Homeರಾಷ್ಟ್ರೀಯಆ.29ರಂದು ಅಮೆರಿಕದಲ್ಲಿ ಮೋಹನ್‌ ಭಾಗವತ್‌ ಭಾಷಣ

ಆ.29ರಂದು ಅಮೆರಿಕದಲ್ಲಿ ಮೋಹನ್‌ ಭಾಗವತ್‌ ಭಾಷಣ

RSS chief Mohan Bhagwat to address New York event on August 29

ನವದೆಹಲಿ, ಆ.11- ನೂರು ವರ್ಷದ ಜಾಗತಿಕ ಸಂಪರ್ಕ ಅಭಿಯಾನದ ಭಾಗವಾಗಿ ಆರ್‌ಎಸ್‌‍ಎಸ್‌‍ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು ಆ.29ರಂದು ನ್ಯೂಯಾರ್ಕ್‌ನ ಪ್ರತಿಷ್ಠಿತ ಮ್ಯಾಡಿಸನ್‌ ಸ್ಕ್ವೇರ್‌ ಗಾರ್ಡನ್‌ನಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಅವರು ಭಾಷಣ ಮಾಡಲಿದ್ದಾರೆ. ಅಮೆರಿಕನ್‌ ಹಿಂದೂಸ್‌‍ ಫಾರ್‌ ಎಂಗೇಜ್‌ಮೆಂಟ್‌‍ ಅಂಡ್‌ ಡೈಲಾಗ್‌ ಫೋರಂ ಮತ್ತು ನೂರಾರು ಹಿಂದೂ ಸಾಂಸ್ಕೃತಿಕ, ಧಾರ್ಮಿಕ ಸಂಸ್ಥೆಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಆಗಸ್ಟ್‌ 29 ರಂದು ನಡೆಯಲಿರುವ ಈ ಬೃಹತ್‌ ಸಮಾವೇಶಕ್ಕೆ ಯುನಿವರ್ಸಲ್‌ ಒನ್ನೆಸ್‌‍ ಸೆಲೆಬ್ರೇಷನ್ಸ್‌‍ಎಂದು ಹೆಸರಿಸಲಾಗಿದೆ. ಹಿಂದೂ ಹಬ್ಬವಾದ ರಕ್ಷಾಬಂಧನದ ಸಂದರ್ಭದಲ್ಲೇ ಈ ಕಾರ್ಯಕ್ರಮ ಆಯೋಜನೆಗೊಂಡಿರುವುದು ವಿಶೇಷವಾಗಿದೆ. ಈ ಸಮಾವೇಶವು ಪ್ರಮುಖವಾಗಿ ವಸುಧೈವ ಕುಟುಂಬಕಂ, ಅಂದರೆ ಇಡೀ ಜಗತ್ತೇ ಒಂದು ಕುಟುಂಬ ಎಂಬ ಭಾರತೀಯ ಸನಾತನ ತತ್ವದ ಆಧಾರದ ಮೇಲೆ ಜಾಗತಿಕ ಸಾಮರಸ್ಯ, ನಾಗರಿಕ ಜವಾಬ್ದಾರಿ ಮತ್ತು ಪರಸ್ಪರ ಗೌರವದ ಸಂದೇಶವನ್ನು ಸಾರಲಾಗುತ್ತದೆ.

ಸಹೋದರ-ಸಹೋದರಿಯರ ಬಾಂಧವ್ಯದ ಹಬ್ಬವಾದ ರಕ್ಷಾಬಂಧನವನ್ನು ಇಡೀ ಜಗತ್ತು, ಮಾನವೀಯತೆ ಮತ್ತು ಪ್ರಕೃತಿಯ ನಡುವಿನ ಜವಾಬ್ದಾರಿಯ ಸಂಕೇತವಾಗಿ ಇಲ್ಲಿ ಪ್ರಸ್ತುತಪಡಿಸಲಾಗುತ್ತಿದೆ. ಮೋಹನ್‌ ಭಾಗವತ್‌ ಅವರ ಈ ಅಪರೂಪದ ಅಮೆರಿಕ ಸಾರ್ವಜನಿಕ ಭಾಷಣವನ್ನು ಕೇಳಲು ಅಮೆರಿಕದ ವಿವಿಧ ರಾಜ್ಯಗಳಿಂದ 5,000ಕ್ಕೂ ಹೆಚ್ಚು ಪ್ರಮುಖ ಭಾರತೀಯ ಮೂಲದ ಅಮೆರಿಕನ್ನರು ಭಾಗವಹಿಸುವ ನಿರೀಕ್ಷೆಯಿದೆ. ಈ ಕಾರ್ಯಕ್ರಮದಲ್ಲಿ ವಿವಿಧ ಭಾಷಾ, ಪ್ರಾದೇಶಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯ ಉದ್ಯಮಿಗಳು, ವೈದ್ಯರು, ಶಿಕ್ಷಣ ತಜ್ಞರು, ಯುವ ಮುಖಂಡರು ಮತ್ತು ಧಾರ್ಮಿಕ ಮುಖಂಡರು ಪಾಲ್ಗೊಳ್ಳಲಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಕನಿಷ್ಠ ಎರಡು ಖಾಸಗಿ ಕಾರ್ಯಕ್ರಮಗಳಲ್ಲೂ ಭಾಗವಹಿಸಲಿರುವ ಮೋಹನ್‌ ಭಾಗವತ್‌ ಅವರು, ಅಮೆರಿಕದ ಪ್ರವಾಸ ಮುಗಿದ ನಂತರ ಕೆನಡಾಕ್ಕೂ ಭೇಟಿ ನೀಡುವ ಸಾಧ್ಯತೆಯಿದೆ. ಆರ್‌ಎಸ್‌‍ಎಸ್‌‍ ಜಗತ್ತಿನಾದ್ಯಂತ ತನ್ನ ಒಡನಾಟವನ್ನು ವೃದ್ಧಿಸಿಕೊಳ್ಳಲು ಹಮ್ಮಿಕೊಂಡಿರುವ ಶತಮಾನೋತ್ಸವದ ಜಾಗತಿಕ ಕಾರ್ಯತಂತ್ರದ ಭಾಗವಾಗಿ ಈ ವಿದೇಶಿ ಪ್ರವಾಸಗಳು ಅತ್ಯಂತ ಮಹತ್ವ ಪಡೆದುಕೊಂಡಿವೆ.

RELATED ARTICLES
spot_img

Latest News