Sunday, June 16, 2024
Homeರಾಷ್ಟ್ರೀಯಪಕ್ಷದ ನೋಟಿಸ್‌‍ಗೆ ಖಾರವಾಗಿಯೇ ಪ್ರತಿಕ್ರಿಯಿಸಿದ ಜಯಂತ್‌ ಸಿನ್ಹಾ

ಪಕ್ಷದ ನೋಟಿಸ್‌‍ಗೆ ಖಾರವಾಗಿಯೇ ಪ್ರತಿಕ್ರಿಯಿಸಿದ ಜಯಂತ್‌ ಸಿನ್ಹಾ

ನವದೆಹಲಿ,ಮೇ23- ನಾನು ಯಾವುದೇ ಚುನಾವಣಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂದು ಪಕ್ಷ ಬಯಸಿದರೆ, ನೀವು ಖಂಡಿತವಾಗಿಯೂ ನನ್ನನ್ನು ಸಂಪರ್ಕಿಸಬಹುದಿತ್ತು ಎಂದು ಬಿಜೆಪಿ ಸಂಸದ ಜಯಂತ್‌ ಸಿನ್ಹಾ ಪಕ್ಷದ ನೋಟಿಸ್‌‍ಗೆ ತುಸು ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಪ್ರಚಾರಕ್ಕೂ ಬಂದಿಲ್ಲ, ಮತದಾನವನ್ನೂ ಮಾಡಿಲ್ಲ ಎಂದು ಬಿಜೆಪಿ ಶೋಕಾಸ್‌‍ ನೋಟಿಸ್‌‍ ನೀಡಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಜಯಂತ್‌ ಸಿನ್ಹಾ, ವೈಯಕ್ತಿಕ ಬದ್ಧತೆಯಿಂದಾಗಿ ವಿದೇಶದಲ್ಲಿದ್ದ ಕಾರಣ ಅಂಚೆ ಮತಪತ್ರ ಪ್ರಕ್ರಿಯೆಯ ಮೂಲಕ ಮತ ಚಲಾಯಿಸಿದ್ದೇನೆ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಪಕ್ಷದ ಒಬ್ಬ ಹಿರಿಯ , ಸಂಸದ ಅಥವಾ ಜಾರ್ಖಂಡ್‌ ಶಾಸಕರು ನನ್ನ ಬಳಿಗೆ ಬಂದಿಲ್ಲ. ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿಲ್ಲ. ಇದರೊಂದಿಗೆ ಯಾವುದೇ ರ್ಯಾಲಿ ಅಥವಾ ಸಂಘಟನಾ ಸಭೆಗಳಿಗೆ ನನಗೆ ಆಹ್ವಾನ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸೋಮವಾರ ಭಾರತೀಯ ಜನತಾ ಪಕ್ಷವು ಚುನಾವಣಾ ಪ್ರಚಾರದಲ್ಲಿ ಭಾಗವಹಿಸದಿದ್ದಕ್ಕಾಗಿ ಜಯಂತ್‌ ಸಿನ್ಹಾ ಅವರಿಗೆ ಶೋಕಾಸ್‌‍ ನೋಟಿಸ್‌‍ ನೀಡಿತ್ತು. ಹಜಾರಿಬಾಗ್‌ ಲೋಕಸಭಾ ಕ್ಷೇತ್ರದಿಂದ ಮನೀಶ್‌ ಜೈಸ್ವಾಲ್‌ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ ನಂತರ ಇದೆಲ್ಲಾ ಬೆಳವಣಿಗೆಗಳು ನಡೆದಿವೆ.

ಮಾಜಿ ಕೇಂದ್ರ ಹಣಕಾಸು ಸಚಿವ ಯಶವಂತ್‌ ಸಿನ್ಹಾ ಅವರ ಪುತ್ರ ಜಯಂತ್‌ ಅವರು ಹಜಾರಿಬಾಗ್‌‍ನ ಪ್ರಸ್ತುತ ಸಂಸದರಾಗಿದ್ದಾರೆ. ಹಜಾರಿಬಾಗ್‌ ಲೋಕಸಭಾ ಕ್ಷೇತ್ರದಿಂದ ಮನೀಶ್‌ ಸಿನ್ಹಾ ಅವರನ್ನು ಅಭ್ಯರ್ಥಿಯಾಗಿ ಪಕ್ಷ ಘೋಷಿಸಿದಾಗಿನಿಂದ ನೀವು ಸಂಘಟನಾ ಕಾರ್ಯ ಮತ್ತು ಚುನಾವಣಾ ಪ್ರಚಾರದಲ್ಲಿ ಆಸಕ್ತಿ ವಹಿಸುತ್ತಿಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆದಿತ್ಯ ಸಾಹು ಅವರು ನೋಟಿಸ್‌‍ನಲ್ಲಿ ತಿಳಿಸಿದ್ದಾರೆ.

ನಿಮ ನಡವಳಿಕೆಯಿಂದ ಪಕ್ಷದ ವರ್ಚಸ್ಸು ಹಾಳಾಗಿದೆ. ಎರಡು ದಿನಗಳಲ್ಲಿ ಜಯಂತ್‌ ಸಿನ್ಹಾ ಅವರಿಂದ ಪಕ್ಷ ಸ್ಪಷ್ಟನೆ ಕೇಳಿತ್ತು. ಪಕ್ಷಕ್ಕೆ ಬರೆದ ಎರಡು ಪುಟಗಳ ಪತ್ರದಲ್ಲಿ ಸಿನ್ಹಾ ತಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ ಮತ್ತು ವೈಯಕ್ತಿಕ ಕೆಲಸದ ನಿಮಿತ್ತ ವಿದೇಶ ಪ್ರವಾಸದಲ್ಲಿರುವುದರಿಂದ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಿರುವುದಾಗಿ ಹೇಳಿದ್ದಾರೆ. ಹೀಗಾಗಿ ನಾನು ಮತದಾನದ ಜವಾಬ್ದಾರಿಯನ್ನು ನಿರ್ವಹಿಸಿಲ್ಲ ಎಂದು ನೀವು ಆರೋಪಿಸಿರುವುದು ತಪ್ಪು ಎಂದು ಸಿನ್ಹಾ ಸಮರ್ಥಿಸಿಕೊಂಡಿದ್ದಾರೆ.

RELATED ARTICLES

Latest News