2006ರಿಂದ ಬೆಳಗಾವಿಯಲ್ಲಿ ಈವರೆಗೆ 100 ದಿನ ನಡೆದ ಅಧಿವೇಶನ

ಬೆಳಗಾವಿ, ಡಿ.22- ಬೆಳಗಾವಿಯಲ್ಲಿ ನಡೆಯುತ್ತಿರುವ ರಾಜ್ಯ ವಿಧಾನಮಂಡಲದ ಅಧಿವೇಶನವು ನೂರು ದಿನಗಳನ್ನು ಪೂರ್ಣಗೊಳಿಸಿದೆ. ಕಳೆದ 2006ರಲ್ಲಿ ಪ್ರಾರಂಭವಾದ ಬೆಳಗಾವಿಯ ಅಧಿವೇಶನವು ಇಂದಿನವರೆಗೆ ನೂರು ದಿನಗಳನ್ನು ಪೂರ್ಣಗೊಳಿಸಿದೆ. ಶತಕದ ದಾಖಲೆಯಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಮೊದಲ ಬಾರಿಗೆ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಪ್ರಾರಂಭಿಸಲಾಯಿತು. 12ನೆ ವಿಧಾನಸಭೆಯ ನಾಲ್ಕನೆ ಅಧಿವೇಶನವು 2006ರ ಸೆಪ್ಟಂಬರ್ 25ರಿಂದ 29ರವರೆಗೆ ಕೆಎಲ ಇ ಸಂಸ್ಥೆಯಲ್ಲಿ ಐದು ದಿನಗಳ ಕಾಲ ನಡೆದಿತ್ತು. ಇದು ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲದ ಉಭಯ ಸದನಗಳ […]
100ನೇ ದಿನಕ್ಕೆ ಕಾಲಿಟ್ಟ ಭಾರತ್ ಜೋಡೋ ಯಾತ್ರೆ

ದೌಸ್ಸಾ(ರಾಜಸ್ತಾನ್),ಡಿ.16- ಭಾರತ್ ಜೋಡೋ ಯಾತ್ರೆ 100ನೇ ದಿನ ಪೂರೈಸಿದ್ದು, ಇಂದು ರಾಜಸ್ತಾನದಲ್ಲಿ ನಡೆದ ಪಾದಯಾತ್ರೆಯಲ್ಲಿ ಹಿಮಾಚಲ ಪ್ರದೇಶದ ಪ್ರಮುಖ ನಾಯಕರು ಹೆಜ್ಜೆ ಹಾಕಿದರು. ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತಗಳಿಸಿ ಅಧಿಕಾರ ಹಿಡಿದಿದೆ. ಚುನಾವಣೆ ನೇತೃತ್ವವಹಿಸಿದ್ದ ಪ್ರತಿಭಾಸಿಂಗ್, ನೂತನ ಮುಖ್ಯಮಂತ್ರಿ ಸುಖವಿಂದರ್ ಸಿಂಗ್, ಉಪ ಮುಖ್ಯಮಂತ್ರಿ ಮುಖೇಶ್ ಅಗ್ನಿಹೋತ್ರಿ ಅವರು 100ನೇ ದಿನದ ಯಾತ್ರೆಯಲ್ಲಿ ರಾಹುಲ್‍ಗಾಂಧಿ ಅವರ ಅಕ್ಕಪಕ್ಕದಲ್ಲಿ ಹೆಜ್ಜೆ ಹಾಕಿದರು. ಪ್ರತಿಭಾ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯಸಿಂಗ್ ಕೂಡ ಹೆಜ್ಜೆ […]