Saturday, February 1, 2025
Homeರಾಷ್ಟ್ರೀಯ | National2025-26ನೇ ಸಾಲಿನ ಕೇಂದ್ರ ಬಜೆಟ್ (Live Updates)

2025-26ನೇ ಸಾಲಿನ ಕೇಂದ್ರ ಬಜೆಟ್ (Live Updates)

Union Budget for the year 2025-26 Live Updates

Budget Live Updates :

ನವದೆಹಲಿ,ಫೆ.1- ವಿಕಸಿತ ಭಾರತದ ಭವ್ಯ ಕನಸಿನೊಂದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇಂದು ಸಂಸತ್‌ನಲ್ಲಿ ತಮ 8ನೇ ಬಜೆಟ್‌ ಅನ್ನು ಮಂಡಿಸಿದರು.ಬಡತನ ಶೂನ್ಯತೆ, ಶೇ.100 ರಷ್ಟು ಗುಣಮಟ್ಟ, ಉತ್ತಮ ಶಾಲಾ ಶಿಕ್ಷಣ, ಎಲ್ಲರಿಗೂ ಸಮಗ್ರ ಕೈಗೆಟಕುವ ಹಾಗೂ ಗುಣಮಟ್ಟದ ವೈದ್ಯಕೀಯ ಕಾಳಜಿ, ಶೇ.100ರಷ್ಟು ಕೌಶಲ್ಯಭರಿತ ದುಡಿಯುವ ವರ್ಗ ಮತ್ತು ಅರ್ಥಪೂರ್ಣ ಉದ್ಯೋಗ, ಶೇ.70ರಷ್ಟು ಮಹಿಳೆಯರನ್ನು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸುವುದು ಹಾಗೂ ಭಾರತವನ್ನು ವಿಶ್ವದ ಆಹಾರ ಬುಟ್ಟಿಯನ್ನಾಗಿ ಪರಿವರ್ತಿಸುವ ಮಹದುದ್ದೇಶವನ್ನು ಸಚಿವೆ ನಿರ್ಮಲಾ ಸೀತಾರಾಮನ್‌ ತಮ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ.

ಪ್ರಮುಖವಾಗಿ ಬಡತನ, ಯುವಸಮುದಾಯ, ಕೃಷಿಕರು ಹಾಗೂ ಮಹಿಳೆಯರನ್ನು ಕೇಂದ್ರೀಕರಿಸಿರುವ ನಿರ್ಮಲಾ ಸೀತಾರಾಮನ್‌ 10 ಪ್ರಮುಖ ವಲಯಗಳನ್ನು ಗುರುತಿಸಿದ್ದಾರೆ.ಅದರಲ್ಲಿ ಕೃಷಿ ಬೆಳವಣಿಗೆ ಮತ್ತು ಉತ್ಪಾದಕತೆಯನ್ನು ಉತ್ತೇಜಿಸುವುದು, ಗ್ರಾಮೀಣ ಸಮೃದ್ಧಿ ಮತ್ತು ಸ್ಥಿತಿಸ್ಥಾಪಕತ್ವ ನಿರ್ಮಾಣ, ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಯ ಹಾದಿ ನಿರ್ಮಾಣ, ಸೂಕ್ಷ್ಮ, ಸಣ್ಣ, ಮಧ್ಯಮ ಉದ್ಯಮಗಳನ್ನು ಬೆಂಬಲಿಸುವುದು, ಉದ್ಯೋಗ ಆಧಾರಿತ ಅಭಿವೃದ್ಧಿಗೆ ಬೆಂಬಲಿಸುವುದು, ಜನರ ಆರ್ಥಿಕ ತೆಯ ಹೂಡಿಕೆಯಲ್ಲಿ ನಾವಿನ್ಯತೆ ಮತ್ತು ಸುರಕ್ಷತೆ, ಇಂಧನ ಪೂರೈಕೆಯ ಖಾತ್ರಿ, ರಫ್ತು ಉತ್ತೇಜನ, ಸಮೃದ್ಧ ಪೌಷ್ಠಿಕತೆ ಸೇರಿ 10 ಆದ್ಯತಾ ವಲಯಗಳನ್ನು ನಿರ್ಮಲಾ ಸೀತಾರಾಮನ್‌ ಕೇಂದ್ರೀಕರಿಸಿದ್ದಾರೆ.

ಉದ್ಯಮ ವಲಯವನ್ನು ಸದೃಢಗೊಳಿಸಲು ಹೊಸ ನಿಧಿ ಸ್ಥಾಪಿಸಿದ್ದು, ನವೋದ್ಯಮಗಳಿಗಾಗಿ ಪ್ರತ್ಯೇಕ ಅನುದಾನ ಮೀಸಲಿರಿಸಲಾಗಿದೆ. ಈಗಾಗಲೇ ಚಾಲ್ತಿಯಲ್ಲಿರುವ 10 ಸಾವಿರ ಕೋಟಿ ರೂ.ಗಳ ಜೊತೆಗೆ ಹೆಚ್ಚುವರಿಯಾಗಿ ಸರ್ಕಾರ 10 ಸಾವಿರ ಕೋಟಿ ರೂ.ಗಳನ್ನು ಒದಗಿಸುತ್ತಿದೆ. ಮೊದಲ ಬಾರಿಗೆ ಉದ್ಯಮಿಯಾಗುತ್ತಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ 5 ಲಕ್ಷ ರೂ. ನೀಡುವ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ.

ಎಂಎಸ್‌‍ಎಂಇಗಳಿಗೆ ಸಾಲಭದ್ರತೆ ಪ್ರಮಾಣವನ್ನು ಗಮನಾರ್ಹವಾಗಿ ಹೆಚ್ಚಿಸಲಾಗಿದೆ. ಸೂಕ್ಷ್ಮ ಉದ್ಯಮಗಳಿಗಾಗಿ ಕ್ರೆಡಿಟ್‌ಕಾರ್ಡ್‌ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಉದ್ಯಮ ವಲಯದಲ್ಲಿ ನೋಂದಾಯಿತರಾದವರಿಗೆ 5 ಲಕ್ಷ ರೂ. ಸಾಲ ಮಿತಿಯೊಂದಿಗೆ 10 ಲಕ್ಷ ರೂ. ಕಸ್ಟಮೈಸ್ಡ್‌ ಕ್ರೆಡಿಟ್‌ ಕಾರ್ಡ್‌ಗಳನ್ನು ಮೊದಲ ವರ್ಷದಲ್ಲಿ ವಿತರಿಸುವುದಾಗಿ ತಿಳಿಸಿದ್ದಾರೆ.ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ನೀಡುವ ಸಾಲವನ್ನು 5 ರಿಂದ 10 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದ್ದು, ಮುಂದಿನ ಐದೂವರೆ ವರ್ಷ 1.50 ಲಕ್ಷ ಕೋಟಿ ರೂ. ಖರ್ಚು ಮಾಡುವುದಾಗಿ ಹೇಳಿದ್ದಾರೆ.

27 ಆದ್ಯತಾ ವಲಯದ ನವೋದ್ಯಮಗಳಿಗೆ 10 ರಿಂದ 20 ಕೋಟಿ ರೂ. ನೆರವು, ಖಾತ್ರಿ ಶುಲ್ಕವನ್ನು ಶೇ.1 ರಷ್ಟು ಕಡಿಮೆ ಮಾಡಲಾಗಿದೆ. ಎಂಎಸ್‌‍ಎಂಇ ವಲಯದ ಹೂಡಿಕೆಯಲ್ಲಿ 2 ರೀತಿಯ ವರ್ಗೀಕರಣ ಮಾಡಲಾಗಿದ್ದು, ಹೂಡಿಕೆಯ ಪ್ರಮಾಣವನ್ನು ಎರಡೂವರೆ ಪಟ್ಟು ಹೆಚ್ಚಿಸಲಾಗಿದೆ. ಹಾಗೆಯೇ ವಹಿವಾಟಿನ ಮಿತಿಯನ್ನೂ ದುಪ್ಪಟ್ಟುಗೊಳಿಸಲಾಗಿದೆ.

ಸೂಕ್ಷ್ಮ ಉದ್ಯಮವಲಯದಲ್ಲಿ ಹೂಡಿಕೆಯ ಮಿತಿ ಪ್ರಸ್ತುತ 1 ಕೋಟಿ ರೂ.ಗಳಿದ್ದು ಅದನ್ನು 2.50 ಕೋಟಿ ರೂ.ಗೆ ವಿಸ್ತರಿಸಲಾಗಿದೆ. ವಹಿವಾಟಿನ ಮಿತಿಯನ್ನು 5 ಕೋಟಿ ರೂ.ಗಳಿಂದ 10 ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿದೆ. ಸಣ್ಣ ಕೈಗಾರಿಕೆಗಳಿಗೆ ಹೂಡಿಕೆಯ ಮಿತಿ 10 ರಿಂದ 25 ಕೋಟಿ ರೂ.ಗೆ, ವಹಿವಾಟು 50 ರಿಂದ 100 ಕೋಟಿ ರೂ.ಗೆ, ಮಧ್ಯಮ ಕೈಗಾರಿಕೆಗಳ ಹೂಡಿಕೆ ಮಿತಿ 50 ರಿಂದ 125 ಕೋಟಿ ರೂ., ವಹಿವಾಟಿನ ಮಿತಿ 150 ರಿಂದ 500 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.

ಭಾರತದಲ್ಲಿ 1 ಕೋಟಿ ರೂ. ನೋಂದಾಯಿತ ಎಂಎಸ್‌‍ಎಂಇಗಳಿಗೂ 7.5 ಕೋಟಿ ಉದ್ಯೋಗಿಗಳಿದ್ದಾರೆ. ರಫ್ತು ವಲಯಕ್ಕೆ ಶೇ.45 ರಷ್ಟು, ಉತ್ಪಾದನಾ ವಲಯಕ್ಕೆ ಶೇ.36ರಷ್ಟು ಪಾಲು ಹೊಂದಿದೆ.ವಾರ್ಷಿಕ 12.7 ಲಕ್ಷ ಮೆಟ್ರಿಕ್‌ ಟನ್‌ ಯೂರಿಯಾ ಉತ್ಪಾದನಾ ಘಟಕವನ್ನು ಅಸ್ಸಾಂನ ನಮ್‌ರೂಪ್‌ನಲ್ಲಿ ಸ್ಥಾಪಿಸಲಾಗುತ್ತದೆ. ಹಾಗೆಯೇ ಈಶಾನ್ಯ ವಲಯದಲ್ಲಿರುವ 3 ಯೂರಿಯಾ ಘಟಕಗಳನ್ನು ಮರು ಆರಂಭಿಸುವುದಾಗಿ ತಿಳಿಸಿದ್ದಾರೆ..

>ಬಜೆಟ್‌ನಲ್ಲಿ ಬಿಹಾರಕ್ಕೆ ಸಿಂಹಪಾಲು, ಎಲೆಕ್ಷನ್ ಟಾರ್ಗೆಟ್
ಎನ್‌ಡಿಎ ಮಿತ್ರಪಕ್ಷವಾಗಿರುವ ಜೆಡಿಯುಗೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸಿಂಹಪಾಲು ಸಿಕ್ಕಿದೆ. ಈ ವರ್ಷ ವಿಧಾನಸಭೆ ಚುನಾವಣೆ ನಡೆಯುವ ಹಿನ್ನೆಲೆ ಹಾಗೂ ಎನ್‌ಡಿಎ ಮಿತ್ರಪಕ್ಷವನ್ನು ಓಲೈಸಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿರುವ ಪ್ರಧಾನಿ ನರೇಂದ್ರಮೋದಿ ಅವರು ಬಜೆಟ್‌ನಲ್ಲಿ ಬಿಹಾರಕ್ಕೆ ನಿರೀಕ್ಷೆಗೂ ಮೀರಿದ ಆದ್ಯತೆ ನೀಡಿದ್ದಾರೆ.

> ಬೃಹತ್‌ ಸಾರ್ವಜನಿಕ ಸಂಸ್ಥೆಯಾಗಲಿದೆ ಇಂಡಿಯಾ ಪೋಸ್ಟ್‌
ಗ್ರಾಮೀಣ ಆರ್ಥಿಕತೆಗೆ ಒತ್ತು ನೀಡುವ ಉದ್ದೇಶದಿಂದ ಇಂಡಿಯಾ ಪೋಸ್ಟ್‌ ಸಂಸ್ಥೆಯನ್ನು ಹೊಸ ಶಕ್ತಿಯನ್ನಾಗಿ ಪರಿವರ್ತಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

> ಮಖಾನಾ ಮಂಡಳಿ ಸ್ಥಾಪನೆ
ಬಿಹಾರದಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಸಂಸ್ಥೆಯನ್ನು ಸ್ಥಾಪಿಸುತ್ತೇವೆ, ಇದು ಪೂರ್ವ ಭಾರತದಲ್ಲಿ ಆಹಾರ ಸಂಸ್ಕರಣೆಯನ್ನು ಉತ್ತೇಜಿಸುತ್ತದೆ. ಇದರಿಂದ ಯುವಕರಿಗೆ ಉದ್ಯೋಗ ಸಷ್ಟಿಯಾಗಲಿದೆ ಎಂದು ನಿರ್ಮಲಾ ಸೀತಾರಾಮನ್‌ ತಮ ಬಜೆಟ್‌ ಭಾಷಣದಲ್ಲಿ ತಿಳಿಸಿದ್ದಾರೆ.

> ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮಿತಿ 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಳ
ಈ ಬಾರಿಯ ಬಜೆಟ್‌ನಲ್ಲಿ ದೇಶದ ಅನ್ನದಾತ ರೈತರಿಗೆ ಮತ್ತಷ್ಟು ಸಾಲವನ್ನು ನೀಡುವ ದೃಷ್ಟಿಯಿಂದ ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್‌ ಘೋಷಿಸಿದ್ದಾರೆ.

> ಬಜೆಟ್‌ನಲ್ಲಿ ಪ್ರಮುಖ ಹತ್ತು ಅಂಶಗಳಿಗೆ ಆದ್ಯತೆ : ನಿರ್ಮಲಾ ಸೀತಾರಾಮನ್‌
ಪ್ರಸಕ್ತ ಸಾಲಿನ ಬಜೆಟ್‌ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಈ ಬಾರಿ ಪ್ರಮುಖವಾಗಿ 10 ಅಂಶಗಳ ಗುರಿ ಇಡಲಾಗಿದೆ ಎಂದು ಹೇಳಿದ್ದಾರೆ. ಅಭಿವೃದ್ದಿಯ ಕಾರ್ಯಕ್ರಮಗಳು, ಗರೀಬ್‌, ಯುವಕರು, ಅನ್ನದಾತ, ನಾರಿಯರನ್ನು ಕೇಂದ್ರಿಕರಿಸುವುದು ಸೇರಿದಂತೆ ಬಜೆಟ್‌ನಲ್ಲಿ ಹತ್ತು ಅಂಶಗಳಿಗೆ ಆದ್ಯತೆ ನೀಡಲಾಗಿದೆ ಎಂದು ತಮ ಬಜೆಟ್‌ನಲ್ಲಿ ತಿಳಿಸಿದ್ದಾರೆ.

* ಬಜೆಟ್ ಮಂಡನೆಗೂ ಮುನ್ನ ರಾಷ್ಟ್ರಪತಿಗಳನ್ನು ಭೇಟಿಯಾಗಿ ಅನುಮತಿ ಪಡೆದ ನಿರ್ಮಲಾ :
ಎನ್ ಡಿಎ ಸರ್ಕಾರದ ಪೂರ್ಣ ಪ್ರಮಾಣದ 2025 – 26 ನೇ ಸಾಲಿನ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಾಲ ಸೀತಾರಾಮನ್ ಅವರು ಸಂಪ್ರಾದಯದಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಅನುಮತಿ ಪಡೆದುಕೊಂಡರು.ರಾಷ್ಟ್ರಪತಿ ಭವನಕ್ಕೆ ತೆರಳಿದ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಬಜೆಟ್ ಪುಸ್ತಕವನ್ನು ಹಸ್ತಾಂತರ ಮಾಡಿದರು.

ಈ ಹಿಂದೆ ಹಣಕಾಸು ಸಚಿವರು ಬಜೆಟ್ ಪುಸ್ತಕವನ್ನು ತಂದು ಓದುತ್ತಿದ್ದರು. 2019ರಲ್ಲಿ ಮೊದಲ ಬಾರಿ ಬಜೆಟ್ ಮಂಡಿಸಿದ್ದ ಸೀತಾರಾಮನ್ ಬ್ರೀಫ್ಕೇಸ್ ಬಜೆಟ್ ಸಾಂಪ್ರದಾಯಕ್ಕೆ ಗುಡ್ಬೈ ಹೇಳಿದ್ದರು. 2021ರಲ್ಲಿ ಕೋವಿಡ್ ಬಳಿಕ ಮೊದಲ ಬಾರಿ ಕಾಗದ ಪತ್ರಗಳನ್ನು ಬಿಟ್ಟು ಡಿಜಿಟಲ್ ಟ್ಯಾಬ್ಲೆಟ್ನಲ್ಲಿ ಬಜೆಟ್ ಮಂಡಿಸಿದ್ದರು. ಈ ಬಾರಿಯೂ ಬಜೆಟ್ ಭಾಷಣವನ್ನು ಪುಸ್ತಕದ ಬದಲಾಗಿ ಟ್ಯಾಬ್ಲೆಟ್ ಹಿಡಿದುಕೊಂಡೆ ಮಂಡಿಸದರು. ರಾಷ್ಟ್ರಪತಿ ಭವನದಿಂದ ನೇರವಾಗಿ ಲೋಕಸಭೆಗೆ ಆಗಮಿಸಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಬಜೆಟ್ ಗೆ ಆಂಗೀಕಾರ ಪಡೆದುಕೊಂಡರು.

* ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ (ಫೆಬ್ರವರಿ 1) ತಮ್ಮ ಸತತ ಎಂಟನೇ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ. ಆರ್ಥಿಕ ಬೆಳವಣಿಗೆ, ನಿರುದ್ಯೋಗ ಮತ್ತು ಮಧ್ಯಮ ವರ್ಗಕ್ಕೆ ಪರಿಹಾರದಂತಹ ವಿಷಯಗಳನ್ನು ಚರ್ಚಿಸುವ ನಿರೀಕ್ಷೆಯಿದೆ. ಅವರ ಭಾಷಣವು ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾಗುತ್ತದೆ. ಒಂದು ದಿನದ ಮೊದಲು, ವಾಡಿಕೆಯಂತೆ ಆರ್ಥಿಕ ಸಮೀಕ್ಷೆಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಮುಂದಿನ ಹಣಕಾಸು ವರ್ಷಕ್ಕೆ ಶೇ. 6.3-6.8 ರಷ್ಟು ಬೆಳವಣಿಗೆಯ ದರವನ್ನು ಅದು ಅಂದಾಜಿಸಿದೆ, “ವಿಕ್ಷಿತ್ ಭಾರತ್@2047 ನಮ್ಮ ಸ್ವಾತಂತ್ರ್ಯದ ಶತಮಾನೋತ್ಸವವಾದ 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ರೂಪಿಸುತ್ತದೆ. ಇದು ಕನಿಷ್ಠ ಒಂದು ದಶಕದವರೆಗೆ ಪ್ರತಿ ವರ್ಷ ಶೇ. 8 ರಷ್ಟು ನಿರಂತರ ಆರ್ಥಿಕ ಬೆಳವಣಿಗೆಯನ್ನು ಒಳಗೊಂಡಿರುತ್ತದೆ” ಎಂದು ಹೇಳುತ್ತದೆ.

ಬಜೆಟ್ ಮಂಡನೆಗೂ ಮುನ್ನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಸಾಂಪ್ರದಾಯಿಕ ‘ದಹಿ-ಚೀನಿ’ (ಮೊಸರು ಮತ್ತು ಸಕ್ಕರೆ) ತಿನ್ನಿಸಿದರು.

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್, ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಮತ್ತು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಗಳು ಕೇಂದ್ರ ಬಜೆಟ್ ಮಂಡಿಸುವ ಮೊದಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿ ಭವನದಲ್ಲಿ ಭೇಟಿಯಾದರು. ಬಜೆಟ್ ಮಂಡನೆಗಾಗಿ ರಾಷ್ಟ್ರಪತಿಗಳು ಕೇಂದ್ರ ಹಣಕಾಸು ಸಚಿವರು ಮತ್ತು ಅವರ ತಂಡಕ್ಕೆ ಶುಭಾಶಯಗಳನ್ನು ವ್ಯಕ್ತಪಡಿಸಿದರು.

ಬಜೆಟ್ ಕುರಿತ ಕುತೂಹಲಕಾರಿ ಹೈಲೈಟ್ಸ್:
1)ಸ್ವಾತಂತ್ರ್ಯ ನಂತರ ಭಾರತದಲ್ಲಿ ಮೊದಲ ಬಜೆಟ್ ಮಂಡನೆಯಾಗಿದ್ದು, 1947ರ ನವೆಂಬರ್ 26ರಂದು. ದೇಶದ ಪ್ರಥಮ ವಿತ್ತ ಸಚಿವ ಆರ್.ಕೆ.ಷಣ್ಮುಖಂ ಚೆಟ್ಟಿ ಅಂದು ಬಜೆಟ್ ಮಂಡಿಸಿದ್ದರು.

2)ಅತೀ ಹೆಚ್ಚು ಬಜೆಟ್ ಮಂಡನೆ:
ದೇಶದಲ್ಲಿ ಅತೀ ಹೆಚ್ಚು ಬಜೆಟ್ ಗಳನ್ನು ಮಂಡಿಸಿದ ದಾಖಲೆ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಹೆಸರಿನಲ್ಲಿದೆ. ಅವರು ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದಾಗ ಒಟ್ಟು 10 ಬಜೆಟ್ ಗಳನ್ನು ಮಂಡಿಸಿದ್ದರು. ಮೊರಾರ್ಜಿ ದೇಸಾಯಿ ಅವರು 1959 ಫೆ.28ರಂದು ತಮ್ಮ ಮೊದಲ ಬಜೆಟ್ ಅನ್ನು ಮಂಡಿಸಿದ್ದರು.

3)2ನೇ ಅತೀ ಹೆಚ್ಚು ಬಜೆಟ್ ಮಂಡನೆ:
ಮೊರಾರ್ಜಿ ದೇಸಾಯಿ ಅತೀ ಹೆಚ್ಚು ಬಜೆಟ್ ಮಂಡಿಸಿದ ಮೊದಲ ಮಾಜಿ ವಿತ್ತ ಸಚಿವರಾಗಿದ್ದು, ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ 9 ಬಜೆಟ್ ಗಳನ್ನು ಮಂಡಿಸಿದ್ದು, ಅತೀ ಹೆಚ್ಚು ಬಜೆಟ್ ಮಂಡಿಸಿದ 2ನೇ ವ್ಯಕ್ತಿಯಾಗಿದ್ದಾರೆ. 1996ರ ಮಾರ್ಚ್ 19ರಂದು ಪ್ರಧಾನಿ ಎಚ್.ಡಿ.ದೇವೇಗೌಡ ನೇತೃತ್ವದ ಸಂಪುಟದಲ್ಲಿದ್ದ ಪಿ.ಚಿದಂಬರಂ ತಮ್ಮ ಮೊದಲ ಬಜೆಟ್ ಅನ್ನು ಮಂಡಿಸಿದ್ದರು. ನಂತರ ಕಾಂಗ್ರೆಸ್ ಮೈತ್ರಿಯ ಯುಪಿಎ ಸರ್ಕಾರದಲ್ಲಿ ಉಳಿದ ಬಜೆಟ್ ಗಳನ್ನು ಮಂಡಿಸಿದ್ದರು.

4)ಪ್ರಣಬ್ ಮುಖರ್ಜಿ:
ಮಾಜಿ ವಿತ್ತ ಸಚಿವ ಪ್ರಣಬ್ ಮುಖರ್ಜಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಎಂಟು ಬಾರಿ ಬಜೆಟ್ ಮಂಡಿಸಿದ್ದರು. 1982, 1983 ಮತ್ತು 1984ರಲ್ಲಿ ಐದು ಪೂರ್ಣಾವಧಿ ಬಜೆಟ್ ಮಂಡಿಸಿದ್ದು, 2009ರ ಫೆಬ್ರವರಿ ಮತ್ತು 2012ರ ಮಾರ್ಚ್ ನಲ್ಲಿ ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದಾಗ ಎರಡು ಬಾರಿ ಬಜೆಟ್ ಮಂಡಿಸಿದ್ದರು.

5) ಮನಮೋಹನ್ ಸಿಂಗ್:
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 1991 ಮತ್ತು 1995ರ ನಡುವೆ ಐದು ಬಾರಿ ಬಜೆಟ್ ಮಂಡಿಸಿದ್ದರು. ಪ್ರಧಾನಿ ನರಸಿಂಹ ರಾವ್ ನೇತೃತ್ವದ ಸರ್ಕಾರದಲ್ಲಿ ವಿತ್ತ ಸಚಿವರಾಗಿದ್ದ ವೇಳೆ ಸಿಂಗ್ ಬಜೆಟ್ ಮಂಡಿಸಿದ್ದರು.

6)ಬಜೆಟ್ ನ ದೀರ್ಘ ಭಾಷಣ:
2020ರ ಫೆಬ್ರವರಿ 1ರಂದು 2ಗಂಟೆ 40 ನಿಮಿಷಗಳ ಕಾಲ ದೀರ್ಘಾವಧಿಯ ಬಜೆಟ್ ಭಾಷಣ ಮಾಡುವ ಮೂಲಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದಾಖಲೆ ಬರೆದಿದ್ದರು. ಭಾಷಣ ಅರ್ಧಕ್ಕೆ ನಿಲ್ಲಿಸುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದರು.

6)ಬಜೆಟ್ ನ ದೀರ್ಘ ಭಾಷಣ:
2020ರ ಫೆಬ್ರವರಿ 1ರಂದು 2ಗಂಟೆ 40 ನಿಮಿಷಗಳ ಕಾಲ ದೀರ್ಘಾವಧಿಯ ಬಜೆಟ್ ಭಾಷಣ ಮಾಡುವ ಮೂಲಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದಾಖಲೆ ಬರೆದಿದ್ದರು. ಭಾಷಣ ಅರ್ಧಕ್ಕೆ ನಿಲ್ಲಿಸುವ ಮೊದಲು ಇನ್ನೂ ಎರಡು ಪುಟಗಳಷ್ಟು ಭಾಷಣ ಬಾಕಿ ಉಳಿದಿತ್ತು.

7) ಅತೀ ಚಿಕ್ಕ ಬಜೆಟ್ ಭಾಷಣ:
1977ರಲ್ಲಿ ಹಿರುಭಾಯ್ ಮುಲ್ಟಿಭಾಯ್ ಪಟೇಲ್ ಅವರು ಮಂಡಿಸಿದ್ದ ಮಧ್ಯಂತರ ಬಜೆಟ್ ಭಾಷಣ ಕೇವಲ 800 ಶಬ್ದ ಮಾತ್ರ. ಇದು ಅತ್ಯಂತ ಚಿಕ್ಕ ಬಜೆಟ್ ಭಾಷಣವಾಗಿದೆ.

RELATED ARTICLES

Latest News