ಸರ್ಕಾರ – ಕೆಎಂಎಫ್ ನಡುವೆ ಸಮನ್ವಯ ಕೊರತೆ

ಬೆಂಗಳೂರು,ನ.15- ನಂದಿನಿ ಹಾಲಿನ ದರ ಹೆಚ್ಚಳ ಕುರಿತಾಗಿ ಕೆಎಂಎಫ್ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡುವೆ ನಡೆಯುತ್ತಿದ್ದ ಶೀತಲ ಸಮರ ಮತ್ತೊಮ್ಮೆ ಬಟಬಯಲಾಗಿದೆ.ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ನಿನ್ನೆ ಮಧ್ಯಾಹ್ನ ಏಕಾಏಕಿ ನಂದಿನಿ ಹಾಲು ಮತ್ತು ಮೊಸರಿನ ದರವನ್ನು ಪ್ರತಿ ಲೀಟರ್‍ಗೆ 3 ರೂ.ಗೆ ಹೆಚ್ಚಿಸಿ ಆದೇಶ ಹೊರಡಿಸಿದ್ದರು. ಕೆಎಂಎಫ್ ಹೊರಡಿಸಿದ್ದ ಆದೇಶವನ್ನು ಸಂಜೆ ಕಳೆಯುವುದರೊಳಗೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಹಿಂಪಡೆಯುವಂತೆ ಸೂಚಿಸಿ ಹಾಲಿನ ದರ ಹೆಚ್ಚಳ ಕುರಿತು ಇದೇ 20ರ ನಂತರ ನಿರ್ಧರಿಸುವುದಾಗಿ […]

ಕುತೂಹಲ ಕೆರಳಿಸಿದೆ ಬಾಲಚಂದ್ರ ಜಾರಕಿಹೊಳಿ- ಹೆಚ್ಡಿಕೆ ಮಾತುಕತೆ

ಬೆಂಗಳೂರು,ನ.9- ರಾಜ್ಯ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಆಡಳಿತಾರೂಢ ಬಿಜೆಪಿಯ ಶಾಸಕ ಬಾಲಚಂದ್ರ ಜಾರಕೊಹೊಳಿ ಮತ್ತು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಕೆರಳಿಸಿದೆ. KMF ಅಧ್ಯಕ್ಷರಾಗಿರುವ ಬಾಲಚಂದ್ರ ಜಾರಕಿಹೊಳಿ ಅವರೊಂದಿಗೆ ಕುಮಾರಸ್ವಾಮಿ ಅವರು ಈಗಾಗಲೇ ಎರಡು-ಮೂರು ಸುತ್ತಿನ ಮಾತುಕತೆ ನಡೆಸಿದ್ದು, ಯಾವ ರಾಜಕೀಯ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದು ಇನ್ನೂ ನಿಗೂಢವಾಗಿ ಉಳಿದಿದೆ. ಬಾಲಚಂದ್ರ ಜಾರಕಿಹೊಳಿ ಮರಳಿ ಜೆಡಿಎಸ್‍ಗೆ ಬರುತ್ತಾರೆಯೇ ಅಥವಾ ಬಿಜೆಪಿಯಲ್ಲೆ ಉಳಿಯಲಿದ್ದಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಜೆಡಿಎಸ್ ಮೂಲಗಳು […]

ಕೆಎಂಎಫ್ ಕಾರ್ಯ ಶ್ಲಾಘನೀಯ : ಪ್ರಧಾನಿ ಮೋದಿ ಮೆಚ್ಚುಗೆ

ನೋಯಿಡಾ(ಉತ್ತರ ಪ್ರದೇಶ),ಸೆ.13-ಕಳೆದ ಐದು ದಶಕಗಳಿಂದ ರೈತರ ಸೇವೆ ಮಾಡುತ್ತಿರುವ ಕೆಎಂಎಫ್ ಕಾರ್ಯ ಶ್ಲಾಘನೀಯವಾದದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶಂಸೆ ವ್ಯಕ್ತಪಡಿಸಿದರು. ಉತ್ತರ ಪ್ರದೇಶದ ಗ್ರೇಟರ್ ನೋಯಿಡಾ ನಗರದಲ್ಲಿ ಆರಂಭಗೊಂಡಿರುವ ವಿಶ್ವ ಡೇರಿ ಶೃಂಗ ಸಭೆಯಲ್ಲಿ ಕೆಎಂಎಫ್ ನ ನಂದಿನಿ ಉತ್ಪನ್ನಗಳ ಮಳಿಗೆಗೆ ಭೇಟಿ ನೀಡಿದ ಅವರು, ಸಹಕಾರಿ ವಲಯದಲ್ಲಿ ಕರ್ನಾಟಕದ ಕೆಎಂಎಫ್ ಉತ್ತಮ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸಿದರು. ಹೈನುಗಾರಿಕೆ ಅವಲಂಬಿಸಿರುವ ರೈತ ಸಮುದಾಯ ಅದರಲ್ಲೂ ವಿಶೇಷವಾಗಿ ರೈತ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ É ವಿಶೇಷ ಯೋಜನೆ […]