ಕೊನೆ ಉಸಿರು ಇರುವವರೆಗೂ ಆದಿವಾಸಿಗಳ ನ್ಯಾಯಕ್ಕಾಗಿ ಹೋರಾಟ : ರಾಹುಲ್ಗಾಂಧಿ
ನವದೆಹಲಿ, ಆ.9- ನಾವಿಬ್ಬರು ಮತ್ತು ನಮಗಿಬ್ಬರು ಸಿದ್ಧಾಂತದಿಂದ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೆ ತರುವ ಮೂಲಕ ಆದಿವಾಸಿಗಳ ಹಕ್ಕು ಕಸಿಯುವ ಯತ್ನ ನಡೆಸಿದೆ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ಗಾಂಧಿ ಆರೋಪಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಸದಾ ಕಾಲ ಬುಡಕಟ್ಟು ಮತ್ತು ಆದಿವಾಸಿಗಳ ನೀರು, ಅರಣ್ಯ ಹಾಗೂ ಭೂಮಿಯ ಹಕ್ಕಿಗಾಗಿ ಹೋರಾಟ ನಡೆಸುತ್ತಾ ಬಂದಿದೆ. ಈಗ ಆದಿವಾಸಿಗಳ ಹಕ್ಕುಗಳನ್ನು ಕಸಿಯಲು ಹೊಸ ನಿಯಮಗಳು ಹಾಗೂ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಇದು ನಾವಿಬ್ಬರು, ನಮಗಿಬ್ಬರು ಎಂಬ […]