Wednesday, May 1, 2024
Homeರಾಜ್ಯಏರಿದ ಬಿಸಿಲಿನ ತಾಪ, ತಂಪು ಪಾನೀಯಗಳಿಗೆ ಹೆಚ್ಚಿದ ಡಿಮ್ಯಾಂಡ್

ಏರಿದ ಬಿಸಿಲಿನ ತಾಪ, ತಂಪು ಪಾನೀಯಗಳಿಗೆ ಹೆಚ್ಚಿದ ಡಿಮ್ಯಾಂಡ್

ಮಾಲೂರು, ಮಾ.25- ಬೇಸಿಗೆಕಾಲ ಆರಂಭವಾಗಿದ್ದು ಪಟ್ಟಣದಲ್ಲಿ ಜನತೆ ಬಿಸಿಲಿನ ಝಳದಿಂದ ತತ್ತರಿಸಿ ಹೋಗಿದ್ದಾರೆ ಬಿಸಿಲಿನ ದಾಹವನ್ನು ತೀರಿಸಿಕೊಳ್ಳಲು ಕಲ್ಲಂಗಡಿ, ಕಬ್ಬಿನ ಹಾಲು , ಎಳನೀರು ಸೇರಿದಂತೆ ತಂಪು ಪಾನೀಯಗಳನ್ನೂ ಹುಡುಕಿಕೊಂಡು ಹೋಗಿ ಬಿಸಿಲಿನ ದಣಿವು ತೀರಿಸಿಕೊಳ್ಳುತ್ತಿದ್ದಾರೆ .

ಏಪ್ರಿಲ್ ,ಮೇ ತಿಂಗಳಲ್ಲಿ ಬಿಸಿಲಿನ ಜಳ ಹೆಚ್ಚಾಗಿರುತ್ತದೆ ಆದರೆ ಪ್ರಸಕ್ತ ವರ್ಷ ಮಾರ್ಚ್ ತಿಂಗಳಿನಲ್ಲಿಯೇ ಬೇಸಿಗೆಯ ಜಳ ಹೆಚ್ಚಾಗಿದ್ದು ಪ್ರತಿನಿತ್ಯ ಮಧ್ಯಾಹ್ನದ ವೇಳೆ ಹೆಚ್ಚಿನ ತಾಪಮಾನ ವಿದ್ದು ಸಾರ್ವಜನಿಕರು ಬಿಸಿಲಿನ ಜಳಕ್ಕೆ ತತ್ತರಿಸಿ ಹೋಗುತ್ತಾರೆ ಬಿಸಿಲಿನ ದಾಹ ದಣಿವು ತೀರಿಸಿಕೊಳ್ಳಲು ಕಲ್ಲಂಗಡಿ, ಕಬ್ಬಿನ ಹಾಲು ಎಳನೀರು ಸೇರಿದಂತೆ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ ಮಧ್ಯಾಹ್ನದ ವೇಳೆ ಸುಡು ಬಿಸಿಲಿನಿಂದಾಗಿ ಸಾರ್ವಜನಿಕರ ಓಡಾಟ ಕಡಿಮೆ ಇರುತ್ತದೆ ಕೆಲವು ಅಂಗಡಿ ಮುಂಗಟ್ಟುಗಳು ಸಂಜೆಯವರೆಗೆ ಮುಚ್ಚಿರುತ್ತಾರೆ.

ಮಾರ್ಚ್ ತಿಂಗಳಿನಲ್ಲಿ ಇಷ್ಟೊಂದು ಬಿಸಿಲಿನ ಝಳ ಇದ್ದರೆ ಏಪ್ರಿಲ್ , ಮೇ ತಿಂಗಳಿನಲ್ಲಿ ಬಿಸಿಲಿನ ಜಳ ಹೇಗಿರುತ್ತದೆ ಎಂದು ಸಾರ್ವಜನಿಕರ ಮಾತನಾಡಿ ಕೊಳ್ಳುತ್ತಾರೆ ಇಂತಹ ಸುಡು ಬಿಸಿಲಿನಲ್ಲಿ ಮತಯಾಚನೆ ಮಾಡುವುದು ಹೇಗೆ ಎಂಬುದು ರಾಜಕಾರಣಿಗಳ ಗೊಂದಲವಾಗಿದೆ.

RELATED ARTICLES

Latest News