ನೀನಂದ್ರೆ ನನಗೆ ತುಂಬಾ ಇಷ್ಟ. ನೀನೆ ನನ್ನ ಪ್ರಪಂಚ, ನಿನ್ನ ಬಿಟ್ಟು ಒಂದು ಕ್ಷಣವು ಇರಲಾರೆ, ನೀನಿಲ್ಲದ್ದಿದ್ದರೆ ನನ್ನ ಬದುಕೇ ಇಲ್ಲ, ನಿನಗೇನಾದರೂ ಆದರೆ ನಿನ್ನ ಜೊತೆ ನಾನು ಬಂದುಬಿಡುತ್ತೇನೆ ಹೀಗೆ ಪ್ರತಿಗೆ ಬಿದ್ದ ಹುಡುಗರು ತಾನು ಪ್ರೀತಿಸುತ್ತಿರುವ ಹುಡುಗಿಗೆ ಹೇಳುವ ಮಾತುಗಳು. ಹುಡುಗ ಹೇಳುವ ಇಷ್ಟು ಮಾತುಗಳು ನಿಜಾನಾ.
ಆಕಸ್ಮಿಕವಾಗಿ ತಾನು ಪ್ರೀತಿಸಿದ ಹುಡುಗಿ ಉಸಿರು ಚೆಲ್ಲಿದಾಗ ಅವನು ಅವಳ ಹಿಂದೆ ಹೋಗುತ್ತಾನ. ಈ ಪ್ರಶ್ನೆಗಳನ್ನೇ ಕಥೆಯ ವಸ್ತುವಾಗಿಸಿ ಸ್ಕ್ರೀನ್ ಪ್ಲೇ ಬರೆದು ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ನಟಿ ಎಸ್ತರ್ ನರೋನ ಹೊಸ ಪ್ರಯೋಗಕ್ಕೆ ಮುಂದಾಗಿ ಈ ವಾರ ಪ್ರೇಕ್ಷಕರ ಮುಂದಿ ಬಂದಿದ್ದಾರೆ. ಹೌದು ಈ ವಾರ ರಾಜ್ಯಾದ್ಯಂತ ಬಿಡುಗಡೆಗೊಂಡು ಪ್ರೇಕ್ಷಕರಿಗೆ ಬೇರೆಯದ್ದೆ ಕಥೆ ಪರಿಚಯ ಮಾಡಿರುವ ದಿ ವೆಕೆಂಟ್ ಹೌಸ್ ಚಿತ್ರ ಪ್ರೇಮ ಕಥೆ ಅನಿಸಿದರು ಹಾರರ್, ಸಸ್ಪೆನ್ಸ್ ಜಾನರಿಗೆ ಸೇರುತ್ತದೆ.
ತಂದೆ ತಾಯಿಯನ್ನು ಕಳೆದುಕೊಂಡ ಯುವಕ ಮೋಹಕ್ ಜೀವನದ ಬಗ್ಗೆ ಜಿಗುಪ್ಸೆಗೊಂಡು, ನಾನಿನ್ನು ಬದುಕಿರಬಾರದು ಎಂದು ತೀರ್ಮಾನಿಸಿ ವಿಷ ಸೇವಿಸುವ ಸಂದರ್ಭದಲ್ಲಿ ತನ್ನ ಮನೆಯ ಮುಂದೆ ಕಾಲಿ ಇರುವ ಮನೆಗೆ ಸ್ವಲ್ಪ ವಯಸ್ಸಾದ ಗಂಡಸು ಮತ್ತು ಸುಂದರವಾದ ಟೀನೇಜ್ ಹುಡುಗಿ ಮೋಹಾಳ ಆಗಮನವಾಗುತ್ತದೆ. ಇದು ಸಾಯಲು ನಿರ್ಧರಿಸುವ ನಾಯಕನಿಗೆ ಹುಡುಗಿಯ ಆಗಮನ ಹೊಸ ಉರುಪನ್ನ ನೀಡುತ್ತದೆ. ಹುಡುಗಿಗೆ ಹತ್ತಿರವಾಗಲು ಪ್ರಯತ್ನಪಟ್ಟು ಅದರಲ್ಲಿ ಯಶಸ್ಸು ಕಾಣುತ್ತಾನೆ. ಹುಡುಗಿಗೂ ಇಷ್ಟವಾಗುತ್ತದೆ.
ಹುಡುಗಿಯ ಜೊತೆ ಇರುವುದು ಆಕೆಯ ತಂದೆ ಎಂದು ನಂಬಿರುತ್ತಾನೆ. ಆದರೆ ಆತ ಗಂಡನಾಗಿರುತ್ತಾನೆ. ಇದನ್ನು ತಿಳಿದು ಹುಡುಗಿ ಒಪ್ಪಿದರು ಪ್ರೀತಿ ಮುಂದುವರಿಸುವುದು ಬೇಡ ಎಂದು ತೀರ್ಮಾನಿಸಿ, ಊರು ಬಿಡುತ್ತಾನೆ. ಈ ಸಮಯದಲ್ಲಿ ಗಂಡ ಹೆಂಡತಿಗೆ ಅಪಘಾತವಾಗಿ ಅದರಲ್ಲಿ ಗಂಡ ಇನ್ನಿಲ್ಲ ಎಂದು ತಿಳಿದ ನಾಯಕ ಮತ್ತೆ ಊರಿಗೆ ವಾಪಸ್ ಆಗುತ್ತೇನೆ. ಮತ್ತೆ ಇವರಿಬ್ಬರ ಪ್ರೀತಿ ಚಿಗುರಿ ಹೆಮ್ಮರವಾಗಿ ಒಂದೇ ಮನೆಯಲ್ಲಿ ವಾಸ, ಪ್ರತಿಕ್ಷಣವೂ ಸರಸ ಸಲ್ಲಾಪ, ಯೌವ್ವನ ಬಯಸುವ ಸುಖದ ಉತ್ತುಂಗದಲ್ಲಿ ಇಬ್ಬರು ಮಿಂದು ತೇಲುತ್ತಾರೆ. ಈ ಸಂದರ್ಭದಲ್ಲಿ ಪ್ರೇಕ್ಷಕರಿಗೆ ದಡ್ ಎಂದು ಒಂದು ಆಘಾತದ ಸಂಗತಿ ಇದರಾಗುತ್ತದೆ ಅದು ಮಾನವ ಜೊತೆ ಇಷ್ಟು ಸಮಯ ಪ್ರೇಯಸಿಯಾಗಿ ಕಳೆದ ಮೋಹ ಜೀವಂತವಿಲ್ಲ ಅದು ದೆವ್ವವೆಂದು. ನಂತರ ನಡೆಯುವುದೆಲ್ಲವೂ ನೋಡುಗರಿಗೆ ಹೊಸ ಅನುಭವ ಕಟ್ಟಿ ಕೊಡುತ್ತದೆ.
ಕಂದಾಯ ಇಲಾಖೆಯನ್ನು ಜನ ಸ್ನೇಹಿ ಮಾಡಲು ಹಲವು ಕ್ರಮ : ಸಚಿವ ಕೃಷ್ಣ ಬೈರೇಗೌಡ
ಮೋಹ ಮತ್ತು ಮಾನವ್ ಎಂಬ ಎರಡು ಪಾತ್ರಗಳನ್ನು ಸೃಷ್ಟಿಸಿರುವ ನಿರ್ದೇಶಕಿ ಮತ್ತು ಈ ಚಿತ್ರದ ನಾಯಕಿ ಎಸ್ತರ್ ನರೋನ ಮೋಹಕ್ಕೆ ಸಿಲುಕುವ ಮಾನವ ಅಂದರೆ ಯುವ ಮನಸ್ಸಿನ ಹುಡುಗರು ಆ ಸಂದರ್ಭದಲ್ಲಿ ಹುಡುಗಿಯರಿಗೆ ಕೊಡುವ ಭರವಸೆ ಹೊಗಳಿಕೆಗಳು ಅವಳನ್ನು ಆಕರ್ಷಿಸಿ ಅನುಭವಿಸುವುದಕ್ಕೆ ಮಾತ್ರ ಎಂದು ಸ್ಕ್ರೀನ್ ಪ್ಲೇನಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.
ನಾಯಕನಾಗಿ ಅಭಿನಯಿಸಿರುವ ಶ್ರೇಯಸ್ ಚಿಂಗಾ ಎಸ್ತರ್ ನರೋನಗೆ ಒಳ್ಳೆ ಸಾಥ್ ಕೊಟ್ಟಿದ್ದಾರೆ. ಕೇವಲ ನಾಲ್ಕು ಪಾತ್ರಗಳ ಮೇಲೆ ಸಾಗುವ ಕಥೆಯಲ್ಲಿ ಸನ್ನಿವೇಶಗಳಿಗೆ ತಕ್ಕ ಬ್ಯಾಗ್ರೌಂಡ್ ಮ್ಯೂಸಿಕ್ ಮತ್ತು ಸಂಗೀತದ ಪತ್ರ ಮಹತ್ವದ್ದಾಗಿದೆ. ಈ ಹಿಂದೆ ಪರದೆಯ ಮೇಲೆ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದ ನಟಿ ಎಸ್ತರ್ ನರೋನ ಮೊದಲ ಬಾರಿಗೆ ಈ ರೀತಿ ಒಂದು ಪ್ರಯೋಗಾತ್ಮಕ ಕಥೆಗೆ ನಿರ್ದೇಶನ, ನಿರ್ಮಾಣದ ಮೂಲಕ ಕೈ ಹಾಕಿರುವುದು ಉತ್ತಮ ಬೆಳವಣಿಗೆ.