Saturday, May 4, 2024
Homeರಾಜ್ಯರಾಜ್ಯದ ಮೊದಲ ಹಂತದ ಚುನಾವಣೆಯಲ್ಲಿ ಕರ್ತವ್ಯನಿರತ ಸಿಬ್ಬಂದಿಗಳಿಂದ ಶೇ.89.95 ರಷ್ಟು ಮತದಾನ

ರಾಜ್ಯದ ಮೊದಲ ಹಂತದ ಚುನಾವಣೆಯಲ್ಲಿ ಕರ್ತವ್ಯನಿರತ ಸಿಬ್ಬಂದಿಗಳಿಂದ ಶೇ.89.95 ರಷ್ಟು ಮತದಾನ

ಬೆಂಗಳೂರು,ಏ.23- ರಾಜ್ಯದ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನಡೆದ ಅಗತ್ಯ ಸೇವೆಗಳ ಇಲಾಖೆಗಳ ಸಿಬ್ಬಂದಿಗಳ ಮತದಾನದಲ್ಲಿ ಶೇ.89.95 ರಷ್ಟು ಮತದಾರರು ಮತ ಚಲಾಯಿಸಿದ್ದಾರೆ.

ಏ.26 ರಂದು ಮತದಾನ ನಡೆಯುವ ಕ್ಷೇತ್ರಗಳಿಗೆ ಸಂಬಂಸಿದಂತೆ ಅಗತ್ಯ ಸೇವೆಗಳ ಇಲಾಖೆಗಳ ಸಿಬ್ಬಂದಿಗಳಿಗೆ ಏ.19 ರಿಂದ ಏ.21 ರವರೆಗೆ ಮತದಾನ ಮಾಡಲು ಅಂಚೆ ಮತದಾನ ಕೇಂದ್ರಗಳನ್ನು ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ತೆರೆಯಲಾಗಿತ್ತು.

ಈ ಅವಧಿಯಲ್ಲಿ 5,90,355 ಮತದಾರರಲ್ಲಿ 53,104 ಮತದಾರರು ಅಂಚೆ ಮತದಾನ ಕೇಂದ್ರಗಳಲ್ಲಿ ತಮ್ಮ ಮತಗಳನ್ನು ಚಲಾಯಿಸಿದ್ದಾರೆ ಎಂದು ರಾಜ್ಯ ಮುಖ್ಯಚುನಾವಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

RELATED ARTICLES

Latest News