Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-05-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (18-05-2026)

Today's Horoscope

ನಿತ್ಯ ನೀತಿ : ಋಣ ಇದ್ದರೆ ಬೆಟ್ಟದ ತುದಿಯಲ್ಲಿರುವ ಹಣ್ಣೂ ನಮ್ಮ ಪಾಲಾಗುತ್ತದೆ, ಋಣ ಇಲ್ಲದಿದ್ದರೆ ಅಂಗೈಯಲ್ಲಿರುವ ಹಣ್ಣೂ ಜಾರಿ ಬಿದ್ದು ಅನ್ಯರ ಪಾಲಾಗುತ್ತದೆ.

ಪಂಚಾಂಗ : ಸೋಮವಾರ, 18-05-2026
ಪರಾಭವ ನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರಗ್ರೀಷ / ಮಾಸ: ಅಧಿಕ / ಜ್ಯೇಷ್ಠ / ಪಕ್ಷ: ಕೃಷ್ಣ / ತಿಥಿ: ದ್ವಿತೀಯಾ / ನಕ್ಷತ್ರ: ರೋಹಿಣಿ / ಯೋಗ: ಸುಕರ್ಮಾ / ಕರಣ: ಬಾಲವ
ಸೂರ್ಯೋದಯ – ಬೆ.5.55
ಸೂರ್ಯಾಸ್ತ – 06.39
ರಾಹುಕಾಲ – 7.30-9.00
ಯಮಗಂಡ ಕಾಲ – 10.30-12.00
ಗುಳಿಕ ಕಾಲ – 1.30-3.00

ರಾಶಿಭವಿಷ್ಯ :
ಮೇಷ: ತಂದೆ-ತಾಯಿಗೆ ಮಕ್ಕಳ ಸಲುವಾಗಿ ವಿದೇಶ ಪ್ರಯಾಣ ಮಾಡುವ ಅವಕಾಶ ದೊರೆಯಲಿದೆ.
ವೃಷಭ: ಪಿತ್ರಾರ್ಜಿತ ಆಸ್ತಿ ದೊರೆಯುವ ಸಾಧ್ಯತೆ ಗಳಿವೆ. ಮಕ್ಕಳು ವಿದ್ಯಾಭ್ಯಾಸದ ಕಡೆ ಗಮನ ಹರಿಸಿ.
ಮಿಥುನ: ಉಸಿರಾಟದ ತೊಂದರೆ ಇರುವವರು ಎಚ್ಚರಿಕೆ ಯಿಂದಿದ್ದು, ಸೂಕ್ತ ಚಿಕಿತ್ಸೆ ಪಡೆಯುವುದು ಒಳಿತು.

ಕಟಕ: ಅಪರಿಚಿತರೊಂದಿಗೆ ವ್ಯವಹರಿಸುವಾಗ ಜಾಗರೂಕರಾಗಿರುವುದು ಬಹಳ ಸೂಕ್ತ.
ಸಿಂಹ: ವೈಯಕ್ತಿಕ ವಿಚಾರಗಳ ಬಗ್ಗೆ ಹೆಚ್ಚು ಗಮನ ಹರಿಸಿ. ಉತ್ತಮ ಆದಾಯ ಬರಲಿದೆ.
ಕನ್ಯಾ: ನೌಕರರಿಗೆ ಕಠಿಣ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ಸಿಗುವ ಸಾಧ್ಯತೆಗಳಿವೆ.

ತುಲಾ: ಕೆಲವೊಂದು ವಿಷಯಗಳ ಪರಿಹಾರಕ್ಕಾಗಿ ಸಂಬಂ ಕರ ಮನೆಗೆ ಹೋಗುವಿರಿ.
ವೃಶ್ಚಿಕ: ಮಹಿಳೆಯರು ಭಾವೋದ್ವೇಗದಿಂದ ಮಾತನಾಡಿದರೆ ಅವರ ಗೌರವಕ್ಕೆ ಚ್ಯುತಿ ಬರಬಹುದು.
ಧನುಸ್ಸು: ಗೃಹ ನಿರ್ಮಾಣಕ್ಕೆ ಇದ್ದ ಅಡ್ಡಿ-ಆತಂಕಗಳು ದೂರವಾಗಲಿವೆ. ದೂರ ಪ್ರಯಾಣ ಮಾಡುವಿರಿ.

ಮಕರ: ಯಂತ್ರೋಪಕಣಗಳನ್ನು ದುರಸ್ತಿ ಮಾಡುವ ವರಿಗೆ ಹೆಚ್ಚು ಕೆಲಸ ದೊರೆತು ಆದಾಯ ಸಿಗಲಿದೆ.
ಕುಂಭ: ಸರ್ಕಾರದಿಂದ ಬರಬೇಕಿದ್ದ ಹಣ ಬರಲಿದೆ. ಸಮಸ್ಯೆಗಳು ದೂರವಾಗಲಿವೆ.
ಮೀನ: ಉದ್ಯಮಿಗಳು ಹೊಸ ಶಾಖೆ ತೆರೆಯಲು ಬೇಕಾದ ಅನುಕೂಲಗಳು ಒದಗುತ್ತವೆ.

RELATED ARTICLES

Latest News