Monday, May 20, 2024
Homeಜಿಲ್ಲಾ ಸುದ್ದಿಗಳುSSLC ಫಲಿತಾಂಶ ಹೊರ ಬಿದ್ದ ಬೆನ್ನಲ್ಲೇ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತೆ

SSLC ಫಲಿತಾಂಶ ಹೊರ ಬಿದ್ದ ಬೆನ್ನಲ್ಲೇ ಇಬ್ಬರು ವಿದ್ಯಾರ್ಥಿನಿಯರು ಆತ್ಮಹತೆ

ಕೊರಟಗೆರೆ,ಮೇ10- ಎಸ್‌‍ ಎಸ್‌‍ ಎಲ್‌ ಸಿ ಫಲಿತಾಂಶದ ಹೊರ ಬಿದ್ದ ಕೆಲವೇ ಗಂಟೆಗಳಲ್ಲಿ ಕೊರಟಗೆರೆ ತಾಲೂಕಿನ ಇಬ್ಬರು ವಿದ್ಯಾರ್ಥಿನಿಯರು ಅನುತ್ತೀರ್ಣರಾಗಿರುವುದಾಗಿ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟ ಘಟನೆ ಜರುಗಿದೆ.

ಕೊರಟಗೆರೆ ತಾಲೂಕಿನ ಯಾವೂರು ಯಾವುದು ಬುಕ್ಕಾಪಟ್ಟಣ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಪ್ರಿಯದರ್ಶಿನಿ ಪಿನಾಯಿಲ್‌ ಕುಡಿದರೆ ಸಿದ್ದರಬೆಟ್ಟ ಅಂಬೇಡ್ಕರ್‌ ಶಾಲೆಯ ಹರರ್ಜಿನಹಳ್ಳಿ ವಿದ್ಯಾರ್ಥಿನಿ ರಂಜಿತ ಲಕ್ಷ್ಮಣ್‌ ರೇಖೆ ಕುಡಿದು ಪೋಷಕರಿಗೆ ಮುಖ ತೋರಿಸುವುದು ಹೇಗೆ ಎಂದು ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದಾರೆ ಎನ್ನಲಾಗಿದೆ.

ಇಬ್ಬರೂ ವಿದ್ಯಾರ್ಥಿನಿಯರು ಎಸ್‌‍ ಎಸ್‌‍ ಎಲ್‌ ಸಿ ಯಲ್ಲಿ ಅನುತ್ತೀರ್ಣರಾಗಿದ್ದಾರೆ ಎಂಬುವ ಮಾಹಿತಿ ತಿಳಿದ ತಕ್ಷಣ ಪೋಷಕರಿಗೆ ಸಂಬಂಧಿಕರಿಗೆ ಹಾಗೂ ಸ್ನೇಹಿತರಿಗೆ ಮುಖ ತೋರಿಸುವುದು ಹೇಗೆ ಎಂದು ಆತ್ಮಹತ್ಯೆಗೆ ಯತ್ನಿಸಿದೆವು ಎಂದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಪೋಷಕರ ಮುಂದೆ ಅಳಲು ತೋಡಿಕೊಂಡು ತಮ್ಮ ತಪ್ಪಿಗೆ ಪೋಷಕರು ಕ್ಷಮಿಸಬೇಕು ಮುಂದಿನ ದಿನಗಳಲ್ಲಿ ನಾವು ಎಸ್‌‍ ಎಸ್‌‍ ಎಲ್‌ ಸಿ ಪರೀಕ್ಷೆಯಲ್ಲಿ ಓದಿ ಒಳ್ಳೆ ಫಲಿತಾಂಶ ತರುತ್ತೇವೆ ಎಂದು ಕಣ್ಣೀರಿಡುತ್ತಿದ್ದಾರೆ.

ಪೋಷಕರು ನಮ್ಮ ಮಕ್ಕಳು ನಮ್ಮ ಕಣ್ಮುಂದೆ ಇದ್ರೆ ಸಾಕು ವಿದ್ಯಾಭ್ಯಾಸ ಮಾಡಿದ್ರೆ ಒಳ್ಳೆಯ ಭವಿಷ್ಯ ಸಿಗುತ್ತೆ ಅಂದುಕೊಳ್ಳುತ್ತೇವೆ ಆದರೆ ನಾವು ಯಾವುದೇ ಕಾರಣಕ್ಕೂ ಒತ್ತಡ ಹಾಕೋದು ಬೇಡ ನಮ್ಮ ಮಕ್ಕಳು ನಮ್ಮ ಕಣ್ಮುಂದೆ ಇದ್ರೆ ಸಾಕು ಯಾವ ವಿದ್ಯಾಭ್ಯಾಸೂ ಬೇಡ ದುಡಿಯೋಕೆ ಬಹಳಷ್ಟು ಮಾರ್ಗಗಳಿವೆ ಎಂದು ಪೋಷಕರು ತಮ್ಮ ಮಕ್ಕಳ ಮುಂದೆ ಅಳಲು ತೋಡಿಕೊಳ್ಳುತ್ತಿದ್ದ ಕಂಡು ಬಂದಿದೆ.

ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ವೈದ್ಯರಾದ ಪುರುಷೋತ್ತಮ್‌ ನಾಯಕ್‌ ಚಿಕಿತ್ಸೆ ನೀಡಿದ್ರೆ ಹೆಚ್ಚಿನ ಕಾಳಜಿಯನ್ನ ಮುಖ್ಯ ವೈದ್ಯಾಧಿಕಾರಿಗಳಾದ ಲಕ್ಷ್ಮಿಕಾಂತ್‌ ವಹಿಸಿಕೊಂಡು ವಿದ್ಯಾರ್ಥಿಗಳ ಯೋಗ್ಯ ಕ್ಷೇಮ ನಿಗಾ ಇಟ್ಟು ಚಿಕಿತ್ಸೆ ನೀಡಿದ್ದಾರೆ ಎನ್ನಲಾಗಿದೆ.

RELATED ARTICLES

Latest News