ಚಾಮರಾಜಪೇಟೆಯಲ್ಲಿ ಜಮೀರ್ ವಿರುದ್ಧ ಭಾಸ್ಕರ್ ರಾವ್ ಕಣಕ್ಕೆ..?

ಬೆಂಗಳೂರು,ಮಾ.20- ಸಮಾಜ ರಕ್ಷಣೆ ಜವಾಬ್ದಾರಿಯಲ್ಲಿ ವರ್ಚಸ್ಸು ಮೂಡಿಸಿ ಈಗ ಸಮಾಜ ಸೇವೆಗಾಗಿ ರಾಜಕೀಯಕ್ಕೆ ಧುಮುಕಿರುವ ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಮುಂದಿನ ವಿಧಾನಸಭೆಯ ಚುನಾವಣೆಯಲ್ಲಿ ಕಣಕ್ಕಿಳಿದು ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಇಲಾಖೆಯಲ್ಲಿ ರಾಜ್ಯದ ಉದ್ದಗಲಕ್ಕೂ ಸೇವೆ ಸಲ್ಲಿಸಿ ಎಲ್ಲಾ ವರ್ಗದ ಜನರ ಹಾಗೂ ಆಡಳಿತಶಾಯಿ ವ್ಯವಸ್ಥೆಯ ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಶಿಸ್ತಿನ ಜೊತೆಗೆ ಪ್ರೀತಿ, ಮಾನವೀಯತೆಯನ್ನು ಬೆಳೆಸಿಕೊಂಡಿದ್ದ ಭಾಸ್ಕರ್ ರಾವ್ ಸದ್ಯ ರಾಷ್ಟ್ರೀಯ ಪಕ್ಷ ಬಿಜೆಪಿಯಲ್ಲಿ ನೆಲೆ ಕಂಡುಕೊಂಡಿದ್ದಾರೆ. ಮೂಲಗಳ ಪ್ರಕಾರ ಅವರು […]
ಹಕ್ಕು ಪತ್ರ ವಿತರಣೆ ಬಿಜೆಪಿಯ ಚುನಾವಣಾ ಗಿಮಿಕ್ : ಭಾಸ್ಕರ್ ರಾವ್

ಬೆಂಗಳೂರು,ಜ.20-ತಹಸೀಲ್ದಾರ್‍ಗಳಿಂದ ವಿತರಣೆಯಾಗಬೇಕಿದ್ದ ಹಕ್ಕು ಪತ್ರಗಳನ್ನು ಚುನಾವಣಾ ಪ್ರಚಾರ ದೃಷ್ಟಿಯಿಂದ ಪ್ರಧಾನಿ ಮೂಲಕ ಕೊಡಿಸಿ ಸಿಎಂ ಬಸವರಾಜ ಬೊಮ್ಮಾಯಿ ಅವರು ನಗೆಪಾಟಲಿಗೀಡಾಗಿದ್ದಾರೆ ಎಂದು ಆಮ್‍ಆದ್ಮಿ ಪಕ್ಷದ ಮುಖಂಡ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಇಂದಿಲ್ಲಿ ಕಿಡಿಕಾರಿದ್ದಾರೆ. ಪ್ರೆಸ್‍ಕ್ಲಬ್‍ನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಂಡ ಹತ್ತು ಹಟ್ಟಿಗಳಲ್ಲಿ ವಾಸವಾಗಿರುವ ಬುಡಕಟ್ಟು ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಕೆಲಸ ಬಹಳ ಹಿಂದೆಯೇ ಆಗಬೇಕಾಗಿತ್ತು. ಆದರೆ, ಇದರ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿತ್ತು. ತಹಸೀಲ್ದಾರರು ಮಾಡಬೇಕಾಗಿದ್ದ ಈ ಪ್ರಕ್ರಿಯೆಯನ್ನು ಪ್ರಧಾನಿ ಅವರನ್ನು […]
ಇಎಸ್‍ಐ ಅರ್ಹತೆಯ ಮಿತಿ 35 ಸಾವಿರಕ್ಕೆ ಹೆಚ್ಚಿಸುವಂತೆ ಭಾಸ್ಕರ್ ರಾವ್ ಒತ್ತಾಯ

ಬೆಂಗಳೂರು,ಜ.4- ಇಎಸ್‍ಐ ಅರ್ಹತೆಯ ಮಿತಿಯನ್ನು ರೂ.21,000 ರಿಂದ ರೂ.35,000 ಕ್ಕೆ ಹೆಚ್ಚಿಸಬೇಕು ಎಂದು ಮಾಜಿ ಪೊಲೀಸ್ ಮಹಾನಿರ್ದೇಶಕರು ಮತ್ತು ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಭಾಸ್ಕರ್ ರಾವ್ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇದರಿಂದ ಬೆಲೆ ಏರಿಕೆಯ ತಗ್ಗಿಸಬಹುದು ಮತ್ತು ಹೆಚ್ಚಿನ ಜನರನ್ನು ಆರೋಗ್ಯ ಪ್ರಯೋಜನಗಳು ದೊರೆಯುತ್ತದೆ ಎಂದರು. ಪ್ರಸ್ತುತ ಇಎಸ್‍ಐ ಯೋಜನೆಯು ತಿಂಗಳಿಗೆ ರೂ. 21,000 ಕ್ಕಿಂತ ಹೆಚ್ಚು ವೇತನ ಪಡೆಯುವ ಕಾರ್ಮಿಕರು ಅಥವಾ ಉದ್ಯೋಗಿಗಳನ್ನು ಒಳಗೊಂಡಿಲ್ಲ ಮತ್ತು ವಿಕಲಚೇತನರಿಗೆ ಗರಿಷ್ಠ ವೇತನವನ್ನು ತಿಂಗಳಿಗೆ […]