Saturday, April 13, 2024
Homeರಾಜ್ಯಒಂದೇ ವಾರದಲ್ಲಿ 9.64 ಕೋಟಿ ನಗದು, ಕೋಟ್ಯಂತರ ಮೌಲ್ಯದ ಚಿನ್ನಾಭರಣ ಜಪ್ತಿ

ಒಂದೇ ವಾರದಲ್ಲಿ 9.64 ಕೋಟಿ ನಗದು, ಕೋಟ್ಯಂತರ ಮೌಲ್ಯದ ಚಿನ್ನಾಭರಣ ಜಪ್ತಿ

ಬೆಂಗಳೂರು, ಮಾ.23- ಪ್ರಸಕ್ತ ಲೋಕಸಭಾ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಾದ ಆರೇಳು ದಿನಗಳಲ್ಲಿ ರಾಜ್ಯದಲ್ಲಿ 9, 64, 91, 063 ರೂ. ವನ್ನು ಜಪ್ತಿ ಮಾಡಿದ್ದು, ಕೋಟ್ಯಂತರ ಮೌಲ್ಯದ ಚಿನ್ನಾಭರಣ, ಉಚಿತ ಉಡು ಗೊರೆಯನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಒಟ್ಟು 36,41,21,534 ರೂ. ಮೌಲ್ಯದ ಚಿನ್ನ, ಬೆಳ್ಳಿ, ವಜ್ರದ ಆಭರಣಗಳನ್ನು ವಶಪಡಿಸಿಕೊಂಡಿದ್ದು, 402 FIR ಪೊಲೀಸರು ದಾಖಲಿಸಿದ್ದಾರೆ.

ಭಾರತದ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ಷಿಪ್ರ ಪಡೆಗಳು, ಸ್ಥಿರ ಕಣ್ಗಾವಲು ತಂಡಗಳು, ಪೊಲೀಸ್ ಹಾಗೂ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಈ ಪ್ರಮಾಣದ ನಗದು ಮತ್ತು ಚಿನ್ನಾಭರಣಗಳನ್ನು ನಿನ್ನೆಯ ವರೆಗೆ ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ಚುನಾವಣೆ ಘೋಷಣೆಯಾದ ನಂತರ ರಾಜ್ಯದಲ್ಲಿ 65,432 ಶಸಾಸಗಳನ್ನು ಠೇವಣಿ ಮಾಡಲಾಗಿದ್ದು, 831 ಶಸ್ತ್ರಸಗಳನ್ನು ವಶಪಡಿಸಿಕೊಳ್ಳಲಾಗಿದೆ. 8 ಶಸ್ತ್ರಸ ಪರವಾನಗಿಯನ್ನು ರದ್ದುಗೊಳಿಸಲಾಗಿದೆ. ಮತದಾರರಿಗೆ ಹಂಚುವ ಉದ್ದೇಶದ 15,67,335 ರೂ. ಮೌಲ್ಯದ ಉಚಿತ ಉಡುಗೊರೆಯನ್ನು ಜಪ್ತಿ ಮಾಡಲಾಗಿದೆ.2.08 ಕೆಜಿ ಪ್ರಮಾಣದ 1,27,36,480 ರೂ. ಮೌಲ್ಯದ ಚಿನ್ನವನ್ನು ಪೊಲೀಸರು, ಆದಾಯ ತೆರಿಗೆ ಇಲಾಖಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

46.33 ಕೆಜಿ ತೂಕದ 21,47,240 ರೂ. ಮೌಲ್ಯದ ಬೆಳ್ಳಿ ವಸ್ತುಗಳನ್ನು ಹಾಗೂ 21.17 ಕ್ಯಾರೆಟ್ನ 9 ಲಕ್ಷ ಮೌಲ್ಯದ ವಜ್ರಾಭರಣಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟು 36,41,21,534ರೂ. ಮೌಲ್ಯದ ಚಿನ್ನ, ಬೆಳ್ಳಿ, ವಜ್ರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಚುನಾವಣೆಯ ನೀತಿ ಸಂಹಿತೆ ಮಾರ್ಚ್ 16ರಿಂದ ಜಾರಿಗೆ ಬಂದಿದ್ದು ನಿನ್ನೆಯವರೆಗೆ 22,85,43,896 ರೂ. ಮೌಲ್ಯದ ಮದ್ಯವನ್ನು ಜಪ್ತಿ ಮಾಡಲಾಗಿದೆ. ಒಟ್ಟು 7,20,764 ಲೀಟರ್ ಮದ್ಯವನ್ನು ತಪಾಸಣೆ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾಗಿದೆ, ಅದೇ ರೀತಿ 52.12 ಕೆಜಿ ಡ್ರಗ್ಸ್ ವಶಪಡಿಸಿಕೊಂಡಿದ್ದು, ಇದರ ಮೌಲ್ಯ 53,37,370 ರೂ. ಆಗಲಿದೆ ಎಂದು ಅಂದಾಜಿಸಲಾಗಿದೆ.

ಅಬಕಾರಿ ಇಲಾಖೆಯ ಅಪರಾಧದಡಿಯಲ್ಲಿ 471 ಪ್ರಕರಣಗಳನ್ನು ದಾಖಲಿಸಿದ್ದು, ಪರವಾನಗಿ ಉಲ್ಲಂಸಿದ 359 ಪ್ರಕರಣಗಳನ್ನು ದಾಖಲಿಸಿದೆ. ಜೊತೆಗೆ 284 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬೆಂಗಳೂರಿನ ಸಂಪಂಗಿರಾಮನಗರದಲ್ಲಿ 28,75,400 ರೂ. ಕೋರಮಂಗಲದಲ್ಲಿ 24,00,000 ರೂ, ಮತ್ತು 86,50,000 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ 71,16,480 ಮೌಲ್ಯದ 983.71 ಗ್ರಾಂ ಚಿನ್ನ, 9,00,000 ಮೌಲ್ಯದ 21.17 ಕ್ಯಾರೆಟ್ ವಜ್ರವನ್ನು ಮುರುಗೇಶ್ ಪಾಳ್ಯದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

RELATED ARTICLES

Latest News