಕೆ ಗಳಿಸಲು ಪಬ್‌ ಹಾಗೂ ಕೆಫೆಗಳಲ್ಲಿ ಭೇಟಿಯಾಗಿ ಸಭ್ಯರಂತೆ ವರ್ತಿಸುತ್ತಿದ್ದರು. ತದನಂತರದಲ್ಲಿ ಸ್ನೇಹ ಮುಂದುವರೆಸಿ ಪಾರ್ಟಿ ನೆಪದಲ್ಲಿ ವಿಲ್ಲಾಗಳಿಗೆ ಕರೆದೊಯ್ದು ಮತ್ತು ಬರಿಸುವ ಪಾನೀಯ ಕುಡಿಸಿ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ.

ಆರೋಪಿಗಳ ಕೈಗೆ ಸಿಕ್ಕಿಕೊಂಡ ಯುವತಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರೆದಿದೆ. ಈಗಾಗಲೇ ಅಮೃತಹಳ್ಳಿ ಪೊಲೀಸ್‌‍ ಠಾಣೆಯಲ್ಲಿ ದೂರು ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೇಳು ಮಂದಿ ಸಾಕ್ಷ್ಯದಾರರನ್ನು ವಿಚಾರಣೆ ಮಾಡಿದ್ದು, ಅವರ ಹೇಳಿಕೆ ಹಾಗೂ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಇದುವರೆಗೂ ಐದು ಮಂದಿಯನ್ನು ಬಂಧಿಸಲಾಗಿದೆ.

RELATED ARTICLES

Latest News