ಮೈಸೂರು,ಅ.11- ಸಾಂಸ್ಕೃತಿಕ ನಗರಿಯನ್ನು ಬ್ರ್ಯಾಂಡ್ ಮೈಸೂರನ್ನಾಗಿ ಪರಿವರ್ತಿಸಲು ಉದ್ದೇಶಿಸಿರುವುದಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ದಸರಾ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೈಸೂರು ರೇಷೆ, ಮೈಸೂರು ಸ್ಯಾಂಡಲ್ ಸೋಪು ಮೊದಲಾದವು ಜನಪ್ರಿಯವಾಗಿವೆ. ಮೈಸೂರಿಗೆ ಒಂದು ಬ್ರ್ಯಾಂಡ್ ತಂದು ಕೊಡುವ ಉದ್ದೇಶ ಇದೆ ಎಂದು ಹೇಳಿದರು. ಆದಾಯ ಪಾತಾಳಕ್ಕೆ ಕುಸಿದಿದ್ದು, ಬೆಲೆಗಳು ಆಕಾಶಕ್ಕೆ ಏರಿಕೆಯಾಗುತ್ತಿವೆ. ಇಂತಹ ಸಂದರ್ಭದಲ್ಲಿ ರಾಜ್ಯ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ರಾಜ್ಯಕ್ಕೆ ಈಗ ಜಲ ಭಿಕ್ಷೆಯ ಅನಿವಾರ್ಯತೆ ಇದೆ ಎಂದರು.
ಪರಂಪರೆಯ ಪ್ರತೀಕವಾಗಿ ಕಂಬಳವನ್ನು ಈ ವರ್ಷ ಮೈಸೂರು ದಸರಾ ಆಚರಣೆ ಸಂದರ್ಭದಲ್ಲಿ ಪ್ರಾರಂಭಿಸಿರುವುದಾಗಿ ಅವರು ಸಮರ್ಥಿಸಿಕೊಂಡರು. ನವದುರ್ಗೆಯರ ಆಶೀರ್ವಾದ ನಾಡಿನ ಮೇಲಿರಲಿ. ರಾಜ್ಯದ ಕೋಟ್ಯಂತರ ಜನರ, ತಾಯಂದಿರ ಆಶೀರ್ವಾದ ನಮ ಸರ್ಕಾರದ ಮೇಲಿರಲಿ. ದೇವಿಯ ಕೃಪೆ ಜನತೆಯ ಮೇಲಿರಲಿ. ಜನರ ಕೃಪೆ ನಮ ಮೇಲಿರಲಿ ಎಂದು ಹೇಳಿದರು.
ದಸರಾ ಕೇವಲ ಆಚರಣೆಯಲ್ಲ. ಅದು ನಮ ಪರಂಪರೆ, ಸಂಸ್ಕೃತಿಯ ಪ್ರತೀಕ. ಶ್ರೀಗಳನ್ನು ದೇವರ ಸಮಾನವಾದ ಶಕ್ತಿ ಉಳ್ಳವರೆಂದು ಭಾವಿಸುತ್ತೇನೆ. ಈ ವಿಚಾರದಲ್ಲಿ ತಪ್ಪು ಅಭಿಪ್ರಾಯ ಇರಬಾರದು ಎಂದು ಸಿಎಂ ತಿಳಿಸಿದರು.
ನನ್ನ ಬದುಕಿನಲ್ಲಿ ಇಂದು ಸರಣೀಯ ದಿನ. ಹೊಸ ಅಧ್ಯಾಯ, ಪೂರ್ವ ಜನದ ಪುಣ್ಯದ ಫಲದಿಂದ ಮುಖ್ಯಮಂತ್ರಿಯಾಗಿ ನಾಡಹಬ್ಬ ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಾಗಿದೆ. ನಮ ಸರ್ಕಾರ ಸಮಾನತೆಯ ಜ್ಯೋತಿಯನ್ನು ಬೆಳಗುತ್ತದೆ. ಸಮಾನತೆಯಿಂದ ಶಾಂತಿ ಸಾಧ್ಯವಾಗುತ್ತದೆ. ಅಧರ್ಮದ ಮುಳ್ಳನ್ನು ಧರ್ಮದಿಂದ ತೆಗೆಯಲಾಗುತ್ತದೆ ಎಂದು ತಿಳಿಸಿದರು.
ವಿಜಯನಗರ ಅರಸರು ದಸರಾ ಪರಂಪರೆಗೆ ನಾಂದಿ ಹಾಡಿದರು. ಅದನ್ನು ಮೈಸೂರು ಅರಸರು ಮುಂದುವರೆಸಿಕೊಂಡು ಬಂದರು. ರಾಜ್ಯ ಸರ್ಕಾರವು ಅದನ್ನು ಮುಂದುವರೆಸುತ್ತಾ ಬಂದಿದೆ. ಮನೆಗಳಲ್ಲಿ ಗೊಂಬೆ ಇಟ್ಟು ದಸರಾ ಆಚರಣೆ ಮಾಡಲಾಗುತ್ತದೆ. ವೈವಿಧ್ಯಮಯ ಕಲಾ ಪ್ರಕಾರಗಳು ಪ್ರವಾಸಿಗರನ್ನು ಮೈಸೂರು ದಸರಾಕ್ಕೆ ಸೆಳೆಯುತ್ತವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಅನೇಕ ಕಲಾವಿದರು ಕರ್ನಾಟಕದ ಸಂಸ್ಕೃತಿಯನ್ನು ಜೀವಂತವಾಗಿಟ್ಟು ಬೆಳೆಸುತ್ತಾ ಬಂದಿದ್ದಾರೆ. ವಿವಿಧ ಮಠಾಧೀಶರು ನಾಡಿಗೆ, ಸರ್ಕಾರಕ್ಕೆ ಆಶೀರ್ವಾದ ಮಾಡಲು ಬಂದಿದ್ದಾರೆ. ಅವರಿಗೆಲ್ಲರಿಗೂ ಭಕ್ತ ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಅವರು ಹೇಳಿದರು.
