ಗುಜರಾತ್‍ನಲ್ಲಿ ಭಾರಿ ಪ್ರಮಾಣದ ಮಾದಕ ವಸ್ತುಗಳ ವಹಿವಾಟು ನಡೆಯುತ್ತಿದೆ : ರಾಹುಲ್ ಗಾಂಧಿ

ನವದೆಹಲಿ,ಆ.1-ಗುಜರಾತ್‍ನಲ್ಲಿ ಪದೇ ಪದೇ ವಶಪಡಿಸಿ ಕೊಳ್ಳಲಾಗುವ ಭಾರೀ ಪ್ರಮಾಣದ ಮಾದಕ ವಸ್ತುಗಳ ವಹಿವಾಟು ಬಗ್ಗೆ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಗುಜರಾತ್‍ನಲ್ಲಿ ಒಂದೇ ಬಂದರಿನಲ್ಲಿ ಮೂರು ಬಾರಿ ಮಾದಕ ವಸ್ತುಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಆಗಿದ್ದರೂ ಡ್ರಗ್ಸ್‍ಗಳು ನಿರಂತರವಾಗಿ ಅಲ್ಲಿಗೆ ಬಂದಿಳಿಯುತ್ತಿರುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಗುಜರಾತ್‍ನಲ್ಲಿ ಕಾನೂನು ಸುವ್ಯವಸ್ಥೆ ಇಲ್ಲವೇ? ಮಾಫಿಯಾ ಗಳಿಗೆ ಕಾನೂನಿನ ಕನಿಷ್ಠ ಭಯ ವಿಲ್ಲವೇ? ಅಥವಾ ಈ ಸರ್ಕಾರ ಮಾಫಿಯಾ ಸರ್ಕಾರವೇ ಎಂದಿದ್ದಾರೆ. ಗುಜರಾತ್‍ನ ಮಂದ್ರ ಬಂದರಿ ನಲ್ಲಿ ಸೆ.21ರಂದು […]