Wednesday, December 4, 2024
Homeಅಂತಾರಾಷ್ಟ್ರೀಯ | Internationalಜೋ ಬಿಡೆನ್‌, ಟ್ರಂಪ್‌ ನಡುವೆ ಗದ್ದುಗೆ ಗುದ್ದಾಟ

ಜೋ ಬಿಡೆನ್‌, ಟ್ರಂಪ್‌ ನಡುವೆ ಗದ್ದುಗೆ ಗುದ್ದಾಟ

ವಾಷಿಂಗ್ಟನ್‌, ಮೇ 8 (ಪಿಟಿಐ) : ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಮುನ್ನ ನಡೆದ ಇಂಡಿಯಾನಾ ಡೆಮಾಕ್ರಟಿಕ್‌ ಮತ್ತು ರಿಪಬ್ಲಿಕನ್‌ ಪ್ರೈಮರಿಗಳಲ್ಲಿ ಅಧ್ಯಕ್ಷ ಜೋ ಬಿಡನ್‌ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್‌‍ ಟ್ರಂಪ್‌ ಜಯಗಳಿಸಿದ್ದಾರೆ.

ಅವರ ಈ ಗೆಲುವು ಈಗಾಗಲೇ ರಿಪಬ್ಲಿಕನ್‌ ಅಭ್ಯರ್ಥಿಯಾಗಿರುವ ಟ್ರಂಪ್‌ಗೆ ಮತ್ತೊಂದು 58 ಪ್ರತಿನಿಧಿಗಳನ್ನು ನೀಡುತ್ತದೆ ಎಂದು ಅಲ್ಲಿನ ಮಾಧ್ಯಮ ವರದಿಗಳು ತಿಳಿಸಿವೆ. ಇಂಡಿಯಾನಾದ ರಿಪಬ್ಲಿಕನ್‌ ಮತಪತ್ರದಲ್ಲಿ 77 ವರ್ಷದ ಟ್ರಂಪ್‌ ಮಾತ್ರ ಸಕ್ರಿಯ ಅಭ್ಯರ್ಥಿಯಾಗಿದ್ದರು.

ಪ್ರೆಸಿಡೆಂಟ್‌ ಬಿಡೆನ್‌ ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿಯೂ ಸಹ ಆಗಿದ್ದಾರೆ ಅವರು ಇಂಡಿಯಾನಾದ ಡೆಮಾಕ್ರಟಿಕ್‌ ಪ್ರೈಮರಿಯಲ್ಲಿ ಎಲ್ಲಾ 79 ಪ್ರತಿನಿಧಿಗಳನ್ನು ಗೆದ್ದರು. ಇಂಡಿಯಾನಾದಲ್ಲಿ 81 ವರ್ಷದ ಬಿಡೆನ್‌ ಅವರ ಹೆಸರು ಮಾತ್ರ ಮತಪತ್ರದಲ್ಲಿ ಕಾಣಿಸಿಕೊಂಡಿದೆ.

ಬಿಡೆನ್‌ ಮತ್ತು ಟ್ರಂಪ್‌ ನಡುವಿನ ಸ್ಪರ್ಧೆಯು 1912 ರ ನಂತರ ಮೊದಲ ಬಾರಿಗೆ ಮಾಜಿ ಅಧ್ಯಕ್ಷ ಮತ್ತು ಹಾಲಿ ಅಧ್ಯಕ್ಷರು ನವೆಂಬರ್‌ 5 ರ ಚುನಾವಣೆಯಲ್ಲಿ ಹೋರಾಡುತ್ತಾರೆ. ಆ ಓಟದಲ್ಲಿ, ನ್ಯೂಜೆರ್ಸಿ ಗವರ್ನರ್‌ ವುಡ್ರೋ ವಿಲ್ಸನ್‌ ಅವರು ಹಾಲಿ ಅಧ್ಯಕ್ಷ ವಿಲಿಯಂ ಹೊವಾರ್ಡ್‌ ಟಾಫ್‌್ಟ ಮತ್ತು ಮಾಜಿ ಅಧ್ಯಕ್ಷ ಥಿಯೋಡರ್‌ ರೂಸ್ವೆಲ್ಟ್‌‍ ಅವರನ್ನು ಸೋಲಿಸಿದರು ಎಂದು ವರದಿಯಾಗಿದೆ.

RELATED ARTICLES

Latest News