Homeರಾಜ್ಯರಾಜ್ಯದಲ್ಲಿ ಇನ್ನೂ 8 ರಿಂದ 10 ತಾಲ್ಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆ ಸಾಧ್ಯತೆ

ರಾಜ್ಯದಲ್ಲಿ ಇನ್ನೂ 8 ರಿಂದ 10 ತಾಲ್ಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆ ಸಾಧ್ಯತೆ

ಬೆಂಗಳೂರು, ಅ.9- ರಾಜ್ಯದಲ್ಲಿ ಇನ್ನೂ 8 ರಿಂದ 10 ತಾಲ್ಲೂಕುಗಳು ಬರ ಪೀಡಿತ ಪ್ರದೇಶ ವ್ಯಾಪ್ತಿಗೆ ಸೇರ್ಪಡೆಯಾಗುವ ಸಾಧ್ಯತೆಯಿದ್ದು, ಬಳಿಕ ಕೇಂದ್ರ ಸರ್ಕಾರದ ಬಳಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ 217 ತಾಲ್ಲೂಕುಗಳಲ್ಲಿ ಬರ ಪೀಡಿತ ಎಂದು ಘೋಷಿಸಲಾಗಿದೆ. ಉಳಿದಿರುವ 23 ತಾಲ್ಲೂಕುಗಳಲ್ಲಿ 8 ರಿಂದ 10 ತಾಲ್ಲೂಕುಗಳು ಕೇಂದ್ರ ಸರ್ಕಾರದ ಮಾನದಂಡ ವ್ಯಾಪ್ತಿಗೆ ಒಳಪಡಲಿವೆ. ಅವುಗಳ ವಾಸ್ತವಿಕ ಅಧ್ಯಯನ ನಡೆಯುತ್ತಿದೆ. ವರದಿಯ ಬಳಿಕ ಒಟ್ಟಾರೆ ನಷ್ಟದ ಅಂದಾಜನ್ನು ಸಿದ್ಧಪಡಿಸಲಾಗುವುದು.

ಈಗಾಗಲೇ ರಾಜ್ಯಕ್ಕೆ ಭೇಟಿ ನೀಡಿದ್ದ ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡಕ್ಕೆ ಮನವಿಯನ್ನು ನೀಡಲಾಗಿದೆ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಹಾಗೂ ಕೃಷಿ ಸಚಿವರಿಗೆ ಖುದ್ದು ಮನವಿ ನೀಡುವುದು ಅಗತ್ಯ ಇದೆ. ಈ ಕಾರಣಕ್ಕೆ ದೆಹಲಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ಚರ್ಚೆ ನಡೆಯುತ್ತಿದೆ. ವಿರೋಧ ಪಕ್ಷದವರು ದೆಹಲಿಗೆ ಬರುವುದಿಲ್ಲ ಎನ್ನುತ್ತಿದ್ದಾರೆ. ಮತ್ತೊಮೆ ಅವರಿಗೆ ಮನವಿ ಮಾಡುತ್ತೇವೆ. ನಿಯೋಗದಲ್ಲಿ ಬರಲು ಕೇಳಿಕೊಳ್ಳುತ್ತೇವೆ ಎಂದರು.

ಪರಿಹಾರಕ್ಕಾಗಿ ಕೇಂದ್ರದ ನಾಯಕರನ್ನು ಭೌತಿಕವಾಗಿ ಭೇಟಿ ಮಾಡಿ ವರದಿ ನೀಡುವುದು ಹೆಚ್ಚು ಅನುಕೂಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ವಿವರಿಸಿದರು.ಬರ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಕಡೆಗಣಿಸಿಲ್ಲ. ಕಾಲಕಾಲಕ್ಕೆ ಸೂಕ್ತ ಕ್ರಮಗಳನ್ನು ಕೈಗೊಂಡಿದೆ ಎಂದು ವಿವರಿಸಿದರು. ಫಾರಂ ನಂ-7ರ ದುರುಪಯೋಗ ತುಮಕೂರು ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡು ಬಂದಿಲ್ಲ. ಒಂದೊಂದು ತಾಲ್ಲೂಕಿನಲ್ಲಿ 100-150 ಅರ್ಜಿ ಇರಬಹುದು. ಸ್ಥಳಾಂತರಗೊಂಡ ಮತದಾರರ ವಿಷಯವಾಗಿ ತೆಗೆದುಕೊಳ್ಳುತ್ತಿರುವ ಕ್ರಮಗಳು ಅನುಮಾನಾಸ್ಪದವಾಗಿದೆ ಎಂದರು.

ತಮ ಕೊರಟಗೆರೆ ಕ್ಷೇತ್ರದಲ್ಲೇ 16 ಸಾವಿರ ಮತದಾರರು ಸ್ಥಳಾಂತರಗೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಒಂದು ಕ್ಷೇತ್ರದಿಂದ ಸ್ಥಳಾಂತರಗೊಂಡಿದ್ದಾರೆ ಎಂದಾದರೆ, ಅವರ ಮತಗಳು ಬೇರೆ ಕ್ಷೇತ್ರದಲ್ಲಾದರೂ ಇರಬೇಕಲ್ಲವೇ? ಎಲ್ಲಿಯೂ ನಮೂದಾಗದೇ ಮತದಾನದ ಹಕ್ಕನ್ನು ಕಳೆದುಕೊಳ್ಳುತ್ತಿರುವವರ ಬಗ್ಗೆ ಕಾಳಜಿವಹಿಸಬೇಕು ಎಂದರು. ರಾಜ್ಯದಲ್ಲಿ 65 ಲಕ್ಷ ಮತದಾರರನ್ನು ಸ್ಥಳಾಂತರಗೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಅಷ್ಟೂ ಜನ ಯಾವ ಕ್ಷೆತ್ರದಲ್ಲಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕಿದೆ ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್‌‍ಗೆ ರಾಜಕೀಯ ವ್ಯವಹಾರಗಳ ಸಮಿತಿಯ ಅಗತ್ಯ ಇದೆ. ಈ ಬಗ್ಗೆ ಹೈಕಮಾಂಡ್‌ ಜೊತೆ ಚರ್ಚೆ ಮಾಡಿ ಮುಖ್ಯಮಂತ್ರಿಯವರು ಮತ್ತು ಪ್ರದೇಶ ಕಾಂಗ್ರೆಸ್‌‍ ಅಧ್ಯಕ್ಷರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಪರಮೇಶ್ವರ್‌ ಹೇಳಿದರು. ಕುಟುಕು ಕಾರ್ಯಚರಣೆ ಬಗ್ಗೆ ತಮಗೆ ಹೆಚ್ಚಿನ ಮಾಹಿತಿ ಇಲ್ಲ. ಗುಪ್ತದಳ ಮುಖ್ಯಮಂತ್ರಿಯವರ ಬಳಿ ಇದೆ. ಅವರಿಗೆ ಲಭ್ಯವಿರುವ ಮಾಹಿತಿ ಆಧರಿಸಿ ಹೇಳಿಕೆ ನೀಡಿದ್ದಾರೆ. ಈ ಕುರಿತು ತನಿಖೆ ನಡೆಸಬೇಕೇ? ಬೇಡವೇ? ಎಂಬ ಕುರಿತು ಮುಖ್ಯಮಂತ್ರಿಯವರೇ ನಿರ್ಧರಿಸಬೇಕಿದೆ ಎಂದು ಹೇಳಿದರು.

RELATED ARTICLES
spot_img

Latest News