Saturday, May 4, 2024
Homeರಾಜ್ಯಪಾಕ್ ಪರ ಘೋಷಣೆ ಪ್ರಕರಣ, ಬಂಧಿತ ಮೂವರ ತೀವ್ರ ವಿಚಾರಣೆ

ಪಾಕ್ ಪರ ಘೋಷಣೆ ಪ್ರಕರಣ, ಬಂಧಿತ ಮೂವರ ತೀವ್ರ ವಿಚಾರಣೆ

ಬೆಂಗಳೂರು, ಮಾ.5- ವಿಧಾನಸೌಧದಲ್ಲಿ ಪಾಕ್ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಮೂವರು ಆರೋಪಿಗಳನ್ನು ವಿಧಾನಸೌಧ ಠಾಣೆ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆರೋಪಿಗಳಾದ ಮಹಮ್ಮದ್ ಶಫಿ ನಾಶಿಪುಡಿ, ಮುನ್ನಾವರ ಅಹಮದ್, ಮಹಮ್ಮದ್ ಇಲ್ತಾಜ್ ಎಂಬುವವರನ್ನು ವಿಧಾನಸೌಧ ಠಾಣೆ ಪೊಲೀಸರು ಬಂದಿಸಿ ಕೋರಮಂಗಲದ 39ನೇ ಎಸಿಎಂಎಂ ನ್ಯಾಯಾದೀಶರ ಮುಂದೆ ಹಾಜರು ಪಡಿಸಿದಾಗ ನ್ಯಾಯಾದೀಶರು ಆರೋಪಿಗಳನ್ನು ಮಾ.6ರವರೆಗೆ ಪೊಲೀಸರ ಕಸ್ಟಡಿಗೆ ನೀಡಿದರು.

ಈ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳ ಪೂರ್ವಪರ ಪರಿಶೀಲನೆ ಪಾಕ್ ಪರ ಘೋಷಣೆ ಹಿಂದಿನ ಉದ್ದೇಶ ಏನಾಗಿತ್ತು ಇದಕ್ಕೆ ಯಾರಾದರೂ ಕುಮ್ಮಕ್ಕು ನೀಡಿದ್ದಾರಾ, ಇದು ಆಕಸ್ಮಿಕವೇ ಅಥವಾ ಉದ್ದೇಶಪೂರ್ವಕವೇ ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಬಂಧಿತರ ಮೂವರ ಮೊಬೈಲ್‍ಗಳನ್ನು ವಶಕ್ಕೆ ತೆಗೆದುಕೊಂಡು ವಿಧಿವಿಜ್ಞಾನ ಪ್ರಯೋಗಾಲಕ್ಕೆ ಕಳುಹಿಸಿದ್ದಾರೆ. ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಎಪ್‍ಎಸ್‍ಎಲ್ ವರದಿಯಲ್ಲಿ ದೃಡಪಡುತ್ತಿದ್ದಂತೆ ವಿಧಾನಸೌಧ ಪೊಲೀಸರು 40ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿ 15 ಮಂದಿಯ ಧ್ವನಿ ಮಾದರಿಯನ್ನು ಸಂಗ್ರಹಿಸಿದ್ದರು. ನಿನ್ನೆ ಮಧ್ಯಾಹ್ನ ಪೊಲೀಸರ ಕೈಗೆ ಎಪ್‍ಎಸ್‍ಎಲ್ ವರದಿ ಸಿಗುತ್ತಿದ್ದಂತೆ ಘೋಷಣೆ ಕೂಗಿದ ಮೂವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

ಫೆ. 27ರಂದು ರಾಜ್ಯಸಭೆ ಚುನಾವಣೆ ನಡೆದ ಸಂದರ್ಭದಲ್ಲಿ ನಾಸೀರ್ ಹುಸೇನ್ ವಿಜಯೋತ್ಸವ ಆಚರಣೆ ವೇಳೆ ಪಾಕ್ ಪರ ಘೋಷಣೆಗಳು ಕೇಳಿಬಂದಿದ್ದವು. ಮಾಧ್ಯಮಗಳಲ್ಲಿ ಭಾರಿ ಪ್ರಮಾಣದ ಸುದ್ದಿ ಬಿತ್ತರವಾಗಿತ್ತು. ಪಾಕ್ ಪರ ಘೋಷಣೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ವಿಧಾನಸೌಧ ಠಾಣೆ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ವಿಚಾರಣೆ ಕೈಗೆತ್ತಿಕೊಂಡಿದ್ದರು.

ಕೋಟಿ ಕುಳ ನಾಶಿ ಪುಡಿ:
ಮೊಹಮ್ಮದ್ ಶಪಿ ನಾಶಿ ಪುಡಿ ಸಾಮಾನ್ಯ ವ್ಯಕ್ತಿಯಲ್ಲ. ಹಾವೇರಿ ಜಿಲ್ಲೆ ಬ್ಯಾಡಗಿಯಲ್ಲಿ ಮೆಣಸಿನ ಕಾಯಿ ವ್ಯಾಪಾರ ಮಾಡುವ ಕೋಟ್ಯಾಂತರ ವ್ಯವಹಾರ ನಡೆಸುತ್ತಿರುವವರೆಂದು ಪೊಲೀಸ್ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಇವರನ್ನು ಧ್ವನಿ ಪರೀಕ್ಷೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಂದರ್ಭದಲ್ಲಿ ನಾನು ನೂರಾರು ಕೋಟಿಗೆ ಬಾಳುತ್ತೇನೆ, ನಾನು ಪಾಕ್ ಪರ ಘೋಷಣೆ ಕೂಗಿಲ್ಲ, ಎಂದು ಹೇಳಿರುವುದು ತಿಳಿದು ಬಂದಿದೆ.

ನಾಶಿಪುಡಿ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಅವರ ಕಟ್ಟಾ ಬೆಂಬಲಿಗನಾಗಿದ್ದು, ಮುಂದಿನ ವಿಧಾನಸಭೆಯ ಬ್ಯಾಡಗಿ ಕ್ಷೇತ್ರದ ಚುನಾವಣೆಗೆ ಸ್ಪರ್ದಿಸಲು ಈಗಿನಿಂದಲೇ ಬಾರಿ ಸಿದ್ದತೆ ನಡೆಸಿದ್ದ ಸುಮಾರು 50 ವರ್ಷಗಳಿಂದ ಮೆಣಸಿಕಾಯಿ ವ್ಯಾಪಾರ ಮಾಡಿಕೊಂಡು ಬರುತ್ತಿದ್ದಾನೆ. ರಾಜ್ಯಸಭೆ ಚುನಾವಣೆಯ ವಿಜಯೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪಾಕ್ ಪರ ಘೋಷಣೆ ಕೂಗಿದ್ದಾರೆಂಬ ಪ್ರಕರಣದಲ್ಲಿ ಈತ ಮೊದಲನೇ ಆರೋಪಿ.

ದೆಹಲಿ ಕಾಂಗ್ರೆಸ್ ಮುಖಂಡ ಮೊಹಮ್ಮದ್ ಇಲ್ತಾಜ್:
ಇಲ್ತಾಜ್ ದೆಹಲಿ ಕಾಂಗ್ರೆಸ್ ಕಾರ್ಯಕಾರಿಣಿ ಸದಸ್ಯ ನಾಸೀರ್ ಹುಸೇನ್ ಅವರ ಕಟ್ಟ ಬೆಂಬಲಿಗ. ರಾಜ್ಯಸಭೆ ಚುನಾವಣೆಯ ವಿಜಯೋತ್ಸವದಲ್ಲಿ ಪಾಲ್ಗೊಳ್ಳಲು ದೆಹಲಿಯಿಂದ ಆಗಮಿಸಿದ್ದ. ಪಾಕ್ ಜಿಂದಾಬಾದ್ ಘೋಷಣೆಯಲ್ಲಿ ಈತ ಎರಡನೇ ಆರೋಪಿಯಾಗಿದ್ದಾನೆ.

ಜಯಮಹಲ್‍ನ ಮುನಾವರ್: ಮೊದಲು ಆರ್‍ಟಿ ನಗರದಲ್ಲಿ ವಾಸವಾಗಿದ್ದ ಈತ ಇತ್ತೀಚೆಗೆ ಜಯಮಹಲ್‍ನಲ್ಲಿ ನೆಲೆಸಿದ್ದ ಸಣ್ಣ-ಪುಟ್ಟ ವ್ಯಾಪಾರಗಳನ್ನು ಮಾಡಿಕೊಂಡಿದ್ದಾನೆ. ಪಾಕ್ ಪರ ಜಿಂದಾಬಾದ್ ಘೋಷಣೆ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ. ಆರೋಪಿಗಳನ್ನು ಬಂಸಿರುವ ಪೆÇಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES

Latest News