Monday, December 2, 2024
Homeರಾಜ್ಯವಕ್ಫ್ ವಿವಾದ : ಪ್ರಧಾನಿಗೆ ಪತ್ರ ಬರೆದ ಯತ್ನಾಳ್‌

ವಕ್ಫ್ ವಿವಾದ : ಪ್ರಧಾನಿಗೆ ಪತ್ರ ಬರೆದ ಯತ್ನಾಳ್‌

ಬೆಂಗಳೂರು,ನ.1-ರಾಜ್ಯಾದ್ಯಂತ ವಕ್ಫ್ ಆಸ್ತಿ ವಿವಾದ ತಾರಕಕ್ಕೇರಿರುವುದರ ಬೆನ್ನಲ್ಲೇ ವಕ್‌್ಪ ಆಸ್ತಿಯನ್ನು ರಾಷ್ಟ್ರೀಕರಣಗೊಳಿಸಿ ಸಮಾಜ ಸೇವೆಗೆ ಬಳಸಲು ತುರ್ತು ಕಾನೂನು ಕ್ರಮ ತೆಗೆದುಕೊಳ್ಳುವಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಮೂರು ಪುಟಗಳ ಪತ್ರ ಬರೆದಿರುವ ಯತ್ನಾಳ್‌, ವಕ್‌್ಫ ಬೋರ್ಡ್‌ನಿಂದ ಭಾರತೀಯರಿಗೆ ಅನ್ಯಾಯವಾಗುತ್ತಿದ್ದು, ವಕ್‌್ಫ ಆಸ್ತಿಯನ್ನು ರಾಷ್ಟ್ರೀಯ ಸಂಪತ್ತನ್ನಾಗಿ ಘೋಷಿಸುವಂತೆ ಕೋರಿದ್ದಾರೆ.

ಪತ್ರದಲ್ಲಿ ವಕ್‌್ಫ ಬೋರ್ಡ್‌ನಿಂದಾಗಿ ಜಮೀನು ಮಾಲೀಕರು, ರೈತರಿಗೆ ತೊಂದರೆಯಾಗುತ್ತಿದೆ. ರೈತರು, ಜಮೀನು ಮಾಲಿಕರು ಸೇರಿ ಧಾರ್ಮಿಕ ಸಂಸ್ಥೆ, ಮಠ ಮಾನ್ಯಗಳ ಜಮೀನನ್ನು ವಕ್‌್ಫ ಆಕ್ರಮಿಸಿಕೊಳ್ಳುತ್ತದೆ. ವಕ್‌್ಫ ಕಾನೂನು ಅಸಮಾನತೆ, ಕ್ರೂರತೆಯನ್ನು ಒಳಗೊಂಡಿದೆ. ವಕ್‌್ಫ ಬೋರ್ಡ್‌ಗೆ ಅನಿಯಂತ್ರಿತ, ಪರಿಮಿತ ಅಧಿಕಾರ ನೀಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ.

ವಕ್‌್ಫ ಮಂಡಳಿಯ ಗುರಿ ಕೇವಲ ರೈತರಲ್ಲ, ವಕ್‌್ಫ ಆಸ್ತಿ ಎಂದು ಘೋಷಿಸಲ್ಪಟ್ಟ ಅನೇಕ ದೇವಾಲಯಗಳು ಮತ್ತು ಮಠಗಳ ಆಸ್ತಿಗಳನ್ನು ಸಹ ಗಮನಿಸುವುದು ಮುಖ್ಯ. ಒಂದು ಉದಾಹರಣೆಯನ್ನು ಉಲ್ಲೇಖಿಸಲು ಸಿಂಧಗಿ (ವಿಜಯಪುರ ಜಿಲ್ಲೆ) ನಲ್ಲಿರುವ ವಿರಕ್ತ ಮಠದ ಆಸ್ತಿಯನ್ನು 12-13ನೇ ಶತಮಾನದಲ್ಲಿ ರಾಣಿ ಅಬ್ಬಕ್ಕ ಅವರು ದಾನ ಮಾಡಿದರು. ಆದರೆ ವಕ್‌್ಫ 19 ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದಿತು, ಈಗ ವಕ್‌್ಫ ಮಠದ ಒಂದು ಭಾಗವನ್ನು ತಮದು ಎಂದು ಹೇಳಿಕೊಂಡಿದೆ, ಇದು ತರ್ಕಬದ್ಧವಲ್ಲದ ಮತ್ತು ಅನಿಯಂತ್ರಿತವಾಗಿದೆ.

ವಕ್‌್ಫನ ಉದ್ದೇಶವು ಕಲ್ಯಾಣ ಮತ್ತು ಸಮಾಜ ಸೇವೆಯಾಗಿದ್ದರೆ, ಭಾರತವು ಜಾತ್ಯತೀತ ರಾಷ್ಟ್ರವಾಗಿರುವುದರಿಂದ ಪಕ್ಷಪಾತ ಮತ್ತು ಧಾರ್ಮಿಕ ತಾರತಮ್ಯವಿಲ್ಲದೆ ಇದನ್ನು ಮಾಡಬೇಕಾಗಿದೆ. ವಕ್‌್ಫನ ಸ್ವತ್ತುಗಳನ್ನು ರಾಷ್ಟ್ರೀಕರಣಗೊಳಿಸುವುದರಿಂದ ಭಾರತದಲ್ಲಿ ಭೂಮಿಯ ಸಮಾನ ಹಂಚಿಕೆಗೆ ಸಹಾಯವಾಗುತ್ತದೆ ಮತ್ತು ಪಟ್ಟಭದ್ರ ಹಿತಾಸಕ್ತಿಗಳೊಂದಿಗೆ ಭೂಮಿಯ ಕೇಂದ್ರೀಕರಣವನ್ನು ತಪ್ಪಿಸುತ್ತದೆ. ಪ್ರಸ್ತುತ ವಕ್‌್ಫ ಭಾರತದಲ್ಲಿ ರಕ್ಷಣಾ ಮತ್ತು ರೈಲ್ವೇ ನಂತರ ಮೂರನೇ ಅತಿದೊಡ್ಡ ಭೂಮಾಲೀಕರಾಗಿದ್ದಾರೆ.

ಈ ಮೇಲೆ ತಿಳಿಸಿದ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು, ವಕ್‌್ಫನ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಲು ವಿನಂತಿಸುತ್ತಿದ್ದೇನೆ. ಇದರಿಂದ ಆಸ್ಪತ್ರೆಗಳು, ಸಂಶೋಧನಾ ಕೇಂದ್ರಗಳು, ಶಾಲೆಗಳು, ಕಾಲೇಜುಗಳು, ಕ್ರೀಡಾಂಗಣಗಳನ್ನು ನಿರ್ಮಿಸಲು ಉತ್ಪಾದಕ ಉದ್ದೇಶಗಳಿಗಾಗಿ ಬಳಸಬಹುದಾಗಿದೆ, ಇದರಿಂದ ಜನರು ಅದನ್ನು ಜಾತಿ ಮತ್ತು ಭೇದವಿಲ್ಲದೆ ಬಳಸಿಕೊಳ್ಳಬಹುದು ಎಂದು ಹೇಳಿದ್ದಾರೆ.
ಈ ಹಿಂದೆ ಧಾರವಾಡದ ಉಪ್ಪಿನಬೆಟಗೇರಿ ಗ್ರಾಮದ ಸಾಮಾಜಿಕ ಕಾರ್ಯಕರ್ತ ಕೃಷ್ಣಪ್ಪ ಬುದ್ನಿ ಎಂಬುವವರು ಕಳೆದ ವರ್ಷ ರೈತರ ಪಹಣಿಯಲ್ಲಿ ವಕ್‌್ಫ ಬೋರ್ಡ್‌ ಹೆಸರು ಬರುವುದನ್ನು ತಡೆಯುವಂತೆ ಆಗ್ರಹಿಸಿ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದರು.

RELATED ARTICLES

Latest News