ಮತದಾರರನ್ನ ಮರುಳುಮಾಡಲು ‘ಉಚಿತ’ ಪೈಪೋಟಿಗಳಿದ ರಾಜಕೀಯ ಪಕ್ಷಗಳು

ಬೆಂಗಳೂರು,ಜ.17- ರಾಜ್ಯ ರಾಜಕಾರಣದಲ್ಲಿ ಮತದಾರರನ್ನು ಓಲೈಸಿಕೊಳ್ಳಲು ರಾಜಕೀಯ ಪಕ್ಷಗಳು ನಾನಾ ಕಸರತ್ತು ನಡೆಸುತ್ತಿರುವುದರ ಜೊತೆಗೆ ಉಚಿತ ಕೊಡುಗೆಗಳನ್ನು ಭರ್ಜರಿಯಾಗಿಯೇ ಘೋಷಣೆ ಮಾಡುತ್ತಿವೆ.ನಾವು ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೂ 200 ವ್ಯಾಟ್ ವಿದ್ಯುತ್ ಹಾಗೂ ನಾರಿಯರಿಗೆ ಮಾಸಿಕ 2000 ರೂ. ನೀಡುವುದಾಗಿ ಕಾಂಗ್ರೆಸ್ ಹೇಳಿಕೊಂಡಿದೆ. ನಾವೇನು ಕಮ್ಮಿ ಎಂಬಂತೆ ಆಡಳಿತಾರೂಢ ಬಿಜೆಪಿ ಕೂಡ ಕೋವಿಡ್ ಮತ್ತು ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿರುವ ಬಡ ಕುಟುಂಬಗಳ ಮನೆ ವೆಚ್ಚ ನಿರ್ವಹಣೆಗಾಗಿ ಕುಟುಂಬದ ಯಜಮಾನಿ ಮಹಿಳೆಯರಿಗೆ ಗೃಹಿಣಿಶಕ್ತಿ ಯೋಜನೆ ಜಾರಿ ಮಾಡುವುದಾಗಿ ಘೋಷಿಸಿದೆ. […]