Saturday, July 27, 2024
Homeರಾಜ್ಯವಿಧಾನಪರಿಷತ್‌ ಚುನಾವಣೆ : ಜೆಡಿಎಸ್‌‍ ಅಭ್ಯರ್ಥಿಯಾಗಿ ಜವರಾಯಿಗೌಡ ಕಣಕ್ಕೆ

ವಿಧಾನಪರಿಷತ್‌ ಚುನಾವಣೆ : ಜೆಡಿಎಸ್‌‍ ಅಭ್ಯರ್ಥಿಯಾಗಿ ಜವರಾಯಿಗೌಡ ಕಣಕ್ಕೆ

ಬೆಂಗಳೂರು, ಜೂ.3- ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್‌‍ ಅಭ್ಯರ್ಥಿಯಾಗಿ ಟಿ.ಎನ್‌.ಜವರಾಯಿಗೌಡ ಅವರನ್ನು ಕಣಕ್ಕಿಳಿಸಲಾಗಿದೆ. ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಸೇರಿದಂತೆ ನಾಲ್ಕು ಬಾರಿ ಜೆಡಿಎಸ್‌‍ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜವರಾಯಿಗೌಡ ಅವರಿಗೆ ಈವರೆಗೂ ಶಾಸನ ಸಭೆ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ.

ವಿಧಾನಪರಿಷತ್‌ ಚುನಾವಣೆ ಅವರ ಅದೃಷ್ಟವನ್ನು ಖುಲಾಯಿಸುವಂತೆ ಮಾಡಿದೆ. ಜೆಡಿಎಸ್‌‍ನ ನಿಷ್ಠಾವಂತ ಕಾರ್ಯಕರ್ತರಾಗಿದ್ದಾರೆ. ಇವರ ಪತ್ನಿ ಗಾಯತ್ರಿ ಜವರಾಯಿಗೌಡ ದೊಡ್ಡಬಿದ್ರಿಕಲ್ಲಿನಿಂದ ಬಿಬಿಎಂಪಿಯ ಸದಸ್ಯೆಯಾಗಿಯೂ ಕೆಲಸ ಮಾಡಿದ್ದರು.

ಇಂದು ನಾಮಪತ್ರ ಸಲ್ಲಿಕೆಯ ವೇಳೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಖುದ್ದು ಹಾಜರಿದ್ದರು.ಜೆಡಿಎಸ್‌‍ನ ಶಾಸಕಾಂಗ ಕಚೇರಿಗೆ ಆಗಮಿಸಿದ ಎಂ.ಟಿ.ಕೃಷ್ಣಪ್ಪ ಸೇರಿದಂತೆ ಹಲವು ಶಾಸಕರು ಜವರಾಯಿಗೌಡರ ನಾಮಪತ್ರಕ್ಕೆ ಸೂಚಕರಾಗಿ ಸಹಿ ಮಾಡಿದರು.

RELATED ARTICLES

Latest News