Friday, May 24, 2024
Homeರಾಷ್ಟ್ರೀಯಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಪತ್ನಿಯ ಕಾರು ಕಳವು

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಪತ್ನಿಯ ಕಾರು ಕಳವು

ನವದೆಹಲಿ,ಮಾ.25- ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಪತ್ನಿಯ ಬಿಳಿ ಬಣ್ಣದ ಫಾರ್ಚುನರ್ ಕಾರು ಕಳ್ಳತನವಾಗಿರುವ ಸುದ್ದಿ ಬೆಳಕಿಗೆ ಬಂದಿದೆ. ಚಾಲಕ, ಮಲ್ಲಿಕಾ ನಡ್ಡಾ ಅವರ ಫಾರ್ಚುನರ್ ಕಾರನ್ನು ಸರ್ವೀಸ್‍ಗೆ ತೆಗೆದುಕೊಂಡು ಹೋಗಿದ್ದರು. ಕಳೆದ ಮಾರ್ಚ್ 19ರಂದು ಮಧ್ಯಾಹ್ನ 3 ಗಂಟೆಯಿಂದ 4 ಗಂಟೆಯೊಳಗೆ ಅರೋರಾ ಪ್ರಾಪರ್ಟೀಸ್ ಆರ್‍ಡಿ ಮಾರ್ಗದ ಮುಂಭಾಗದಲ್ಲಿರುವ ಗೋವಿಂದಪುರಿಯಿಂದ ಎಚ್‍ಪಿ03ಡಿ0021 ಸಂಖ್ಯೆಯ ಕಾರು ಕಳವಾಗಿದೆ.

ಜೆ.ಪಿ.ನಡ್ಡಾ ಅವರ ಪತ್ನಿಯ ಕಾರು ಸಂಖ್ಯೆ ಹಿಮಾಚಲ ಪ್ರದೇಶದ್ದು ಎಂಬ ಮಾಹಿತಿ ಲಭಿಸಿದೆ. ಕಾರು ಚಾಲಕ ಸರ್ವೀಸ್ ಸೆಂಟರ್‍ನಲ್ಲಿ ಕಾರನ್ನು ನಿಲ್ಲಿಸಿ ಊಟ ಮಾಡಲು ಮನೆಗೆ ತೆರಳಿದ್ದ. ಆದರೆ ವಾಪಸ್ ಬಂದಾಗ ಕಾರು ನಾಪತ್ತೆಯಾಗಿತ್ತು.

ಕೂಡಲೇ ಚಾಲಕ ಜೋಗಿಂದರ್ ಸ್ಥಳೀಯ ಪೂಲೀಸ್ ಠಾಣೆಗೆ ದೂರು ನೀಡಿದ್ದು, ಕಾರ್ಯಾಚರಣೆ ಕೈಗೊಂಡಿರುವ ಪೂಲೀಸರು ಸರ್ವೀಸ್ ಸೆಂಟರ್ ಆಸುಪಾಸಿನ ಸಿಸಿಟಿವಿಗಳನ್ನು ಪರಿಶೀಲಿಸುತ್ತಿದ್ದಾರೆ, ಅಲ್ಲದೆ ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

2022 ಮತ್ತು 2023ರ ನಡುವೆ ಭಾರತದಲ್ಲಿ ವಾಹನ ಕಳ್ಳತನ ಘಟನೆಗಳು 2.5% ರಷ್ಟು ಹೆಚ್ಚಾಗಿದೆ.ದೆಹಲಿ ಸೇರಿದಂತೆ ಹಲವು ಮಹಾನಗರಗಳಲ್ಲಿ ವಾಹನ ಕಳ್ಳತನ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿರುವುದು ಗಮನಾರ್ಹ. ದೆಹಲಿ-ಎನ್‍ಸಿಆರ್‍ನಲ್ಲಿ ಪ್ರತಿ 14 ನಿಮಿಷಕ್ಕೆ ಒಂದು ವಾಹನ ಕಳ್ಳತನವಾಗುತ್ತದೆ.

RELATED ARTICLES

Latest News