Sunday, June 16, 2024
Homeಜಿಲ್ಲಾ ಸುದ್ದಿಗಳುಆಸ್ಪತ್ರೆಯಲ್ಲಿ ಮಹಿಳೆಯರ ಸಾವಿನ ಪ್ರಕರಣ : ಸತ್ಯ ಮುಚ್ಚಿಡುತ್ತಿರುವ ಯತ್ನ ನಡೆಯುತ್ತಿದೆಯಾ..?

ಆಸ್ಪತ್ರೆಯಲ್ಲಿ ಮಹಿಳೆಯರ ಸಾವಿನ ಪ್ರಕರಣ : ಸತ್ಯ ಮುಚ್ಚಿಡುತ್ತಿರುವ ಯತ್ನ ನಡೆಯುತ್ತಿದೆಯಾ..?

ವಿಶೇಷ ವರದಿ
-ರಮೇಶ.ವಿ
ತುಮಕೂರು, ಮೇ 23- ಪಾವಗಡ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಮೂರು ತಿಂಗಳ ಹಿಂದೆ ಫೆಬ್ರವರಿ 22 ರಂದು ನಡೆಸಿದ ಶಸ್ತ್ರಚಿಕಿತ್ಸೆ ನಂತರ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡು ಒಬ್ಬ ಮಹಿಳೆ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ , ಇಬ್ಬರು ಮಹಿಳೆಯರು ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಪಡೆದು ಮೃತಪಟ್ಟಿದ್ದರು. ಇವರ ಸಾವು ಔಷಧಿಗಳ ಗುಣಮಟ್ಟದ ಕೊರತೆಯಿಂದ ಸಂಭವಿಸಿದೆಯೋ, ಮತ್ತ್ಯಾವ ಕಾರಣಗಳಿಗೆ ಸಂಭವಿಸಿದೆ ಎಂಬ ನಿಖರ ಮಾಹಿತಿ ಇನ್ನೂ ಲಭ್ಯವಾಗದಿರುವುದು ಸರ್ಕಾರಿ ವ್ಯವಸ್ಥೆ ಗೆ ಹಿಡಿದ ಕನ್ನಡಿಯಾಗಿದೆ.

ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಈ ದುರ್ಘಟನೆ ನಡೆದು ಆರೋಗ್ಯ ಇಲಾಖೆಯ ರಾಜ್ಯಮಟ್ಟದ ಅಧಿಕಾರಿಗಳ ತನಿಖಾ ತಂಡವು ಪಾವಗಡ ಸರ್ಕಾರಿ ಆಸ್ಪತ್ರೆಗೆ ಬಂದು ಪರಿಶೀಲನೆ ನಡೆಸಿ ಪ್ರಯೋಗಾಲಯ ಮತ್ತು ಶಸ್ತ್ರಚಿಕಿತ್ಸಕ ಕೊಠಡಿ ರೂಮ್‌ ಸ್ವಚ್ಛತೆ ಇಲ್ಲದ ಕಾರಣ ಹಾಗೂ ಯಂತ್ರೋಪಕರಣಗಳನ್ನು ಆಟೋಕ್ಲವ್‌ ಮಾಡಿಲ್ಲದ ಪರಿಣಾಮ ಈ ಘಟನೆ ನಡೆದು ಸೋಂಕು ತಗುಲಿ ಮೃತಪಟ್ಟಿದ್ದಾರೆ.

ರಕ್ತದ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್‌ ಗೆಕಳುಹಿಸಲಾಗಿದೆ,ಮರಣೋತ್ತರ ವರದಿ ಮತ್ತು ಲ್ಯಾಬ್‌ನ ವರದಿ ಮತ್ತು ಎ್‌‍ಎಸ್‌‍ಎಲ್‌ ವರದಿ ಬಂದ ನಂತರವಷ್ಟೇ ಸತ್ಯ ತಿಳಿಯುತ್ತದೆ ಎಂದು ಅಂದಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್‌ ಹೇಳಿಕೆ ನೀಡಿದರು.

ಈ ಘಟನೆ ಖಂಡಿಸಿ ಪಾವಗಡದಲ್ಲಿ ಸಂಘಟನೆಗಳು , ರಾಜಕೀಯ ಮುಖಂಡರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಕಾವು ಹೆಚ್ಚಾದಂತೆ ರಾಜ್ಯಮಟ್ಟದ ಅಧಿ ಕಾರಿಗಳು, ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳು ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ವೈದ್ಯೆ ಡಾ.ಪೂಜಾ, ಪ್ರಯೋಗಲಾಯದ ಕಿರಣ್‌ರನ್ನು ಕೆಲಸದಿಂದ ವಜಾ ಮಾಡಿ, ಆಡಳಿತಾಧಿಕಾರಿ ಡಾ.ಕಿರಣ್‌ ಅವರನ್ನು ಬೇರೆಡೆ ವರ್ಗವಣೆ ಮಾಡಿ,ಅರಿವಳಿಕೆ ತಜ್ಞೆ ಡಾ.ನಮ್ರಾತ,ಹಾಗೂ ಮೆಟ್ರಿಯನ್‌ ನಾಗರತ್ನ ಮತ್ತು ನರ್ಸ್‌ ಮಾರಕ್ಕ ಎಂಬುವವರನ್ನು ಅಮಾನತು ಮಾಡಿದರು.

ಸದರಿ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಒಬ್ಬ ಮಹಿಳೆ ಸಾವು ಸಂಭವಿಸಿದ ನಂತರ ರಾಜ್ಯಮಟ್ಟದ ಅಧಿಕಾರಿಗಳು ಬಂದು ಆಸ್ಪತ್ರೆಯಲ್ಲಿನ ಪ್ರಯೋಗಾಲಯ ಮತ್ತು ಶಸ್ತ್ರಚಿಕಿತ್ಸಕ ಕೊಠಡಿಯಲ್ಲಿನ ಯಂತ್ರೋಪಕರಣಗಳು ಸೇರಿ ಇತರೆ ವಸ್ತುಗಳ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಜಿಲ್ಲಾ ಆಸ್ಪತ್ರೆಯ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸುತ್ತಾರೆ ,ಅಲ್ಲದೇ ಫೆಬ್ರವರಿ 17 ರಂದು ಶಸ್ತ್ರಚಿಕಿತ್ಸಾ ಕೊಠಡಿ ಮತ್ತು ಪ್ರಯೋಗಾಲಯದ ಆಟೋಕ್ಲೇವ್‌ ಮಾಡಿದ ವರದಿ ೆಬ್ರವರಿ 24ರಂದೇ ಅಧಿಕಾರಿಗಳ ಕೈ ಸೇರುತ್ತದೆ.ಈ ವರದಿಯು ನೆಗೆಟಿವ್‌ ಎಂದು ಬಂದಿರುತ್ತದೆ. ಅಂದರೆ ಪ್ರಯೋಗಲಾಯ ಮತ್ತು ಶಸ್ತ್ರಚಿಕಿತ್ಸಾ ಕೊಠಡಿಯಿಂದ ಸಮಸ್ಯೆ ಸಂಭವಿಸಿಲ್ಲ ಎಂಬುದರ ಅರಿವು ಅಧಿಕಾರಿಗಳಿಗೆ ಇರುತ್ತದೆ.

ೆಬ್ರವರಿ 26,ಮತ್ತು 27 ರಂದು ಮತ್ತೆ ಇಬ್ಬರು ಮಹಿಳೆಯರು ಹೆಚ್ಚಿನ ಚಿಕಿತ್ಸೆಗೆಂದು ವಾಣಿವಿಲಾಸಕ್ಕೆ ಸ್ಥಳಾಂತರಗೊಂಡವರು ಮೃತಪಡುತ್ತಾರೆ.ಸಂಘಸಂಸ್ಥೆಗಳು, ರಾಜಕೀಯ ನಾಯಕರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಾಗ ಪ್ರಯೋಗಾಲಯ ಮತ್ತು ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಏನೂ ಸಮಸ್ಯೆ ಇಲ್ಲ, ಎಲ್ಲಾ ವರದಿಗಳು ನೆಗೆಟಿವ್‌ ಇವೆ ಎಂದು ಗೊತ್ತಿದ್ದರೂ ಅಧಿಕಾರಿಗಳು ೆ .27 ರಂದು ವೈದ್ಯರು,ಮೆಟ್ರಿಯನ್‌ ,ಮತ್ತು ನರ್ಸ್‌ ರನ್ನು ಏಕೆ ಅಮಾನತುಗೊಳಿಸಿದರು. ವರದಿ ಕೈ ಸೇರಿ ವೈದ್ಯರ ತಪ್ಪಿಲ್ಲ ಎಂದು ಗೊತ್ತಿದರೂ ಏಕೆ ಅಮಾನತು ಮಾಡಿದರು ಎಂಬ ಅಂಶವು ಸಹ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಇದ್ದರಿಂದ ಯಾರ ರಕ್ಷಣೆಯನ್ನು ಅಧಿಕಾರಿಗಳು ಮಾಡಬೇಕಿತ್ತು ಎಂಬ ಅಂಶ ಬೆಳಕಿಗೆ ಬರಬೇಕಿದೆ.

ಅಂಜಲಿ (ಹೆರಿಗೆ ),ಅನಿತ (ಸಂತಾನಹರಣ ) ಹಾಗೂ ನರಸಮ (ಗರ್ಭಕೋಶ) ಚಿಕಿತ್ಸೆಗೆ ಒಳಗಾಗಿ ಮೃತಪಟ್ಟಿರುತ್ತಾರೆ. ಇವರ ಜೊತೆ ೆಬ್ರವರಿ 22ರಂದು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ ಅಕ್ಕಮ, ಮಂಜುಳಾ, ಮಿಡಿಗೇಶಿ, ಮಂಜುಳಾ, ಮರಿದಾಸನಹಳ್ಳಿ ಹಾಗೂ ಗಂಗಮ ಎಂಬುವವರ ರಕ್ತದ ಮಾದರಿಗಳನ್ನು ಸಂಗ್ರಹಿಸಿ ತುಮಕೂರಿನ ಪ್ರಯೋಗಾಲಯದಲ್ಲಿ ಪರಿಕ್ಷೆಗೆ ಒಳಪಡಿಸಲಾಗಿತ್ತು ಇವರುಗಳ ರಕ್ತದ ಮಾದರಿಗಳ ವರದಿಯು ಸಹ ನೆಗೆಟಿವ್‌ ಎಂದು ಬರುತ್ತವೆ.ಅಲ್ಲಿಗೆ ಪಾವಗಡ ಆಸ್ಪತ್ರೆಯಲ್ಲಿ ಆದ ದುರಂತ ವೈದ್ಯರ ತಪ್ಪಿನಿಂದ ಹಾಗೂ ಸೋಂಕಿನಿಂದ ಅಲ್ಲ ಎಂದು ಸ್ಪಷ್ಟವಾಗುತ್ತದೆ.ಪ್ರಯೋಗಾಲಯದಲ್ಲಿನ ಸೋಂಕಿನಿಂದ ಮೃತಪಟ್ಟಿಲ್ಲ ಎಂಬ ಅಂಶ ತಿಳಿದಿದ್ದರೂ, ಅಂತಿಮ ವರದಿ ಬರದಿದ್ದರೂ ವೈದ್ಯರ ಮೇಲೆ ಕ್ರಮ ಜರುಗಿಸಿರುವುದು ಕೂಡ ಅನುಮಾನ ಹುಟ್ಟಿಹಾಕಿದೆ.

ಮೊದಮೊದಲು ಸೊಂಕಿನಿಂದ ಮೃತಪಟ್ಟಿದ್ದಾರೆ ಎಂದರು,22 ದಿನದಲ್ಲಿ ಎ್‌‍ಎಸ್‌‍ಎಲ್‌ ವರದಿ ಬರುತ್ತದೆ ಎಂದರು.ಮರಣೋತ್ತರ ವರದಿಯಿಂದ ಸತ್ಯ ಬೆಳಕಿಗೆ ಬರುತ್ತದೆ ಎಂದರು. ಶಸ್ತ್ರಚಿಕಿತ್ಸೆಗೆಂದು ಬಂದ ಬಡ ಮಹಿಳೆಯರು ಮೃತಪಟ್ಟು ಮೂರು ತಿಂಗಳಾದರೂ ಮೃತಪಟ್ಟವರ ನಿಖರ ಮಾಹಿತಿ ಜಿಲ್ಲಾ ಆರೋಗ್ಯಾಧಿಕಾರಿಗಳ ಬಳಿ ಇಲ್ಲವೆಂದರೆ ಇವರ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯೋ,ಅಥವಾ ಔಷಧ ತಯಾರಿಕಾ ಕಂಪನಿಗಳನ್ನು ಹಾಗೂ ಆ ಕಂಪನಿಗಳ ಜೊತೆ ಟೆಂಡರ್‌ ಮಾಡಿಕೊಂಡ ಅಽ ಕಾರಿಗಳು ಸೇರಿದಂತೆ ಸ್ವರಕ್ಷಣೆಗೆ ಇಳಿದರಾ ಜಿಲ್ಲಾ ಆರೋಗ್ಯಾಽ ಕಾರಿಗಳು ಎಂಬುದು ಬಹಿರಂಗವಾಗಬೇಕಿದೆ.

ಅನುಮಾನಕ್ಕೆ ಎಡೆ ಮಾಡಿಕೊಟ್ಟಿರುವ ಗ್ಲೂಕೋಸ್‌‍ ಔಷಧಿ ವಾಪಸ್‌‍ :
ಪಾವಗಡ ಆಸ್ಪತ್ರೆ ಮೂವರ ಮಹಿಳೆಯರ ಮರಣ,ಸಿರಾ,ತಿಪಟೂರು ತುಮಕೂರು ನಗರದಲೂ ಇದೇ ಮಾದರಿಯಲ್ಲಿ ಶಸ್ತ್ರಚಿಕಿತ್ಸೆಗೆ ದಾಖಲಾದವರು ಮೃತಪಟ್ಟಿರುವುದನ್ನು ಗಮನಿಸಿದ ಅಧಿಕಾರಿಗಳು 2024ರ ಮಾರ್ಚ್‌ 23ರಂದು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ ದವರು 26.2.9 Ringer Lactate Infusion FFS As per 1500ml ಔಷದವನ್ನು 22-3-2024 ರಿಂದಲೇ ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಮತ್ತು ಎರಡು ಬ್ಯಾಚ್‌ಗ್‌ಳ ಔಷಧವು ಉತ್ತಮ ಗುಣಮಟ್ಟವಲ್ಲವೆಂದು ಘೋಷಣೆ ಮಾಡಿ ಇಷ್ಟೆ ಅಲ್ಲದೇ ಎಲ್ಲಾ ಬ್ಯಾಚ್‌ ಗಳ ಔಷದವನ್ನು ತಂತ್ರಾಂಶದಲ್ಲಿ ಫ್ರೀಜ್‌ ಮಾಡಲು ಸೂಚಿಸಲಾಗಿದೆ.ಈ ಗ್ಲುಕೋಸ್‌‍ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆ ಗಳಲ್ಲಿ ಬಳಕೆ ಮಾಡದೆಂತೆ ಆದೇಶ ನೀಡಲಾಗಿದೆ. ಈ ಔಷಧವನ್ನು ಏನಾದರೂ ಪಾವಗಡ ಆಸ್ಪತ್ರೆಯಲ್ಲಿ ಬಳಸಲಾಗಿತ್ತೇ ಎಂಬ ಅನುಮಾನವು ಮೂಡತೊಡಗಿದೆ.

ಡಿಎಚ್‌ ಓ ಏನು ಹೇಳುತ್ತಾರೆ..? :
ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟವರ ರಕ್ತದಲ್ಲಿ ವಿಷಕಾರಿ (ಟಾಕ್‌ಸೇನಿಯಾ) ಅಂಶಗಳು ಇರಬಹುದು ಎಂಬ ಅಂಶಗಳು ಮೇಲ್ನೋಟಕ್ಕೆ ತಿಳಿದಿದೆ. ಇದನ್ನು ಎ್‌‍ ಎಸ್‌‍ ಎಲ್‌ ನವರು ದೃಢೀಕರಿಸಿ ವರದಿ ನೀಡಬೇಕು. ಮರಣೋತ್ತರ ವರದಿಗಳನ್ನು ಸಹ ಈ ಕಾರಣಕ್ಕೆ ತಡೆಯಿಡಿಯಲಾಗಿದೆ.ಎ್‌‍ ಎಸ್‌‍ ಎಲ್‌ ವರದಿ ಬರುವವರೆಗೂ ಸಾವಿಗೆ ನಿಖರ ಮಾಹಿತಿ ಹೇಳಲು ಸಾಧ್ಯವಾಗದು ಎನ್ನುತ್ತಾರೆ ಡಿಎಚ್‌ಓ ಡಾ.ಮಂಜುನಾಥ್‌‍.

ಖಾಸಗಿ ಆಸ್ಪತ್ರೆಗಳ ಲಾಬಿ :
ಪಾವಗಡ ತಾಲೂಕಿನಲ್ಲಿ ಖಾಸಗಿ ಆಸ್ಪತ್ರೆಗಳ ಲಾಬಿಯು ಜೋರಾಗಿ ಇದೆ.ಸರ್ಕಾರಿ ಆಸ್ಪತ್ರೆಗಳಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಕೊರತೆಯನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಆಸ್ಪತ್ರೆಯವರನ್ನು ನಿಯಂತ್ರಿಸುವವರು ಇಲ್ಲವಾಗಿದೆ. ಪಾವಗಡ ಸರ್ಕಾರಿ ಆಸ್ಪತ್ರೆ ದುರಂತವಾದ ಬಳಿಕೆ ಇಲ್ಲಿನ ಜನ ಖಾಸಗಿ ಈಸ್ಪತ್ರೆಗಳನೇ ಅವಲಂಬಿಸಬೇಕಾಗಿದೆ. ಇನ್ನು ನಕಲಿ ವೈದ್ಯರ ಹಾವಳಿಯಂತೊ ಹೇಳತಿರದಾಗಿದೆ.

ಜಿಲ್ಲೆಯಲ್ಲಿ ಇಲಾಖೆ ಗುರುತಿಸಿರುವ 98 ನಕಲಿ ವೈದ್ಯರ ಪೈಕಿ ಪಾವಗಡ ತಾಲ್ಲೂಕಿನಲೆ 48 ಮಂದಿ ನಕಲಿ ವೈದ್ಯರು ಇದ್ದಾರೆ.ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಇಲ್ಲವೆಂದರೆ ಖಾಸಗಿಯವರಿಗೆ ಹಣ ಮಾಡಲು ಸಾಧ್ಯ ಎಂಬ ಮಾತಂತೆ ಆಸ್ಪತ್ರೆ ದುರಂತದ ಹಿಂದೆ ಖಾಸಗಿ ಈಸ್ಪತ್ರೆಗಳ ಕೈವಾಡವು ಇದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಪಾವಗಡ ಆಸ್ಪತ್ರೆ ದುರಂತದ ಬಗ್ಗೆ ಸತ್ಯಹೊರಬರಬೇಕಿದೆ ಜನರಿಗೆ ಸಾವಿನ ನಿಖರ ಮಾಹಿತಿಯನ್ನು ಸಂಬಂಧಪಟ್ಟ ಇಲಾಖೆಯವರು ನೀಡಬೇಕಿದೆ.

RELATED ARTICLES

Latest News