ನಿತ್ಯ ನೀತಿ : ಧೈರ್ಯದಿಂದ ಸತ್ಯವನ್ನು ಎದುರಿಸು. ಜಯ ಎಂಬುದು ಕಟ್ಟಿಟ್ಟ ಬುತ್ತಿ.
ಪಂಚಾಂಗ : ಮಂಗಳವಾರ, 26-03-2024
ಶೋಭಕೃತ್ನಾಮ ಸಂವತ್ಸರ / ಉತ್ತರಾಯಣ / ಶಿಶಿರ ಋತು / ಫಾಲ್ಗುಣ ಮಾಸ / ಶುಕ್ಲ ಪಕ್ಷ / ತಿಥಿ: ಪ್ರತಿಪದ್ / ನಕ್ಷತ್ರ: ಹಸ್ತ / ಯೋಗ: ಧ್ರುವ / ಕರಣ: ತೈತಿಲ
ಸೂರ್ಯೋದಯ : ಬೆ.06.20
ಸೂರ್ಯಾಸ್ತ : 06.31
ರಾಹುಕಾಲ : 3.00-4.30
ಯಮಗಂಡ ಕಾಲ : 9.00-10.30
ಗುಳಿಕ ಕಾಲ : 12.00-1.30
ರಾಶಿಭವಿಷ್ಯ :
ಮೇಷ: ದೂರ ಪ್ರಯಾಣ. ಖರ್ಚು ಹೆಚ್ಚಾಗುವ ಸಂಭವ. ಮಾತನಾಡುವಾಗ ಎಚ್ಚರಿಕೆ ಇರಲಿ.
ವೃಷಭ: ನಿಮ್ಮ ಸುತ್ತಲೂ ನಡೆಯುತ್ತಿರುವ ಕಾರ್ಯಚಟುವಟಿಕೆಗಳ ಬಗ್ಗೆ ಜಾಗರೂಕರಾಗಿರಿ.
ಮಿಥುನ: ಆಸ್ತಿ ಖರೀದಿಸಲು ಅಥವಾ ಹೂಡಿಕೆ ಮಾಡಲು ಬಯಸುವವರು ವಂಚನೆಗೆ ಒಳಗಾಗುವ ಸಾಧ್ಯತೆ ಇರುವುದರಿಂದ ಅತ್ಯಂತ ಎಚ್ಚರಿಕೆಯಿಂದಿರಿ.
ಕಟಕ: ಪತ್ರಿಕೆ ಮತ್ತು ಕೆಲವು ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಕೆಲಸದ ಅಸ್ಥಿರತೆ ಕಾಡಲಿದೆ.
ಸಿಂಹ: ಆರ್ಥಿಕವಾಗಿ ಕೆಲವು ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿವೆ.
ಕನ್ಯಾ: ಕುಲದೇವರ ಪ್ರಾರ್ಥನೆಯಿಂದ ಅನುಕೂಲವಾಗಲಿದೆ.
ತುಲಾ: ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ.
ವೃಶ್ಚಿಕ: ಉಸಿರಾಟದ ತೊಂದರೆ ಇರುವವರು ಎಚ್ಚರಿಕೆಯಿಂದಿದ್ದು, ಸೂಕ್ತ ಚಿಕಿತ್ಸೆ ಪಡೆಯುವುದು ಬಹಳ ಒಳ್ಳೆಯದು.
ಧನುಸ್ಸು: ವಿಧೇಯತೆಯಿಂದ ಇರುವ ನಿಮ್ಮ ಗುಣ ಉನ್ನತ ಅಧಿಕಾರಿಗಳಿಗೆ ಇಷ್ಟವಾಗಲಿದೆ.
ಮಕರ: ಉದ್ಯೋಗ ಬದಲಾವಣೆ ದೊಡ್ಡ ಸಮಸ್ಯೆಯಾಗಲಿದೆ. ದೂರ ಪ್ರಯಾಣ ಬೇಡ.
ಕುಂಭ: ಆರ್ಥಿಕ ಸಮಸ್ಯೆ ಎದುರಿಸಲು ಸಿದ್ಧರಾಗಿ. ಕೃಷಿ ಕಾರ್ಯಗಳು ಬಿಡುವಿಲ್ಲದೆ ನಡೆಯಲಿವೆ.
ಮೀನ: ಚಾಣಾಕ್ಷತನದಿಂದ ಕೆಲಸ-ಕಾರ್ಯಗಳನ್ನು ಸುಲಭವಾಗಿ ಪೂರ್ಣಗೊಳಿಸುವಿರಿ.