Sunday, April 28, 2024
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-02-2024)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (29-02-2024)

ನಿತ್ಯ ನೀತಿ : ತೂಕವಿಲ್ಲದ ನೋಟಿಗಿರುವ ಬೆಲೆ ತೂಕವಿರುವ ಮನುಷ್ಯನಿಗಿಲ್ಲ.

ಪಂಚಾಂಗ ಗುರುವಾರ 29-02-2024
ಶೋಭಕೃತ್‍ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಮಾಘ ಮಾಸ / ಕೃಷ್ಣ ಪಕ್ಷ / ತಿಥಿ: ಪಂಚಮಿ / ನಕ್ಷತ್ರ: ಚಿತ್ತಾ / ಯೋಗ: ವೃದ್ಧಿ / ಕರಣ: ಕೌಲವ

ಸೂರ್ಯೋದಯ : ಬೆ.06.36
ಸೂರ್ಯಾಸ್ತ : 06.28
ರಾಹುಕಾಲ : 1.30-3.00
ಯಮಗಂಡ ಕಾಲ : 6.00-7.30
ಗುಳಿಕ ಕಾಲ : 9.00-10.30

ರಾಶಿ ಭವಿಷ್ಯ
ಮೇಷ
: ಕಿರಿಯ ಸಹೋದರರೊಂದಿಗೆ ಹೆಚ್ಚು ಸಮಯ ಕಳೆಯಲು ಯತ್ನಿಸುವಿರಿ.
ವೃಷಭ: ಹಣಕಾಸು ವ್ಯವಹಾರದಲ್ಲಿ ನಷ್ಟ ತಪ್ಪಿಸುವ ಉದ್ದೇಶದಿಂದ ಜಾಗರೂಕತೆಯಿಂದ ಇರಿ.
ಮಿಥುನ: ನಿಮ್ಮ ನಡವಳಿಕೆಯಲ್ಲಿನ ಬದಲಾವಣೆ ಇತರರಿಗೆ ಚರ್ಚೆಯ ವಿಷಯವಾಗಲಿದೆ.

ಕಟಕ: ಮನೆಗೆ ಹೊಸ ಅತಿಥಿಯೊಬ್ಬರ ಸೇರ್ಪಡೆ ಯಾಗುವುದರಿಂದ ಮನಸ್ಸಿಗೆ ಸಂತೋಷವಾಗುತ್ತದೆ.
ಸಿಂಹ: ಹಿರಿಯರ ಸಕಾಲಿಕ ನೆರವಿನಿಂದ ಎದುರಾಗ ಬಹುದಾದ ವಿಪತ್ತುಗಳು ದೂರವಾಗಲಿವೆ.
ಕನ್ಯಾ: ಹಲವು ದಿನಗಳಿಂದ ಮಾಡಬೇಕೆಂದುಕೊಂಡಿದ್ದ ಕೆಲಸಗಳು ಯಶಸ್ವಿಯಾಗಿ ನಡೆಯಲಿವೆ.

ತುಲಾ: ವಿದ್ಯಾರ್ಥಿಗಳು ಸ್ಪರ್ಧಾ ತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳಲು ಉತ್ತಮ ದಿನ.
ವೃಶ್ಚಿಕ: ಸಾಲ ಮಾಡುವ ಮುನ್ನ ನಿಮ್ಮ ಸಾಮಥ್ರ್ಯ ಏನೆಂಬುದನ್ನು ತಿಳಿದು ಮುಂದೆ ಹೆಜ್ಜೆ ಇಟ್ಟರೆ ಒಳಿತು.
ಧನುಸ್ಸು: ಮನೆಯಲ್ಲಿ ಮಂಗಳಕರ ಕಾರ್ಯ ಮಾಡುವುದರಿಂದ ಮನಸ್ಸಿಗೆ ಸಂತೋಷ ಸಿಗಲಿದೆ.

ಮಕರ: ವಿವಾಹದ ಆಚೆಗಿನ ಸಂಬಂಧದ ಕಡೆಗೆ ಆಕರ್ಷಿತರಾಗಿ, ನೆಮ್ಮದಿ ಹಾಳಾಗುವ ಸಾಧ್ಯತೆ ಇದೆ.
ಕುಂಭ: ಅನೇಕ ಸಮಸ್ಯೆ ಗಳ ನಡುವೆಯೂ ವ್ಯಾಪಾರ ಕ್ಷೇತ್ರದಲ್ಲಿ ಮುಂದುವರಿಯುತ್ತೀರಿ.

ಮೀನ: ವ್ಯಾಪಾರ ಹಾಗೂ ದೂರ ಪ್ರಯಾಣ ಮಾಡುವುದರಿಂದ ಲಾಭದಾಯಕವಾಗಿರುತ್ತದೆ.

RELATED ARTICLES

Latest News