ನಿತ್ಯ ನೀತಿ : ಹಣವಂತರ ಜತೆ ನೂರಾರು ವರ್ಷ ಬಾಳುವುದಕ್ಕಿಂತಲೂ ಹೃದಯವಂತರ ಜತೆ ಮೂರು ದಿನ ಬದುಕಿದರೂ ಜೀವನ ಸಾರ್ಥಕ.
ಪಂಚಾಂಗ : ಗುರುವಾರ, 11-04-2024
ಕ್ರೋನಾಮ ಸಂವತ್ಸರ / ಉತ್ತರಾಯಣ / ವಸಂತ ಋತು / ಚೈತ್ರ ಮಾಸ / ಶುಕ್ಲ ಪಕ್ಷ / ತಿಥಿ: ತೃತೀಯಾ / ನಕ್ಷತ್ರ: ಕೃತ್ತಿಕಾ / ಯೋಗ: ಪ್ರೀತಿ / ಕರಣ: ವಣಿಜ್
ಸೂರ್ಯೋದಯ : ಬೆ.06.09
ಸೂರ್ಯಾಸ್ತ : 06.32
ರಾಹುಕಾಲ : 1.30-3.00
ಯಮಗಂಡ ಕಾಲ : 6.00-7.30
ಗುಳಿಕ ಕಾಲ : 9.00-10.30
ರಾಶಿಭವಿಷ್ಯ :
ಮೇಷ: ಆಧ್ಯಾತ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಹಿರಿಯರ ಸಲಹೆ ಪಡೆದು ಕೆಲಸ ಮುಂದುವರೆಸಿ.
ವೃಷಭ: ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದಲ್ಲಿ ಸೌಹಾರ್ದತೆ ಇರಲಿದೆ.
ಮಿಥುನ: ಉದ್ಯೋಗ ಬದಲಾವಣೆ ವಿಚಾರದಲ್ಲಿನ ಗೊಂದಲವನ್ನು ಮೇಲಕಾರಿಗಳ ಗಮನಕ್ಕೆ ತನ್ನಿ.
ಕಟಕ: ಪದೇ ಪದೇ ಮಾನ ಸಿಕ ಕಿರಿಕಿರಿ ಉಂಟಾಗಲಿದೆ. ಸಂಸಾರದಲ್ಲಿ ಸಮತೋಲನ ಕಾಪಾಡಿಕೊಳ್ಳಿ.
ಸಿಂಹ: ವಿಧೇಯತೆಯಿಂದ ಇರುವ ನಿಮ್ಮ ಗುಣ ಉನ್ನತ ಅಧಿಕಾರಿಗಳಿಗೆ ಇಷ್ಟವಾಗಲಿದೆ.
ಕನ್ಯಾ: ಸಮಾಧಾನಚಿತ್ತ ದಿಂದಿದ್ದರೆ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆಯಾಗಲಿದೆ.
ತುಲಾ: ಸರ್ಕಾರದಿಂದ ಆಗಬೇಕಿರುವ ಕೆಲಸ- ಕಾರ್ಯಗಳು ಸುಗಮವಾಗಿ ನೆರವೇರಲಿವೆ.
ವೃಶ್ಚಿಕ: ಕುಟುಂಬದ ವಿಷಯದಲ್ಲಿ ನಿಮ್ಮ ದೃಢ ನಿಲುವಿಗೆ ಎಲ್ಲರಿಂದಲೂ ಸಮ್ಮತಿ ಸಿಗಲಿದೆ.
ಧನುಸ್ಸು: ನೀವು ಚಿಂತಿಸದಂತೆ ನಡೆಯದ ಕಾರಣ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ.
ಮಕರ: ನಿರೀಕ್ಷಿಸಿದಂತೆ ಅಕ ಧನಲಾಭ ದೊರೆಯ ಲಿದೆ. ಅನ್ಯರ ಮಾತಿನ ಬಗ್ಗೆ ವಿಶ್ವಾಸ ಬೇಡ.
ಕುಂಭ: ಸಂಕಷ್ಟಗಳಿಂದ ಮುಕ್ತಿ ದೊರೆಯಲಿದೆ. ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ.
ಮೀನ: ಶಾಂತವಾಗಿದ್ದರೆ ಒಳ್ಳೆಯದು. ವಿರೋಗಳನ್ನು ನಿರ್ಲಕ್ಷಿಸದಿರುವುದು ಸೂಕ್ತ.